* ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು * ಆರೆಂಜ್ ಆರ್ಮಿ ಎದುರು ಸ್ವೀಟ್ ರಿವೇಂಜ್ ತೀರಿಸಿಕೊಂಡ ಆರ್‌ಸಿಬಿ* ಗ್ರೀನ್ ಜೆರ್ಸಿಯ ಗೆಲುವು ಆರ್‌ಸಿಬಿ ಅದೃಷ್ಟ ಬದಲಿಸುತ್ತಾ..?
ಮುಂಬೈ(ಮೇ.09): ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಆರ್‌ಸಿಬಿ 2011 ರಿಂದ ಗ್ರೀನ್ ಜೆರ್ಸಿಯಲ್ಲಿ ಒಂದು ಪಂದ್ಯವನ್ನಾಡುತ್ತೆ. ನಿನ್ನೆಯದು ಸೇರಿ 11 ಬಾರಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದಿದೆ. ಈ ಪೈಕಿ 3 ರಲ್ಲಿ ಗೆದ್ರೆ 7 ಬಾರಿ ಸೋತಿದೆ. ಅಂದ್ರೆ ಆರ್ಸಿಬಿಗೆ ಗ್ರೀನ್ ಜೆರ್ಸಿ ಅನ್ಲಕ್ಕಿ. ಆದ್ರೆ ನಿಮಗೊಂದು ಸಂಗತಿ ಗೊತ್ತಿರ್ಲಿಲ್ಲ. ಯಾವಗೆಲ್ಲಾ ಆರ್‌ಸಿಬಿ ಗ್ರೀನ್ ಜೆರ್ಸಿಯಲ್ಲಿ ಗೆದ್ದಿದಿಯೋ ಆವಾಗೆಲ್ಲಾ ಫೈನಲ್ ಪ್ರವೇಶಿಸಿದೆ.
2011- ಕೊಚ್ಚಿ ವಿರುದ್ಧ ಜಯ, ಫೈನಲ್ಗೆ ಎಂಟ್ರಿ.
ಯೆಸ್, ಆರ್‌ಸಿಬಿ ಫಸ್ಟ್ ಟೈಮ್ ಐಪಿಎಲ್ನಲ್ಲಿ ಗ್ರೀನ್ ಜೆರ್ಸಿ ಧರಿಸಿ 2011 ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯವನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 9 ವಿಕೆಟ್ಗಳಿಂದ ಜಯಿಸಿ ಫೈನಲ್ಗೆ ಎಂಟ್ರಿಕೊಟ್ಟಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೂದಲೆಳೆ ಅಂತರದಲ್ಲಿ ಕಪ್ ಮಿಸ್ಸಾಯ್ತು.
2016- ಗುಜರಾತ್ ಮಣಿಸಿ ರನ್ನರ್ಅಪ್:
ಇನ್ನು 2011 ರಿಂದ 2015ರ ವರೆಗೆ ಆರ್ಸಿಬಿಗೆ ಗ್ರೀನ್ ಜೆರ್ಸಿಯಲ್ಲಿ ಗೆಲುವು ದಕ್ಕಲಿಲ್ಲ. 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 144 ರನ್‌ಗಳ ಪ್ರಚಂಡ ಗೆಲುವು ದಾಖಲಿಸಿತ್ತು. ಮಾತ್ರವಲ್ಲ ಟೂರ್ನಿಯಲ್ಲಿ ಮೂರನೇ ಬಾರಿಗೆ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
ಈ ಸಲನೂ ಫೈನಲ್ ಪ್ರವೇಶಿಸುತ್ತಾ ಕೆಂಪಂಗಿ ಪಡೆ..?:
ಇನ್ನು 2017 ರಿಂದ 2011ವರೆಗೆ ಗ್ರೀನ್ ಜೆರ್ಸಿಯಲ್ಲಿ ಗೆಲುವು ಕಾಣದ ಆರ್‌ಸಿಬಿ ಈ ಬಾರಿ ಮತ್ತೆ ಗೆದ್ದಿದೆ. ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನ 67 ರನ್ ಗಳಿಂದ ಮಣಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಮುಖಾಮುಖಿಯಲ್ಲಿ 68 ರನ್‌ಗಳಿಂದ ಸೋತಿದ್ದ ಆರ್‌ಸಿಬಿ, ಭಾನುವಾರ ನಡೆದ ಪಂದ್ಯದಲ್ಲಿ 67 ರನ್‌ಗಳಿಂದ ಗೆದ್ದು ಸೇಡು ತೀರಿಸಿಕೊಂಡಿದೆ. ದೊಡ್ಡ ಅಂತರದ ಗೆಲುವು ತಂಡದ ನೆಟ್ ರನ್‌ರೇಟ್ ಅನ್ನು -0.44ರಿಂದ -0.11ಕ್ಕೆ ತಂದಿದೆ. ಸನ್‌ರೈಸರ್ಸ್ ಸತತ 4ನೇ ಸೋಲು ಅನುಭವಿಸಿ, ಪ್ಲೇ-ಆಫ್ ರೇಸ್‌ನಲ್ಲಿ ಹಿಂದೆ ಬಿದ್ದಿದೆ.
IPL 2022: ಹಸರಂಗ ಮ್ಯಾಜಿಕ್, ಸನ್‌ರೈಸರ್ಸ್ ಬಗ್ಗುಬಡಿದ ಆರ್‌ಸಿಬಿ..!
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, 20 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಮೊದಲ ಓವರಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 19.2 ಓವರಲ್ಲಿ ಕೇವಲ 125 ರನ್‌ಗೆ ಆಲೌಟ್ ಆಯಿತು. 2011 ಹಾಗೂ 2016ರ ಗ್ರೀನ್ ಜೆರ್ಸಿ ಅದೃಷ್ಟ ರಿಪೀಟ್ ಆದ್ರೆ ಈ ಬಾರಿಯೂ ಫೈನಲ್ ಪ್ರವೇಶಿಸಿದೋದು ಪಕ್ಕಾ. ಹಾಗೇ ಆಗುತ್ತಾ ? ಇಲ್ಲ ಹಿಸ್ಟರಿ ಬದಲಾಗುತ್ತಾ ಅನ್ನೋದನ್ನ ಕಾದು ನೋಡಬೇಕು.
