ಬ್ಯಾಡ್ಮಿಂಟನ್ ಗೆ ನೆರವು ನೀಡಿದ ರಾಜೀವ್ ಚಂದ್ರಶೇಖರ್ ಗೆ ಧನ್ಯವಾದ ಹೇಳಿದ ಪ್ರಕಾಶ್‌ ಪಡುಕೋಣೆ

1994ರಲ್ಲೇ ನಮ್ಮ ಅಕಾಡೆಮಿಗೆ ನೀವು ನೆರವು ನೀಡಿದ್ದಿರಿ. ಭಾರತದಲ್ಲಿ ಬ್ಯಾಡ್ಮಿಂಟನ್‌ ಪ್ರಾಯೋಜಕ್ವದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಯಾವುದೇ ಟೂರ್ನಿಗಲ್ಲ, ತರಬೇತಿಗೇ ನೀವು ಪ್ರಾಯೋಜಕತ್ವ ನೀಡಿದ್ದಿರಿ. ಅದು ನಿಮ್ಮ ದೂರದೃಷ್ಟಿ. ಖಾಸಗಿ ಪ್ರಾಯೋಜಕತ್ವ ಪಡೆದ ವಿಶ್ವದ ಮೊದಲ ಅಕಾಡೆಮಿ ನಮ್ಮದು ಎಂದು ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ರಾಜೀವ್ ಚಂದ್ರಶೇಖರ್ ಅವರ ಸಹಾಯವನ್ನು ನೆನೆದಿದ್ದಾರೆ.
 

Former Badminton player and PPBA Chief Prakash padukone remembers rajiv chandrasekhar Help for badminton san

ಬೆಂಗಳೂರು (ಮೇ. 17):  ಥಾಮಸ್‌ ಕಪ್‌ನಲ್ಲಿ (Thomas Cup)  ಭಾರತ ಬ್ಯಾಡ್ಮಿಂಟನ್‌ ತಂಡ (Indian Mens Badminton Team) ಐತಿಹಾಸಿಕ ಚಿನ್ನ ಗೆದ್ದ (Gold Win) ಸಂಭ್ರಮದ ನಡುವೆಯೇ ದಿಗ್ಗಜ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ (legendary badminton player Prakash padukone), 3 ದಶಕಗಳ ಹಿಂದೆ ಬಿಪಿಎಲ್‌ ಸಂಸ್ಥೆ ಹಾಗೂ ಹಾಲಿ ಕೇಂದ್ರ ಸಚಿವ, ಉದ್ಯಮಿ ರಾಜೀವ್‌ ಚಂದ್ರಶೇಖರ್‌ (rajiv chandrasekha) ಅವರು ಕ್ರೀಡೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. 

ರಾಜೀವ್‌ ಚಂದ್ರಶೇಖರ್‌ ಅವರಿಗೆ ವಿಶೇಷ ಸಂದೇಶ ಕಳುಹಿಸಿರುವ ಪಡುಕೋಣೆ, ‘ರಾಜೀವ್‌, ಥಾಮಸ್‌ ಕಪ್‌ ಗೆಲುವಿನಲ್ಲಿ ನೀವು ಮತ್ತು ನಿಮ್ಮ ಸಂಸ್ಥೆಯ ಪಾತ್ರವೂ ಇದೆ. 1994ರಲ್ಲೇ ನಮ್ಮ ಅಕಾಡೆಮಿಗೆ ನೀವು ನೆರವು ನೀಡಿದ್ದಿರಿ. ಭಾರತದಲ್ಲಿ ಬ್ಯಾಡ್ಮಿಂಟನ್‌ ಪ್ರಾಯೋಜಕ್ವದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಯಾವುದೇ ಟೂರ್ನಿಗಲ್ಲ, ತರಬೇತಿಗೇ ನೀವು ಪ್ರಾಯೋಜಕತ್ವ ನೀಡಿದ್ದಿರಿ. ಅದು ನಿಮ್ಮ ದೂರದೃಷ್ಟಿ. ಖಾಸಗಿ ಪ್ರಾಯೋಜಕತ್ವ ಪಡೆದ ವಿಶ್ವದ ಮೊದಲ ಅಕಾಡೆಮಿ ನಮ್ಮದು. ಏಷ್ಯಾದ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಪ್ರಾಯೋಕತ್ವ ನೀಡುತ್ತಿದ್ದೆವು. ಈಗಿನ ಯಶಸ್ಸಿಗೆ ನೀವು ಅಂದು ನೀಡಿದ ಪ್ರೋತ್ಸಾಹವೇ ಕಾರಣ. ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮ ಕೊಡುಗೆಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಏನೂ ನಿರೀಕ್ಷೆಯಿಲ್ಲದೆ ನಮ್ಮನ್ನು ಬೆಂಬಲಿಸಿದಿರಿ. ಎಲ್ಲರೂ ಬಹಳಷ್ಟುಸಮಯ ಕಾಯ್ದರೂ ನಮ್ಮೆಲ್ಲರ ಕನಸು ಕೊನೆಗೂ ಈಡೇರಿದೆ’ ಎಂದು ಬರೆದಿದ್ದಾರೆ.

ಲಕ್ಷ್ಯ ಸೆನ್‌ಗೆ ಸರ್ಕಾರದಿಂದ 5 ಲಕ್ಷ ರು. ಬಹುಮಾನ: 73 ವರ್ಷಗಳಲ್ಲೇ ಮೊದಲ ಬಾರಿ ಥಾಮಸ್‌ ಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭಾರತ ಪುರುಷರ ತಂಡದಲ್ಲಿದ್ದ ಯುವ ಶಟ್ಲರ್‌ ಲಕ್ಷ್ಯ ಸೆನ್‌ಗೆ ಮಂಗಳವಾರ 5 ಲಕ್ಷ ರು. ನಗದು ಬಹುಮಾನ ನೀಡುವುದಾಗಿ ಸಿಎಂ ಬೊಮ್ಮಾಯಿ ಅವರು ಘೋಷಿಸಿದರು. ಉತ್ತರಾಖಂಡ ಮೂಲದ ಸೆನ್‌ ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೆನ್‌ ಜೊತೆ ಇತರೆ ಶಟ್ಲರ್‌ಗಳ ಸಾಧನೆಯನ್ನೂ ಕೊಂಡಾಡಿದ ಸಿಎಂ, ಇದು ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ ಎಂದರು.

ಹಾಕಿ: ಕೊಡಗು, ಗದಗಕ್ಕೆ ಜಯ
ಬೆಂಗಳೂರು (ಮೇ. 17):
ಮಿಲಿ ಒಲಿಂಪಿಕ್ಸ್ ಗೇಮ್ಸ್‌ನ ಮೊದಲ ದಿನ ನಡೆದ ಹಾಕಿ ಬಾಲಕರ ವಿಭಾಗದಲ್ಲಿ ಗದಗ, ಕೊಡಗು, ಬಾಲಕಿಯರ ವಿಭಾಗದಲ್ಲಿ ಹಾಸನ, ಕೊಡಗು ತಂಡಗಳು ಗೆಲುವು ಸಾಧಿಸಿದವು. ಬಾಲಕರ ನೆಟ್‌ಬಾಲ್‌ನಲ್ಲಿ ಉಡುಪಿ, ಚಾಮರಾಜನಗರ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ತಂಡಗಳು ಗೆದ್ದವು. ಟೇಬಲ್‌ ಟೆನಿಸ್‌ ಬಾಲಕರ ವಿಭಾಗದಲ್ಲಿ ಮಂಗಳೂರು, ಮಂಡ್ಯ, ಬೆಂಗಳೂರಿನ ತಂಡಗಳು, ಬಾಲಕಿಯರ ವಿಭಾಗದಲ್ಲಿ ಬೆಳಗಾವಿ, ಬೆಂಗಳೂರಿನ ತಂಡಗಳು ಜಯಗಳಿಸಿತು. 30 ಮೀ. ಆರ್ಚರಿಯಲ್ಲಿ ಪ್ರಫುಲ್‌ ಹಾಗೂ ಕರೀನಾ ಅಲೆಕ್ಸಾಂಡರ್‌ ಕ್ರಮವಾಗಿ ಬಾಲಕ, ಬಾಲಕಿಯ ವಿಭಾಗದಲ್ಲಿ ಚಿನ್ನ ಗೆದ್ದರು.

IPL 2022 ಪಂಜಾಬ್ ಮಣಿಸಿದ ಡೆಲ್ಲಿ, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ!

ಹಾಕಿ: ಫೈನಲ್‌ಗೆ ಕರ್ನಾಟಕ ರಾಷ್ಟ್ರೀಯ ಮಹಿಳಾ ಚಾಂಪಿಯನ್‌ಶಿಪ್‌
ಭೋಪಾಲ್‌:
ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಫೈನಲ್‌ ಪ್ರವೇಶಿಸಿದೆ. ಸೋಮವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಹರಾರ‍ಯಣ ವಿರುದ್ಧ ರಾಜ್ಯ ತಂಡ 2-0 ಗೋಲುಗಳಿಂದ ಗೆಲುವು ಸಾಧಿಸಿತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಲಯ ಕಾಯ್ದುಕೊಂಡಿರುವ ಕರ್ನಾಟಕ, ಸೆಮೀಸ್‌ನಲ್ಲೂ ಪ್ರಾಬಲ್ಯ ಮೆರೆಯಿತು.

ಮಹಿಳಾ ಟಿ20 ಚಾಲೆಂಜ್‌ಗೆ 3 ಬಲಿಷ್ಠ ತಂಡಗಳನ್ನು ಪ್ರಕಟಿಸಿದ ಬಿಸಿಸಿಐ..!

ಮೊದಲಾರ್ಧ ಗೋಲು ರಹಿತ ಮುಕ್ತಾಯಗೊಂಡ ಬಳಿಕ, 34ನೇ ನಿಮಿಷದಲ್ಲಿ ನಿಶಾ ಪಿ.ಸಿ. ಮೊದಲ ಗೋಲು ಬಾರಿಸಿದರು. 53ನೇ ನಿಮಿಷದಲ್ಲಿ ಬಿ.ಎಸ್‌.ಪೂಜಿತ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಪಂದ್ಯದುದ್ದಕ್ಕೂ ರಾಜ್ಯ ತಂಡದ ಡಿಫೆಂಡರ್‌ಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ಪರಿಣಾಮ, ಹರಾರ‍ಯಣ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಮಂಗಳವಾರ(ಮೇ 17) ಫೈನಲ್‌ನಲ್ಲಿ ಕರ್ನಾಟಕ, ಒಡಿಶಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

Latest Videos
Follow Us:
Download App:
  • android
  • ios