ಮುಂಬೈ ಹಾಗೂ ಕೋಲ್ಕತಾ ನಡುವಿನ 47ನೇ ಲೀಗ್ ಪಂದ್ಯ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ಮುಂಬೈ(ಮೇ.09): ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ 1 ಬದಲಾವಣೆ ಮಾಡಿದ್ದರೆ, ಕೆಕೆಆರ್ ತಂಡದಲ್ಲಿ ಬರೋಬ್ಬರಿ 5 ಬದಲಾವಣೆ ಮಾಡಿದೆ.

ಮುಂಬೈ ತಂಡದ ಸೂರ್ಯಕುಮಾರ್ ಯಾದವ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ರಮನ್‌ದೀಪ್ ತಂಡ ಸೇರಿಕೊಂಡಿದ್ದಾರೆ. ಇನ್ನು ಕೆಕೆಆರ್ ತಂಡದಲ್ಲಲಿ ಅಜಿಂಕ್ಯ ರಹಾನೆ, ಪ್ಯಾಟ್ ಕಮಿನ್ಸ್, ವೆಂಕಟೇಶ್, ವರುಣ್ ಚಕ್ರವರ್ತಿ ಹಾಗೂ ಶೆಲ್ಡಾನ್ ಜಾಕ್ಸನ್ ತಂಡ ಸೇರಿಕೊಂಡಿದ್ದಾರೆ.

ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್‌ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?

ಕಳೆದೆರಡು ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಮುಂಬೈ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಸತತ 8 ಪಂದ್ಯಗಳನ್ನು ಸೋತ ಮುಂಬೈ ಇಂಡಿಯನ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿ ಸಂಭ್ರಮಿಸಿತು. ಇದು ಈ ಆವೃತ್ತಿಯಲ್ಲಿ ಮುಂಬೈ ದಾಖಲಿಸಿದ ಮೊದಲ ಗೆಲುವಾಗಿದೆ. ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 5 ರನ್ ಗೆಲುವು ದಾಖಲಿಸಿ ಸತತ 2ನೇ ಗೆಲುವು ಕಂಡಿದೆ. 

ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಇನ್ನೇನಿದ್ದರೂ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್ ಹೋರಾಟ ನಡೆಸಲಿದೆ. 

ಕೋಲ್ಕತಾ ನೈಟ್ ರೈಡರ್ಸ್ 9ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 10ನೇ ಸ್ಥಾನದಲ್ಲಿದೆ. ಕೋಲ್ಕತಾ ಆರಂಭದಲ್ಲಿ ಅಬ್ಬರಿಸಿ ಬಳಿಕ ಎಲ್ಲಾ ಪಂದ್ಯಗಳನ್ನು ಕೈಚೆಲ್ಲಿ ಇದೀಗ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇತ್ತ ಮುಂಬೈ ಈ ಹಿಂದಿನ ಎಲ್ಲಾ ಆವೃತ್ತಿಗೆ ಹೋಲಿಸಿದರೆ ಅತ್ಯಂತ ಕೆಟ್ಟ ಆವೃತಿ ಇದಾಗಿದೆ. 10 ಪಂದ್ಯಗಳಲ್ಲಿ ಕೇವಲ 2 ಗೆಲವು ಕಂಡ ಮುಂಬೈ 10 ನೇ ಸ್ಥಾನದಲ್ಲಿದೆ.

ಆದರೆ ಮುಂಬೈ ಹಾಗೂ ಕೋಲ್ಕತಾ ನಡುವಿನ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಮೇಲುಗೈ ಸಾಧಿಸಿದೆ. ಮುಂಬೈ 22 ಗೆಲುವು ಕಂಡಿದ್ದರೆ, ಕೋಲ್ಕತಾ ಕೇವಲ 8 ಗೆಲುವು ಕಂಡಿದೆ. ಆದರೆ ಮುಂಬೈ ಪರಿಸ್ಥಿತಿ ನೆಟ್ಟಗಿಲ್ಲ. ಎಲ್ಲಾ ಪಂದ್ಯಗಳನ್ನು ಸೋತು ಗೆಲುವು ಮರೀಚಿಕೆಯಾಗಿತ್ತು. ಆದರೆ ಅಂತಿಮ 2 ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. 

IPL 2022: ಗ್ರೀನ್​ ಜೆರ್ಸಿಯಲ್ಲಿ RCB ಗೆದ್ರೆ ಫೈನಲ್​​​​ ಟಿಕೆಟ್​​ ಫಿಕ್ಸ್​​..!

ಐಪಿಎಲ್ ಪಾಯಿಂಟ್ಸ್ ಟೇಬಲ್
ಐಪಿಎಲ್ ಅಂಕಪಟ್ಟಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಮೊದಲ ಸ್ಥಾನಕ್ಕೇರಿದೆ. ಲಖನೌ 11 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದೆ. ಇತ್ತ ಗುಜರಾತ್ ಟೈಟಾನ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿ 2ನೇ ಸ್ಥಾನಕ್ಕೆ ಕುಸಿದಿದೆ. 11ರಲ್ಲಿ 8 ಪಂದ್ಯ ಗೆದ್ದುಕೊಂಡಿದೆ. ಇನ್ನು 3ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 11ರಲ್ಲಿ 7 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಸ್ಥಾನ ಅಲಂಕರಿಸಿದೆ. ಆರ್‌ಸಿಬಿ 12 ಪಂದ್ಯದಲ್ಲಿ 7 ಗೆಲುವು ಕಂಡಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ 11 ರಲ್ಲಿ 5 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ.ಇನ್ನು ಸನ್‌ರೈಸರ್ಸ್ ಹೈದರಾಬಾದ್ 11ರಲ್ಲಿ 5 ಪಂದ್ಯದಲ್ಲಿ ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 11 ರಲ್ಲಿ 5 ಪಂದ್ಯದಲ್ಲಿ ಗೆಲುವು ಕಂಡಿದೆ. ಈ ಮೂಲಕ 7ನೇ ಸ್ಥಾನದಲ್ಲಿದೆ. ಧೋನಿ ನಾಯಕತ್ವದಲ್ಲಿ ಗೆಲುವಿನ ಹಳಿಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ 11ರಲ್ಲಿ 4 ಗೆಲುವು ದಾಖಲಿಸಿ 8ನೇ ಸ್ಥಾನದಲ್ಲಿದೆ. ಕೆಕೆಆರ್ 9 ಹಾಗೂ ಮುಂಬೈ 10ನೇ ಸ್ಥಾನದಲ್ಲಿದೆ.