Asianet Suvarna News Asianet Suvarna News

IPL 2022 ಬಟ್ಲರ್ ಭರ್ಜರಿ ಬ್ಯಾಟಿಂಗ್, 66 ಎಸೆತಗಳಲ್ಲಿ ದಾಖಲಾಯ್ತು ಹಾಲಿ ಆವೃತ್ತಿಯ ಮೊದಲ ಶತಕ!

ಇಂಗ್ಲೆಂಡ್ ನ ಸ್ಟಾರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಬಾರಿಸಿದ ಸೂಪರ್ ಶತಕದ ಸಾಹಸದಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ ಬೃಹತ್ ಸವಾಲು ನೀಡಿದೆ. ಬಟ್ಲರ್ ಗೆ ಉತ್ತಮ ಸಾಥ್ ನೀಡಿದ ಶಿಮ್ರೋನ್ ಹೆಟ್ಮೆಯರ್ ಮುಂಬೈ ಬೌಲಿಂಗ್ ದಾಳಿಯನ್ನು ಛಿದ್ರಛಿದ್ರ ಮಾಡಿದ್ದಾರೆ.

IPL 2022 MI vs RR jos buttler hundred Shimron Hetmyer cameo flatten Mumbai Indians against Rajasthan Royals san
Author
Bengaluru, First Published Apr 2, 2022, 5:18 PM IST

ಮುಂಬೈ (ಏ.02): ಸ್ಫೋಟಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ (Jos Buttler) ಸಿಡಿಲಬ್ಬರದ ಶತಕ, ಕೊನೆಯ ಹಂತದಲ್ಲಿ ಶಿಮ್ರೋನ್ ಹೆಟ್ಮೆಯರ್ (Shimron Hetmyer) ಬಾರಿಸಿದ ಸೂಪರ್ ಡೂಪರ್ ಸಿಕ್ಸರ್ ಗಳ ಸಹಾಯದಿಂದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indian) ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.  ಜೋಸ್ ಬಟ್ಲರ್ (100ರನ್, 68 ಎಸೆತ, 11 ಬೌಂಡರಿ, 5 ಸಿಕ್ಸರ್) ಅಬ್ಬರ ಹೇಗಿತ್ತೆಂದರೆ ಕೇವಲ 66 ಎಸೆತಗಳಲ್ಲಿ ಐಪಿಎಲ್ ನಲ್ಲಿ ತಮ್ಮ 2ನೇ ಶತಕ ಪೂರೈಸಿದರು. 

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ, ಮೊದಲ ಎರಡು ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡರೂ, 3ನೇ ವಿಕೆಟ್ ಗೆ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಆಡಿದ ಬಿರುಸಿನ 82 ರನ್ ಗಳ ಜೊತೆಯಾಟ ಸ್ಲಾಗ್ ಓವರ್ ಗಳಲ್ಲಿ ಹೆಟ್ಮೆಯರ್ (35ರನ್, 14 ಎಸೆತ, 3 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ಆರ್ಭಟದಿಂದ 8 ವಿಕೆಟ್ ಗೆ 193 ರನ್ ಕಲೆಹಾಕಿತು. ಕೊನೇ ಓವರ್ ನಲ್ಲಿ ಮುಂಬೈ ಬೌಲರ್ ಗಳು ಕಡಿವಾಣ ಹಾಕಿದ್ದರಿಂದ ರಾಜಸ್ಥಾನ ರಾಯಲ್ಸ್ ತಂಡ 200ರ ಗಡಿ ದಾಟುವಲ್ಲಿ ವಿಫಲವಾಯಿತು. 

ಜೋಸ್ ಬಟ್ಲರ್ ತಮ್ಮ ಬ್ಯಾಟಿಂಗ್ ವೇಳೆ, ನಾಯಕ ಸಂಜು ಸ್ಯಾಮ್ಸನ್ ಅವರಿಂದ ದೊಡ್ಡ ಮಟ್ಟದ ಬೆಂಬಲ ಪಡೆದುಕೊಂಡರು. ಇವರಿಬ್ಬರು  ಮೂರನೇ ವಿಕೆಟ್ ಗೆ 82 ರನ್ ಜೊತೆಯಾಟವಾಡಿದರು. 15ನೇ ಓವರ್ ನಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಉರುಳಿಸುವ ಮೂಲಕ ಕೈರಾನ್ ಪೊಲ್ಲಾರ್ಡ್ ಈ ಜೊತೆಯಾಟವನ್ನು ಬೇರ್ಪಡಿಸಿದರು. ಆ ನಂತರ ಮೈದಾನಕ್ಕಿಳಿದ ಶಿಮ್ರೋನ್ ಹೆಟ್ಮೆಯರ್ ಅವರೊಂದಿಗೆ ಬಟ್ಲರ್, ಬಿರುಸಿನ 53 ರನ್ ಜೊತೆಯಾಟವಾಡಿದರು.  

ಶನಿವಾರ 300ನೇ ಟಿ20 ಪಂದ್ಯವನ್ನಾಡುತ್ತಿರುವ ಜೋಸ್ ಬಟ್ಲರ್, ಐಪಿಎಲ್ ಇತಿಹಾಸದಲ್ಲಿ ಒಂದಕ್ಕಿಂಯ ಹೆಚ್ಚು ಶತಕ ಬಾರಿಸಿದ 16ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಬೆನ್ ಸ್ಟೋಕ್ಸ್ ನಂತರ ಐಪಿಎಲ್ ನಲ್ಲಿ 2 ಶತಕ ಬಾರಿಸಿದ 2ನೇ ಇಂಗ್ಲೆಂಡ್ ಬ್ಯಾಟ್ಸ್ ಮನ್ ಎನಿಸಿಕೊಂಡರು. ಬಟ್ಲರ್ ಅವರ ನಿರ್ಗಮನದ ನಂತರ, ರಾಜಸ್ಥಾನವು ಕೊನೆಯ 2 ಓವರ್‌ಗಳಲ್ಲಿ ಕೇವಲ 11 ರನ್ ಗಳಿಸಿ ಸಾಲು ಸಾಲು ವಿಕೆಟ್ ಗಳನ್ನು ಕಳೆದುಕೊಂಡಿತು.

IPL 2022 ಬರೋಬ್ಬರಿ 8 ಸಿಕ್ಸರ್, ರಸೆಲ್ ಅಬ್ಬರದಿಂದ ಕೆಕೆಆರ್‌ಗೆ ಭರ್ಜರಿ ಗೆಲುವು!

ಗಮನಾರ್ಹವಾಗಿ, ಬಟ್ಲರ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿಯಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿದ್ದರು. ಆ ಪಂದ್ಯದಲ್ಲಿ ಬಟ್ಲರ್ 64 ಎಸೆತಗಳಲ್ಲಿ 124 ರನ್ ಸಿಡಿಸಿದ್ದರು. ಇದು ಟಿ20 ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ತಾರೆಯ ಮೊದಲ ಶತಕ ಇದಾಗಿತ್ತು. ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲೂ ಬಟ್ಲರ್ ಶತಕ ಸಿಡಿಸಿದ್ದರು.
ಪಂದ್ಯದಲ್ಲಿ ಮುಂಬೈ ತಂಡದ ಬೌಲಿಂಗ್ ಎಷ್ಟು ನೀರಸವಾಗಿತ್ತೆಂದರೆ, ಎರಡು ಬಾರಿ ಓವರ್ ವೊಂದರಲ್ಲಿ 26 ರನ್ ಗಳನ್ನು ನೀಡಿತು. ಬಸಿಲ್ ಥಂಪಿ ಎಸೆದ ನಾಲ್ಕನೇ ಓವರ್ ನಲ್ಲಿ ಜೋಸ್ ಬಟ್ಲರ್ ಮೂರು ಸಿಕ್ಸರ್, 2 ಬೌಂಡರಿಯೊಂದಿಗೆ 26 ರನ್ ಚಚ್ಚಿದರೆ, ಕೈರಾನ್ ಪೊಲ್ಲಾರ್ಡ್ ಎಸೆದ 17ನೇ ಓವರ್ ನಲ್ಲಿ 2 ಸಿಕ್ಸರ್, 3 ಬೌಂಡರಿಗಳಿದ್ದ 26 ರನ್ ಚಚ್ಚುವ ಮೂಲಕ ಮುಂಬೈನ ದೊಡ್ಡ ಮೊತ್ತಕ್ಕೆ ಕಾರಣರಾದರು.

IPL 2022 ಉಮೇಶ್ ಯಾದವ್ ದಾಳಿಗೆ ತತ್ತರಿಸಿದ ಪಂಜಾಬ್, 137 ರನ್‌ಗೆ ಆಲೌಟ್

ಟಿ20ಯಲ್ಲಿ 150 ಕ್ಯಾಚ್ ಸಾಧನೆ ಮಾಡಿದ ರೋಹಿತ್ ಶರ್ಮ!
ದೇವದತ್ ಪಡಿಕ್ಕಲ್ ಅವರ ಕ್ಯಾಚ್ ಪಡೆದುಕೊಳ್ಳುವ ಮೂಲಕ ರೋಹಿತ್ ಶರ್ಮ (Rohit Sharma) ಟಿ20ಯಲ್ಲಿ 150 ಕ್ಯಾಚ್ ಪೂರ್ತಿ ಮಾಡಿದ ಸಾಧನೆ ಮಾಡಿದರು. ಟಿ20ಯಲ್ಲಿ ಗರಿಷ್ಠ ಕ್ಯಾಚ್ ಪಡೆದುಕೊಂಡ ಭಾರತೀಯರ ಪೈಕಿ ಎಂಎಸ್ ಧೋನಿ (200), ದಿನೇಶ್ ಕಾರ್ತಿಕ್ (192) ಹಾಗೂ ಸುರೇಶ್ ರೈನಾ (172) ಮೊದಲ ಮೂರು ಸ್ಥಾನದಲ್ಲಿದ್ದಾರೆ.

Follow Us:
Download App:
  • android
  • ios