IPLನಲ್ಲಿ ಹಲ್​ಚಲ್​ ಎಬ್ಬಿಸಿದ ‘ಜಮ್ಮು ಎಕ್ಸ್​ಪ್ರೆಸ್​​​’ ಉಮ್ರಾನ್​ ಮಲಿಕ್​​​..!

* ಐಪಿಎಲ್‌ನಲ್ಲಿ ಹೊಸ ಸಂಚಲನ ಮೂಡಿಸಿದ ಉಮ್ರಾನ್ ಮಲಿಕ್

* 150+ ಕಿ.ಮೀ ವೇಗದಲ್ಲಿ ಬೌಲಿಂಗ್ ದಾಳಿ ನಡೆಸಿ ಮಿಂಚುತ್ತಿರುವ ಜಮ್ಮು-ಕಾಶ್ಮೀರ ವೇಗಿ

* ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತ ವೇಗಿ

IPL 2022 SunRisers Hyderabad Fast Bowler Umran Malik Raw Pace Has Impressed All kvn

ಬೆಂಗಳೂರು(ಏ.29): IPL ಒಂದು ಕಂಪ್ಲೀಟ್​ ಮನರಂಜನೆಯ ಟೂರ್ನಿ. ಇಲ್ಲಿ ರಣರೋಚಕ ಹೋರಾಟ, ಪ್ಲೇಯರ್ಸ್​ ಗುದ್ದಾಟ, ಪ್ರೇಕ್ಷಕರ ಚೀರಾಟ, ಬ್ಯಾಟರ್​ ಸಿಡಿಸೋ ಮನಮೋಹಕ ಸಿಕ್ಸರ್​​-ಬೌಂಡ್ರಿಗಳ ಮೊರೆತ ಎಲ್ಲವೂ ನೋಡಲು ಕಾಣ ಸಿಗುತ್ತೆ. ಇದಕ್ಕೆ ಈ ಈ ಸಲ ಮತ್ತೊಂದು ಎಲಿಮೆಂಟ್ ಆ್ಯಡ್​ ಆಗಿದೆ. ಅದೇನಂದ್ರೆ ಶರವೇಗಿಗಳ ಬೆಂಕಿಯುಂಡೆಯಂತ ದಾಳಿ ನೋಡುಗರಿಗೆ ಸಖತ್​​ ಮಜಾ ಕೊಡ್ತಿದೆ.

ಹೌದು, ಐಪಿಎಲ್​​ ಅನ್ನೋ ಬ್ಯಾಟರ್​​ಗಳ ಸ್ವರ್ಗದ ಕೂಟದಲ್ಲಿ ಆ್ಯಂಗ್ರಿ ಬೌಲರ್​​ ಓರ್ವ ಧೂಳೆಬ್ಬಿಸಿದ್ದಾನೆ. ಈತನ ಒಂದೊಂದು ಎಸೆತವೂ ಭಯಾನಕ. ಕಣ್ಣು ಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಬೆಂಕಿ ದಾಳಿ ಮೂಲಕ ಎದುರಾಳಿಯ ಹುಟ್ಟಡಗಿಸ್ತಿದ್ದಾನೆ. ಈಗ ಬಂದ ಯಂಗ್ ಕ್ರಿಕೆಟರ್ಸ್​ನಿಂದ ಹಿಡಿದು ಲೆಜೆಂಡ್​ ಅನ್ನಿಸಿಕೊಂಡ ಪ್ಲೇಯರ್ಸ್​ ಎಲ್ಲಾ ಈತನ ಡೆಡ್ಲಿ ದಾಳಿಯ ಬಲೆಗೆ ಬೀಳ್ತಿದ್ದಾರೆ. ಉಸಿರಾಡಲು ಚಾನ್ಸೇ ಕೊಡ್ತಿಲ್ಲ. ಒಂದೇ ಮಾತಲ್ಲಿ ಹೇಳಬೇಕಂದ್ರೆ ವಿಧ್ವಂಸಕ ಬೌಲರ್​​​. ಅಂದಹಾಗೇ ಆ ಮೋಸ್ಟ್​​ ಟೆರರ್​ ಬೌಲರ್​ ಬೌಲರ್ ಮತ್ಯಾರು ಅಲ್ಲ, ಆತನೇ ಜಮ್ಮು ಎಕ್ಸ್​​ಪ್ರೆಸ್​​​ ಉಮ್ರಾನ್​ ಮಲಿಕ್ (Umran Malik)​​​.

153 ಕಿ.ಮೀ ಶರವೇಗದಲ್ಲಿ ಬೌಲಿಂಗ್​​​​, ಎಲ್ಲರೂ ನಿಬ್ಬೆರಗು:

ಉಮ್ರಾನ್​ ಮಲಿಕ್ ಅಲ್ಲ, ಉಮ್ರಾನ್​ ಪೇಸ್​​​ ಕಾ ಮಾಲೀಕ್​​​. ಪ್ರಸಕ್ತ ಐಪಿಎಲ್​​ನಲ್ಲಿ ಈ ಜಮ್ಮು ಎಕ್ಸ್​ಪ್ರೆಸ್​​ ಹಲ್​ಚಲ್​ ಎಬ್ಬಿಸಿದ್ದಾನೆ. ಈತನ ಶರವೇಗದ ದಾಳಿಗೆ ಐಪಿಎಲ್​​ ಲೋಕವೇ ನಿಬ್ಬೆರಗಾಗಿದೆ. 150 ಪ್ಲಸ್​​​​​ ಕಿ.ಮೀ ನಲ್ಲಿ ಬೆಂಕಿ ದಾಳಿ ನಡೆಸಿ ಸೆನ್ಷೆಷನಲ್ ಸ್ಟಾರ್​​ ಆಗಿ ಹೊರಹೊಮ್ಮಿದ್ದಾರೆ. ಈವರೆಗೆ ಆಡಿದ್ದು 8 ಪಂದ್ಯ. 15 ವಿಕೆಟ್​​​ ಪಡೆದು 2ನೇ ಗರಿಷ್ಠ ವಿಕೆಟ್​ ಟೇಕರ್ ಅನ್ನಿಸಿಕೊಂಡಿದ್ದಾರೆ. 22ರ ಮಲಿಕ್​​ ಲೈನ್​​ ಆ್ಯಂಡ್​ ಲೆಂಥ್​​ ಮತ್ತು ಅಕ್ಯೂರೆಸಿ ಅದ್ಭುತವಾಗಿದೆ. ಚೆಂಡಿನ ಮೇಲೆ ನಿಯಂತ್ರಣ ಸಾಧಿಸ್ತಿರೋ ಹೈದ್ರಾಬಾದ್ ತಂಡದ​ ವೇಗಿ 150 ಪ್ಲಸ್​​​ ಕಿ.ಮೀ ನಲ್ಲಿ ದಾಳಿ ನಡೆಸ್ತಿದ್ದಾರೆ. ಗುಜರಾತ್​​​ ವಿರುದ್ಧ ಬೆಂಕಿ ಉಗುಳಿದ ಉಮ್ರಾನ್ ಮಲಿಕ್​​ 25 ರನ್​​ಗೆ 5 ವಿಕೆಟ್​​ ಕಬಳಿಸಿ ಗಮನಸೆಳೆದಿದ್ರು. ಆ ಐದು ವಿಕೆಟ್​​​ ಪೈಕಿ ನಾಲ್ವರನ್ನ ಬೌಲ್ಡ್​  ಮಾಡಿ ನಿಬ್ಬೆರಗಾಗಿಸಿದ್ರು. ಅದ್ರಲ್ಲೂ ವೃದ್ಧಿಮಾನ್​ ಸಾಹರನ್ನ ದಾಖಲೆಯ 153 ಕಿ.ಮೀ ವೇಗದಲ್ಲಿ ಬೌಲ್ಡ್​​​  ಮಾಡಿದ್ರು. 

Wimbledon ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಜೋಕೋವಿಚ್‌ಗೆ ಅನುಮತಿ

ಗುರು ಡೇಲ್​ ಸ್ಟೇನ್ ಸೆಲಬ್ರೇಶನ್​​ ಕಾಪಿ ಮಾಡಿದ ಮಲಿಕ್​:

ಉಮ್ರಾನ್​ ಮಲಿಕ್​ ಇಂತಹ ಘಾತಕ ದಾಳಿಯ ಹಿಂದೆ ಡೇಲ್ ಸ್ಟೇನ್ (Dale Steyn)​​​​​ ಅನ್ನೋ ಮಾಸ್ಟರ್​ ಮೈಂಡ್​​​​ ಕೆಲಸ ಮಾಡ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೈದ್ರಾಬಾದ್​ ಬೌಲಿಂಗ್​ ಕೋಚ್​ ಆಗಿರೋ ಡೇಲ್ ಸ್ಟೇನ್​​, ಮಲಿಕ್​​​​ಗೆ ಪಾಠ ಹೇಳಿಕೊಡ್ತಿದ್ದಾರೆ.ಸಾಲಿಡ್​​​ ಪರ್ಫಾಮೆನ್ಸ್​ ಹೊರತಾಗಿ ಮಲಿಕ್​​ ವಿಕೆಟ್​ ಪಡೆದಾಗಲೆಲ್ಲಾ  ಗುರು ಸ್ಟೇನ್‌ರ ಸಿಗ್ನೆಚರ್​​ ಸೆಲಬ್ರೇಶನ್ ​​ಅನ್ನ ಕಾಪಿ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಶರವೇಗದ ದಾಳಿಗಾರ ಶೀಘ್ರವೇ ಟೀಂ​ ಇಂಡಿಯಾಗೆ ಡೆಬ್ಯು:

ಸ್ಥಿರ ಫಾರ್ಮ್​ ಮತ್ತು ಡೆಡ್ಲಿ ದಾಳಿ ಮೂಲಕ ಸುದ್ದಿಯಲ್ಲಿರೋ ಉಮ್ರಾನ್ ಮಲಿಕ್​ ಶೀಘ್ರದಲ್ಲೇ ಟೀಂ​ ಇಂಡಿಯಾಗೆ (Team India) ಎಂಟ್ರಿ ಕೊಟ್ರು ಅಚ್ಚರಿಯಿಲ್ಲ. ಮಲಿಕ್​ ಐಪಿಎಲ್​ ಪರ್ಫಾಮೆನ್ಸ್​ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಯಂಗ್​ ಬೌಲರ್​​​​ಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕು ಅನ್ನೂ ಕೂಗು ಕೇಳಿ ಬರ್ತಿದೆ. ಹೀಗಾಗಿ ಮುಂಬರೋ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮಲಿಕ್​ ಸೆಲೆಕ್ಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಬಿಸಿಸಿಐ ಸೆಲೆಕ್ಟರ್ಸ್​ ಕರುಣೆ ತೋರಬೇಕಷ್ಟೆ.

Latest Videos
Follow Us:
Download App:
  • android
  • ios