ನಿಧಾನಗತಿಯ ಆರಂಭದ ಬ್ಯಾಟಿಂಗ್ ಅಬ್ಬರಿಸಿದ ಕ್ಯಾಪ್ಟನ್ ಫಾಫ್ಫಾಫ್ ಡು ಪ್ಲೆಸಿಸ್ ಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ12 ರನ್ ಗಳಿಂದ ಶತಕ ವಂಚಿತರಾದ ಫಾಫ್ ಡು ಪ್ಲೆಸಿಸ್
ಮುಂಬೈ (ಮಾ. 27): ದಕ್ಷಿಣ ಆಫ್ರಿಕಾದ (South Africa) ಸೂಪರ್ ಸ್ಟಾರ್ ಬ್ಯಾಟ್ಸ್ ಮನ್, ಆರ್ ಸಿಬಿ (RCB) ಹೊಸ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ತಮ್ಮ ಮೊದಲ ಇನ್ನಿಂಗ್ಸ್ ನಲ್ಲಿಯೇ ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. 12ನೇ ಓವರ್ ವೇಳೆಗೆ 38 ಎಸೆತಗಳಲ್ಲಿ 35 ರನ್ ಬಾರಿಸಿದ್ದ ಫಾಫ್ ಡು ಪ್ಲೆಸಿಸ್, ನಂತರದ 19 ಎಸೆತಗಳಲ್ಲಿ 53 ರನ್ ಸಿಡಿಸುವ ಮೂಲಕ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ (41*ರನ್, 29 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ದಿನೇಶ್ ಕಾರ್ತಿಕ್ (32*ರನ್, 14 ಎಸೆತ, 3 ಬೌಂಡರಿ, 3 ಸಿಕ್ಸರ್) ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಭಾನುವಾರ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ, ನಾಯಕ ಫಾಫ್ ಡು ಪ್ಲೆಸಿಸ್ (88 ರನ್, 57 ಎಸೆತ, 3 ಬೌಂಡರಿ, 7 ಸಿಕ್ಸರ್) ಅವರ ಅತ್ಯಾಕರ್ಷಕ ಇನ್ನಿಂಗ್ಸ್ ಮೂಲಕ ದೊಡ್ಡ ಮೊತ್ತ ಪೇರಿಸಲು ಯಶಸ್ವಿಯಾಯಿತು. ಆರಂಭದಲ್ಲಿ ರನ್ ಗಳಿಸಲು ಪರದಾಡಿದ ಫಾಫ್ ಡು ಪ್ಲೆಸಿಸ್, ಒಮ್ಮೆ ಬ್ಯಾಟಿಂಗ್ ನಲ್ಲಿ ಲಯ ಕಂಡುಕೊಂಡ ಬಳಿಕ ಪಂಜಾಬ್ ಕಿಂಗ್ಸ್ (PBKS) ತಂಡದ ಬೌಲರ್ ಗಳ ಚಳಿ ಬಿಡಿಸಿದರು. ಇದರಿಂದಾಗಿ ಆರ್ ಸಿಬಿ 2 ವಿಕೆಟ್ ಗೆ 205 ರನ್ ಪೇರಿಸಲು ಯಶಸ್ವಿಯಾಯಿತು.
ನಾಯಕತ್ವದ ಜವಾಬ್ದಾರಿ ಇರದ ಕಾರಣ ವಿರಾಟ್ ಕೊಹ್ಲಿ, ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು ಎನ್ನುವ ನಿರೀಕ್ಷೆ ಇಡಲಾಗಿತ್ತು. ಆದರೆ, ಯಾವುದೇ ಸಾಹಸಗಳಿಗೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಅವಕಾಶ ನೀಡಲಿಲ್ಲ. ಅನುಭವಿ ಫಾಫ್ ಡು ಪ್ಲೆಸಿಸ್ ಜೊತೆ ಯುವ ಬ್ಯಾಟ್ಸ್ ಮನ್ ಅನುಜ್ ರಾವತ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್ ನಲ್ಲಿ ಕೇವಲ ಒಂದು ರನ್ ಗಳಿಸಿದ್ದ ಆರ್ ಸಿಬಿ ನಂತರದ ಎರಡು ಓವರ್ ಗಳಲ್ಲಿ ಬಿರುಸಿನ ಆಟವಾಡಿದ್ದರಿಂದ ಮೂರು ಓವರ್ ಗಳ ಮುಕ್ತಾಯಕ್ಕೆ 23 ರನ್ ಬಾರಿಸಿತ್ತು. ಈ ಹಂತದಲ್ಲಿ ಶಾರುಖ್ ಖಾನ್, ಫಾಫ್ ಡು ಪ್ಲೆಸಿಸ್ ಅವರ ಸುಲಭದ ಕ್ಯಾಚ್ ಕೈಚೆಲ್ಲಿದ್ದು ಕೊನೆಗೆ ಅಪಾಯಕಾರಿಯಾಗಿ ಪರಿಣಮಿಸಿತು.
IPL 2022 DC vs MI ಸಂಪ್ರದಾಯ ಮುಂದುವರಿಸಿದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು!
ಆರಂಭದ ಕೆಲ ಸಂಕಷ್ಟದ ಓವರ್ ಗಳ ಬಳಿಕ ಮೊದಲ ವಿಕೆಟ್ ಗೆ 50 ರನ್ ಜೊತೆಯಾಟವಾಡಲು ಆರಂಭಿಕ ಜೋಡಿ ಯಶಸ್ವಿಯಾಗಿತ್ತು. ಪವರ್ ಪ್ಲೇ ಮುಗಿದ ಬೆನ್ನಲ್ಲಿ ದಾಳಿಗಿಳಿದ ರಾಹುಲ್ ಚಹರ್, ಕೊನೆಯ ಅನುಜ್ ರಾವತ್ (21ರನ್, 20 ಎಸೆತ 2 ಬೌಂಡರಿ, 1 ಸಿಕ್ಸರ್) ಅವರನ್ನು ಬೌಲ್ಡ್ ಮಾಡಿದರು. ಆ ಬಳಿಕ ನಡೆದಿದ್ದು ಕೊಹ್ಲಿ ಹಾಗೂ ಪ್ಲೆಸಿಸ್ ಬ್ಯಾಟಿಂಗ್ ಆರ್ಭಟ. 2ನೇ ವಿಕೆಟ್ ಗೆ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಆಕರ್ಷಕ 110 ರನ್ ಜೊತೆಯಾಟವಾಡಿ ಪಂಜಾಬ್ ಕಿಂಗ್ಸ್ ತಂಡವನ್ನು ಕಾಡಿತು. 18ನೇ ಓವರ್ ನಲ್ಲಿ ಫಾಫ್ ಡು ಪ್ಲೆಸಿಸ್ ನಿರ್ಗಮನ ಕಂಡ ಬಳಿಕ ಮೈದಾನಕ್ಕೆ ಇಳಿದ ದಿನೇಶ್ ಕಾರ್ತಿಕ್ (Dinesh Karthik), ಒಡೇನ್ ಸ್ಮಿತ್ ಅವರ ಒಂದೇ ಓವರ್ ನಲ್ಲಿ 18 ರನ್ ಸಿಡಿಸುವ ಮೂಲಕ ಪಂಜಾಬ್ ತಂಡಕ್ಕೆ ಆಘಾತ ನೀಡಿದರು.
IPL 2022 ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಪಂಜಾಬ್, ಡುಪ್ಲೆಸಿಸ್ ತಂಡದಲ್ಲಿ ಯಾರಿಗೆ ಸ್ಥಾನ?
3 ಸಾವಿರ ಐಪಿಎಲ್ ರನ್ ಪೂರ್ತಿ ಮಾಡಿದ ಪ್ಲೆಸಿಸ್: ಫಾಫ್ ಡು ಪ್ಲೆಸಿಸ್ ಈ ಪಂದ್ಯದ ಮೂಲಕ 3 ಸಾವಿರ ಐಪಿಎಲ್ ರನ್ ಪೂರ್ತಿ ಮಾಡಿದ ದಾಖಲೆ ಮಾಡಿದರು. ಐಪಿಎಲ್ ನಲ್ಲಿ ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ 3 ಸಾವಿರ ರನ್ ಬಾರಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಜೊತೆ ಜಂಟಿ ಮೂರನೇ ಸ್ಥಾನ ಪಡೆದುಕೊಂಡರು. ಕ್ರಿಸ್ ಗೇಲ್ 75 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೆಎಲ್ ರಾಹುಲ್ 80 ಇನ್ನಿಂಗ್ಸ್ ಆಡಿದ್ದರು. ಡೇವಿಡ್ ವಾರ್ನರ್ ಹಾಗೂ ಫಾಫ್ ಡು ಪ್ಲೆಸಿಸ್ 94ನೇ ಇನ್ನಿಂಗ್ಸ್ ನಲ್ಲಿ ಈ ಮೈಲಿಗಲ್ಲು ನೆಟ್ಟಿದ್ದಾರೆ.
