Asianet Suvarna News Asianet Suvarna News

IPL 2022: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರವೀಂದ್ರ ಜಡೇಜಾ ಹೊಸ ನಾಯಕ?

* ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಜಡೇಜಾ ನಾಯಕರಾಗುವ ಸಾಧ್ಯತೆ

* 15ನೇ ಆವೃತ್ತಿಯ ಐಪಿಎಲ್ ವೇಳೆ ಧೋನಿ ನಾಯಕತ್ವಕ್ಕೆ ಗುಡ್‌ ಬೈ

* ರವೀಂದ್ರ ಜಡೇಜಾ ಅವರನ್ನು ರೀಟೈನ್ ಮಾಡಿಕೊಂಡಿರುವ ಸಿಎಸ್‌ಕೆ ಫ್ರಾಂಚೈಸಿ

IPL 2022 MS Dhoni likely to be handover Chennai Super Kings captaincy to Ravindra Jadeja kvn
Author
Bengaluru, First Published Jan 18, 2022, 1:27 PM IST

ನವದೆಹಲಿ(ಜ.18): ಐಪಿಎಲ್‌ನ 4 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chenai Super Kings) ತಂಡಕ್ಕೆ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಎಂ.ಎಸ್‌.ಧೋನಿ (MS Dhoni) 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(Indian Premier League) ಬಳಿಕ ಅಥವಾ ಟೂರ್ನಿಗೂ ಮೊದಲೇ ಜಡೇಜಾಗೆ ನಾಯಕತ್ವ ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ. ಮುಂದಿನ ಆವೃತ್ತಿಯ ಐಪಿಎಲ್‌ ಧೋನಿ ಪಾಲಿಗೆ ಬಹುತೇಕ ಕೊನೆಯ ಟೂರ್ನಿ ಆಗಲಿದ್ದು, ಹೊಸಬರಿಗೆ ಈಗಲೇ ಅವಕಾಶ ನೀಡಲು ಧೋನಿ ಇಚ್ಛಿಸಿದ್ದಾರೆ ಎನ್ನಲಾಗಿದೆ. 

ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ 2021ರ ಐಪಿಎಲ್‌ ಫೈನಲ್‌ನಲ್ಲಿ ಇಯಾನ್‌ ಮಾರ್ಗನ್‌ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವನ್ನು ಬಗ್ಗುಬಡಿಯುವ ಮೂಲಕ 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2020ರ ಆಗಸ್ಟ್ 15ರಂದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಮಹೇಂದ್ರ ಸಿಂಗ್ ಧೋನಿ, ಇದೀಗ ಸಿಎಸ್‌ಕೆ ನಾಯಕತ್ವವನ್ನು ಜಡೇಜಾಗೆ ಬಿಟ್ಟುಕೊಡಲು ಆಲೋಚಿಸಿದ್ದಾರೆ ಎನ್ನಲಾಗಿದೆ. 40 ವರ್ಷದ ಧೋನಿ ಸಿಎಸ್‌ಕೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಡ್ಡುಗೆ ನಾಯಕತ್ವ ಬಿಟ್ಟುಕೊಡಲಿದ್ದಾರೆ ಎನ್ನಲಾಗುತ್ತಿದೆ.

ಈ ಕಾರಣಕ್ಕಾಗಿಯೇ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರವೀಂದ್ರ ಜಡೇಜಾ ಅವರನ್ನು ಐಪಿಎಲ್‌ ಮೆಗಾ ಹರಾಜಿಗೂ (IPL Mega Auction) ಮುನ್ನ ಮೊದಲ ಆಯ್ಕೆಯ ಆಟಗಾರನನ್ನಾಗಿ ರೀಟೈನ್ ಮಾಡಿಕೊಂಡಿದೆ. 2022ರ ಐಪಿಎಲ್‌ಗೆ ಚೆನ್ನೈ ಧೋನಿ, ಜಡೇಜಾ ಸೇರಿ ನಾಲ್ವರನ್ನು ಉಳಿಸಿಕೊಳ್ಳಲಾಗಿದೆ.

ಏಕದಿನ: ಜಿಂಬಾಬ್ವೆ ವಿರುದ್ಧ ಲಂಕಾಗೆ 5 ವಿಕೆಟ್‌ ಗೆಲುವು

ಪಲ್ಲೆಕೆಲೆ: ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 5 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 9 ವಿಕೆಟ್‌ ನಷ್ಟಕ್ಕೆ 296 ರನ್‌ ಕಲೆ ಹಾಕಿತು. ಶಾನ್‌ ವಿಲಿಯಮ್ಸ್‌(100) ಆಕರ್ಷಕ ಶತಕ ಸಿಡಿಸಿದರೆ, ಚಕಬ್ವಾ 72 ರನ್‌ ಗಳಿಸಿದರು. ಕಠಿಣ ಗುರಿ ಬೆನ್ನತ್ತಿದ ಲಂಕಾ 48.3 ಓವರಲ್ಲಿ 5 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ಪಥುಮ್‌ ನಿಸ್ಸಂಕಾ(75), ದಿನೇಶ್‌ ಚಾಂಡಿಮಾಲ್‌(75) ಚರಿತ್‌ ಅಸಲಂಕ(71) ತಂಡಕ್ಕೆ ಗೆಲುವು ತಂದುಕೊಟ್ಟರು. 2ನೇ ಪಂದ್ಯ ಬುಧವಾರ ನಡೆಯಲಿದೆ.

ವಿಂಡೀಸ್‌ ವಿರುದ್ಧ ಐತಿಹಾಸಿಕ ಸರಣಿ ಜಯ ಕಂಡ ಐರ್ಲೆಂಡ್‌

ಕಿಂಗ್‌ಸ್ಟನ್‌: ವೆಸ್ಟ್‌ಇಂಡೀಸ್‌ ವಿರುದ್ಧದ ಮೂರನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ 2 ವಿಕೆಟ್‌ ರೋಚಕ ಗೆಲುವು ಸಾಧಿಸಿದ ಐರ್ಲೆಂಡ್‌ 2-1ರ ಅಂಥರದಲ್ಲಿ ಸರಣಿ ಗೆಲುವು ಸಾಧಿಸಿ ಇತಿಹಾಸ ಬರೆದಿದೆ. ಐಸಿಸಿ ಪೂರ್ಣಾವಧಿ ಸದಸ್ಯ ರಾಷ್ಟ್ರದ ವಿರುದ್ಧ ತವರಿನಾಚೆ ಐರ್ಲೆಂಡ್‌ ಸಾಧಿಸಿದ ಮೊದಲ ಸರಣಿ ಗೆಲುವು ಇದಾಗಿದೆ.

Team India Captaincy: ಟೀಂ ಇಂಡಿಯಾ ನಾಯಕರಾಗಲು ನಾನೂ ರೆಡಿಯಿದ್ದೇನೆಂದ ವೇಗಿ ಜಸ್ಪ್ರೀತ್ ಬುಮ್ರಾ

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌, 44.4 ಓವರ್‌ಗಳಲ್ಲಿ 212 ರನ್‌ಗೆ ಆಲೌಟಾಯಿತು. ಶಾಯ್‌ ಹೋಪ್‌(53), ಜೇಸನ್‌ ಹೋಲ್ಡರ್‌(44) ಉತ್ತಮ ಆಟವಾಡಿದರು. ಆ್ಯಂಡಿ ಮೆಕ್‌ಬ್ರೈನ್‌ 4, ಕ್ರೇಗ್‌ ಯಂಗ್‌ 3 ವಿಕೆಟ್‌ ಕಿತ್ತರು. ಐರ್ಲೆಂಡ್‌ 44.5 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಮೆಕ್‌ಬ್ರೈನ್‌ (59) ಹ್ಯಾರಿ ಟೆಕ್ಟರ್‌ (52) ತಲಾ ಅರ್ಧಶತಕ ಸಿಡಿಸಿದರು.
 

Follow Us:
Download App:
  • android
  • ios