ನೇರವಾಗಿ ಹೇಳುವುದಾದರೆ, ಸನ್ ರೈಸರ್ಸ್ ತಂಡದ ಅತ್ಯಂತ ವಿರಳ ಪ್ಲೇ ಆಫ್ ಚಾನ್ಸ್ ನಿಂತಿರುವುದು ಈ ಪಂದ್ಯದ ಮೇಲೆ. ಹಾಗೇನಾದರೂ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸದೇ ಇದ್ದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2022 ಇಂದ ಹೊರಬೀಳಲಿದೆ.
ಮುಂಬೈ (ಮೇ. 17): ಐಪಿಎಲ್ (IPL 2022) ಅಭಿಯಾನದಲ್ಲಿ ಸೋಲು ಗೆಲುವುಗಳಿಂದ ಯಾವ ಲಾಭ ನಷ್ಟವನ್ನೂ ಹೊಂದಿರದ ಮುಂಬೈ ಇಂಡಿಯನ್ಸ್ (Mumbai Indians), ಸನ್ ರೈಸರ್ಸ್ ಹೈದರಾಬಾದ್ ( Sunrisers Hyderabad) ತಂಡವನ್ನು ರನೌಟ್ ಮಾಡುವ ವಿಶ್ವಾಸದಲ್ಲಿದೆ. ಪ್ಲೇ ಆಫ್ ಗೇರುವ (Play Off) ವಿರಾಳಾತಿವಿರಳ ಅವಕಾಶ ಹೊಂದಿರುವ ಸನ್ ರೈಸರ್ಸ್ (SRH) ತಂಡ ಮಂಗಳವಾರ ಮುಂಬೈ (MI) ವಿರುದ್ಧ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ.
ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿರುವ ಸನ್ ರೈಸರ್ಸ್ ಹೈದರಾಬಾದ್, ಟೂರ್ನಿಯಲ್ಲಿ ಗೆಲುವು ಕಾಣದೇ ಮೂರು ವಾರಗಳೇ ಕಳೆದಿವೆ. ಸತತ ಸೋಲುಗಳ ದಾಳಿಯಿಂದ ಗೆಲುವಿನ ದಾರಿಗೆ ಮರಳುವ ಪ್ರಯತ್ನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಪಂದ್ಯ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವುದು ವಿಶ್ವಾಸ ಕುಗ್ಗಿಸಿದೆ. ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆ ಮೈದಾನ ಫೇವರಿಟ್ ಮೈದಾನವಾಗಿದ್ದರೆ, ಈ ಋತುವಿನಲ್ಲಿ ವಾಂಖೆಡೆ ಮೈದಾನದಲ್ಲಿ ಆಡಿದ ಒಂದೂ ಪಂದ್ಯಗಳಲ್ಲಿ ಸನ್ ರೈಸರ್ಸ್ ಗೆಲುವು ಕಂಡಿಲ್ಲ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಸೋಲು ಗೆಲುವಿನ ಲೆಕ್ಕಾಚಾರ ಏನಿದ್ದರೂ, ಬೌಲಿಂಗ್ ವಿಭಾಗದ ನಿರ್ವಹಣೆಯ ಮೇಲೆ ಅವಲಂಬಿಸಿದೆ. ಇಡೀ ಋತುವಿನಲ್ಲಿ ಸನ್ ರೈಸರ್ಸ್ ತಂಡ ಕಂಡಿರುವ ಗೆಲುವಿನಲ್ಲಿ ಬೌಲಿಂಗ್ ವಿಭಾಗದ ಪಾತ್ರವೇ ಪ್ರಮುಖವಾಗಿತ್ತು. ಐದು ಪಂದ್ಯಗಳಲ್ಲಿ ಸಾಧಿಸಿರುವ ಗೆಲುವಿನಲ್ಲಿ ಯಾವ ಬಾರಿಯೂ ಎದುರಾಳಿ ತಂಡಕ್ಕೆ 175 ಹಾಗೂ ಅದಕ್ಕಿಂತ ಹೆಚ್ಚಿನ ರನ್ ನೀಡಿಲ್ಲ. ಇನ್ನು ಸೋಲು ಕಂಡಿರುವ 7 ಪಂದ್ಯಗಳ ಪೈಕಿ 5ರಲ್ಲಿ 175 ಹಾಗೂ ಅದಕ್ಕಿಂತ ಹೆಚ್ಚಿನ ರನ್ ನೀಡಿದೆ. ತಂಡದ ಸ್ಪಿನ್ ಬೌಲರ್ ಗಳ ನಿರ್ವಹಣೆ ಅತ್ಯಂತ ಕಳಪೆಯಾಗಿರುವುದು ಸತತ ಸೋಲುಗಳಿಗೆ ಕಾರಣವಾಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ತನ್ನ ಒಂಬತ್ತು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದರೆ, ಈ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನ ಶೇಕಡಾವಾರು 62.3 ಆಗಿದೆ. ಮುಂಬೈ 94 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರೆ, ಸನ್‌ರೈಸರ್ಸ್ 92 ಅನ್ನು ಬಿಟ್ಟುಕೊಟ್ಟಿದೆ, ಇದು ಈ ಋತುವಿನಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಬಿಟ್ಟುಕೊಟ್ಟ ತಂಡಗಳ ಪೈಕಿ 2 ಹಾಗೂ 3ನೇ ಸ್ಥಾನಗಳಲ್ಲಿರುವ ತಂಡವಾಗಿದೆ. ಇನ್ನು ಸಿಕ್ಸರ್ ಗಳನ್ನು ಸಿಡಿಸಿರುವ ತಂಡಗಳ ಪಟ್ಟಿಯಲ್ಲಿ ಕೊನೆ ನಾಲ್ಕು ಸ್ಥಾನಗಳಲ್ಲಿ ಇವೆರೆಡು ತಂಡಗಳು ಸ್ಥಾನ ಪಡೆದಿವೆ.
IPL 2022 : ಹಾಲ್ ಆಫ್ ಫೇಮ್ ಪರಿಚಯಿಸಿದ ಆರ್ ಸಿಬಿ, ಗೌರವ ಪಡೆದ ಮೊದಲಿಗರಾದ ಕ್ರಿಸ್ ಗೇಲ್, ಎಬಿಡಿ!
ಟೀಮ್ ನ್ಯೂಸ್: ಗಾಯಾಳುವಾಗಿರುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಬದಲಿಗೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆಕಾಶ್ ಮಾಧ್ವಾಲ್ (Akash Madhwal )ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.
ಬ್ಯಾಡ್ಮಿಂಟನ್ ಗೆ ನೆರವು ನೀಡಿದ ರಾಜೀವ್ ಚಂದ್ರಶೇಖರ್ ಗೆ ಧನ್ಯವಾದ ಹೇಳಿದ ಪ್ರಕಾಶ್ ಪಡುಕೋಣೆ
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ತಿಲಕ್ ವರ್ಮಾ, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಹೃತಿಕ್ ಶೋಕೀನ್, ರಮಣದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಕುಮಾರ್ ಕಾರ್ತಿಕೇಯ ಸಿಂಗ್
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್‌ರಾಮ್, ನಿಕೋಲಸ್ ಪೂರನ್ (ವಿಕೆ), ವಾಷಿಂಗ್ಟನ್ ಸುಂದರ್, ಶಶಾಂಕ್ ಸಿಂಗ್/ಗ್ಲೆನ್ ಫಿಲಿಪ್ಸ್, ಮಾರ್ಕೊ ಜಾನ್ಸೆನ್/ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್
ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
