Asianet Suvarna News Asianet Suvarna News

IPL 2022 ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ

ಕನ್ನಡಿಗರ ನೇತೃತ್ವದಲ್ಲಿರುವ ಎರಡು ಐಪಿಎಲ್ ತಂಡಗಳಾದ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಇದೇ ಮೊದಲ ಬಾರಿಗೆ ಎದುರಾಗುತ್ತಿವೆ. ಪ್ಲೇ ಆಫ್ ಗೆ ಏರುವ ನಿಟ್ಟಿನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನದ ಆಟವನ್ನು ಎದುರು ನೋಡುತ್ತಿದೆ.

IPL 2022 PBKS vs LSG Punjab Kings have won the toss and have opted to field vs Lucknow Super Giants san
Author
Bengaluru, First Published Apr 29, 2022, 7:06 PM IST

ಪುಣೆ (ಏ. 29): ಅಪ್ತ ಸ್ನೇಹಿತರ ನಡುವೆ 15ನೇ ಆವೃತ್ತಿಯ ಐಪಿಎಲ್ (IPL 2022) ನ ಸ್ಪೆಷಲ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಮಯಾಂಕ್ ಅಗರ್ವಾಲ್ (Mayank Agarwal) ನೇತೃತ್ವದ ಪಂಜಾಬ್ ಕಿಂಗ್ಸ್ (Punjab Kings) ಹಾಗೂ ಕೆಎಲ್ ರಾಹುಲ್ (KL Rahul) ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants)ತಂಡಗಳು ಇಂದು ಮುಖಾಮುಖಿಯಾಗಲಿದೆ. ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಪಂದ್ಯಕ್ಕಾಗಿ ಪಂಜಾಬ್ ಕಿಂಗ್ಸ್ ತಂಡ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೊಂದೆಡೆ ಕೆಎಲ್ ರಾಹುಲ್ ಟೀಮ್, ಮನೀಷ್ ಪಾಂಡೆ ಬದಲಿಗೆ ಆವೇಶ್ ಖಾನ್ ರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಸಂದೀಪ್ ಶರ್ಮಾ, ಅರ್ಶ್‌ದೀಪ್ ಸಿಂಗ್

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್ : ಕ್ವಿಂಟನ್ ಡಿ ಕಾಕ್( ವಿ.ಕೀ), ಕೆಎಲ್ ರಾಹುಲ್(ನಾಯಕ), ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್

ಇಬ್ಬನಿ ಇಲ್ಲದಿರುವಾಗ, ಎರಡೂ ತಂಡಗಳಿಗೂ ಸಮ ಪ್ರಮಾಣದ ಅವಕಾಶ ಈ ಮೈದಾನದಲ್ಲಿ ಸಿಗುತ್ತದೆ. ಈ ಹಿಂದೆ ನಾನು ಈ ಮೈದಾನದಲ್ಲಿ ಆಡಿದ್ದೇನೆ. ನಮ್ಮ ಬ್ಯಾಟಿಂಗ್ ವಿಭಾಗ ಮತ್ತಷ್ಟು ಚುರುಕಾಗಬೇಕು. ಮನೀಷ್ ಪಾಂಡೆ ಪಂದ್ಯವನ್ನು ತಪ್ಪಿಸಿಕೊಂಡಿದ್ದು, ಅವರ ಬದಲು ಆವೇಶ್ ಖಾನ್ ತಂಡಕ್ಕೆ ಬಂದಿದ್ದಾರೆ. ಇದು ಹೆಚ್ಚಿನ ಬೌಂಡರಿ ಸ್ಕೋರ್ ಮಾಡುವ ಮೈದಾನ. ಹಾಗಾಗಿ ಹೆಚ್ಚುವರಿ ಬೌಲಿಂಗ್ ಆಯ್ಕೆ ಹೊಂದಿರುವುದು ಒಳ್ಳೆಯದು ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ. ಏಳನೇ ಕ್ರಮಾಂಕದಲ್ಲಿ ಜೇಸನ್ ಹೋಲ್ಡರ್ ಗೆ ಬ್ಯಾಟಿಂಗ್ ಮಾಡುವ ಉತ್ತಮ ಅವಕಾಶ ಸಿಗಲಿದೆ. ಎರಡು ಅಂಕಗಳನ್ನು ಪಡೆಯಲು ನಮಗೆ ಸಿಕ್ಕಿರುವ ಅವಕಾಶವಿದು.
ಕೆಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ

ಮೊದಲು ಬೌಲಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ, ಯಾವ ಮೊತ್ತವನ್ನು ಬೆನ್ನಟ್ಟಬೇಕು ಎಂದು ತಿಳಿಯಲು ನಾವು ಬಯಸುತ್ತೇವೆ. ನಮ್ಮ ಲೈನ್‌ಅಪ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇಲ್ಲಿ ಇಬ್ಬನಿ ಬಹಳ ಕಡಿಮೆ ಇರುತ್ತದೆ. ಇದೊಂದು ಸವಾಲಿನ ಪಂದ್ಯವಾಗಿರಲಿದೆ.
ಮಯಾಂಗ್ ಅಗರ್ವಾಲ್, ಪಂಜಾಬ್ ಕಿಂಗ್ಸ್ ನಾಯಕ
 

ನಿಮಗಿದು ಗೊತ್ತೇ?
* 9 ಪಂದ್ಯಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡ ಗೆಲುವು ಕಂಡಿರುವ ಕೇವಲ 2ನೇ ಟಾಸ್ ಇದಾಗಿದೆ. ಉಳಿದೆಲ್ಲಾ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಸೋಲು ಕಂಡಿದೆ.

IPL 2022 ಪಂಜಾಬ್ vs ಲಖನೌ: ಸ್ನೇಹಿತರ ಸವಾಲ್ ಗೆಲ್ಲೋರ್ಯಾರು..?

* ಕೆಎಲ್ ರಾಹುಲ್ ಐಪಿಎಲ್ ನಲ್ಲಿ ರಾಹುಲ್ ಚಾಹರ್ ರನ್ನು ಎದುರಿಸಿದ್ದ ವೇಳೆ 35 ಎಸೆತಗಳಿಂದ 36 ರನ್ ಬಾರಿಸಿದ್ದು, ಒಮ್ಮೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನೊಂದೆಡೆ ಮಾರ್ಕಸ್ ಸ್ಟೋಯಿನಸ್ ಲೆಗ್ ಸ್ಪಿನ್ನರ್ ಗಳ ವಿರುದ್ಧ ಭರ್ಜರಿ ಫಾರ್ಮ್ ಹೊಂದಿದ್ದು, 12 ಎಸೆತಗಳಲ್ಲಿ 32 ರನ್ ಬಾರಿಸಿದ್ದಾರೆ.

IPLನಲ್ಲಿ ಹಲ್​ಚಲ್​ ಎಬ್ಬಿಸಿದ ‘ಜಮ್ಮು ಎಕ್ಸ್​ಪ್ರೆಸ್​​​’ ಉಮ್ರಾನ್​ ಮಲಿಕ್​​​..!

* ಕಗೀಸೋ ರಬಾಡ ವಿರುದ್ಧ ಡಿ ಕಾಕ್ ಆಡಿದ 61 ಎಸೆತಗಳಿಂದ 89 ರನ್ ಬಾರಿಸಿದ್ದು, ಒಮ್ಮೆಯೂ ಔಟಾಗಿಲ್ಲ. ಇನ್ನೊಂದೆಡೆ ಆರ್ಶ್ ದೀಪ್ ಸಿಂಗ್, ಡಿ ಕಾಕ್ ಗೆ ಎಸೆದ 14 ಎಸೆತಗಳಲ್ಲಿ 14 ರನ್ ನೀಡಿದ್ದು 2 ಬಾರಿ ವಿಕೆಟ್ ಉರುಳಿಸಿದ್ದಾರೆ.

Follow Us:
Download App:
  • android
  • ios