ಐಪಿಎಲ್ 2022 ಲೀಗ್ ಟೂರ್ನಿಯ 47ನೇ ಪಂದ್ಯ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ
ಮುಂಬೈ(ಮೇ02): ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್, ಗೆಲುವಿನ ಮೂಲಕ ಅಬ್ಬರಿಸುತ್ತಿರುವ ರಾಜಸ್ಥಾನ ರಾಯಲ್ಸ್ ಮುಖಾಮುಖಿ ತೀವ್ರ ಕುತೂಹಲ ಕೆರಳಿಸಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೆಕೆಆರ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಅಂಕುಲ್ ರಾಯ್ ಹಾಗೂ ಶಿವಂ ಮಾವಿ ತಂಡ ಸೇರಿಕೊಂಡಿದ್ದಾರೆ. ರಾಜಸ್ಥಾನ ತಂಡದಲ್ಲಿ ಮಿಚೆಲ್ ಬದಲು ಕರುಣ್ ನಾಯರ್ ತಂಡ ಸೇರಿಕೊಂಡಿದ್ದಾರೆ .
ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಆ್ಯರೋನ್ ಫಿಂಚ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್(ನಾಯಕ), ಬಾಬಾ ಇಂದ್ರಜಿತ್, ನಿತೀಶ್ ರಾಣಾ, ಅಂಕುಲ್ ರಾಯ್, ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಉಮೇಶ್ ಯಾದವ್, ಟಿಮ್ ಸೌಥಿ, ಶಿವಂ ಮಾವಿ
CSK playoffs scenarios: 6 ಪಂದ್ಯ ಸೋತಿರುವ CSKಗೆ ಈಗಲೂ ಇದೆ ಪ್ಲೇ ಆಫ್‌ಗೇರುವ ಅವಕಾಶ..!
ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ಡೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ನಾಯಕ), ಕರುಣ್ ನಾಯರ್, ಶಿಮ್ರೋನ್ ಹೆಟ್ಮಯೆರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಾಲ್, ಕುಲ್ದೀಪ್ ಸೇನ್
ವಾಂಖೆಡೆ ಕ್ರೀಡಾಂಗಣದಲ್ಲಿ ದಿಟ್ಟ ಪ್ರದರ್ಶನ ನೀಡುವ ತಂಡ ಗೆಲವು ಸಾಧಿಸಲಿದೆ. ಕಾರಣ ಕಳೆದ ಎರಡು ಪಂದ್ಯದಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ದಾಖಲಿಸಿದೆ. ಅದಕ್ಕೂ ಮೊದಲಿನ 4 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ದಾಖಲಿಸಿದೆ.
ಈಗಾಗಲೇ ಕೋಲ್ಕತಾ ನೈಟ್ ರೈಡರ್ಸ್ ಸತತ 5 ಪಂದ್ಯಗಳನ್ನು ಸೋತಿದೆ. ಇನ್ನೊಂದು ಪಂದ್ಯ ಸೋತರೆ 2019ರ ದಾಖಲೆ ಸರಿಗಟ್ಟಲಿದೆ. 2019ರಲ್ಲಿ ಸತತ 6 ಪಂದ್ಯಗಳನ್ನು ಸೋತು ಬಳಿಕ ಗೆಲುವಿನ ಹಳಿಗೆ ಮರಳಿತ್ತು. ಇದೀಗ 5 ಪಂದ್ಯಗಳನ್ನು ಸೋತಿರುವ ಕೆಕೆಆರ್ ರಾಜಸ್ಥಾನ ವಿರುದ್ಧ ಗೆಲುವಿಗೆ ಹೊಂಚು ಹಾಕಿದೆ.
IPL 2022: ಚೆನ್ನೈ vs ಹೈದರಾಬಾದ್ ಪಂದ್ಯದ ವೇಳೆ ವೈರಲ್ ಆದ ಟಾಪ್ ಮೀಮ್ಸ್‌ಗಳಿವು..!
ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಕೋಲ್ಕತಾ ನೈಟ್ ರೈಡರ್ಸ್ 8ನೇ ಸ್ಥಾನದಲ್ಲಿದೆ. ಕೆಕೆಆರ್ ಸೋಲಿನ ಆಘಾತದಿಂದ ಹೊರಬಂದರೆ ಮಾತ್ರ ಅವಕಾಶ. ಮತ್ತೊಂದು ಸೋಲು ಕೆಕೆಆರ್ ಪ್ಲೇ ಆಫ್ ಕನಸಿಗೆ ಹೊಡೆತ ನೀಡಲಿದೆ.
ಅಂಕಪಟ್ಟಿ
ಐಪಿಎಲ್ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದೆ. ಗುಜರಾತ್ 9 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ 16 ಅಂಕ ಸಂಪಾದಿಸಿದೆ. ಇನ್ನು ಲಖನೌ ಸೂಪರ್‌ಜೈಂಟ್ಸ್ 10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದುಕೊಂಡಿದೆ. ಈ ಮೂಲಕ 2ನೇ ಸ್ಥಾನ ಅಲಂಕರಿಸಿದೆ. ಇನ್ನು ರಾಜಸ್ಥಾನ 9 ಪಂದ್ಯಗಳಿಂದ 6 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ 9 ಪಂದ್ಯಗಳಿಂದ 5 ಗೆಲುವು ದಾಖಲಿಸಿ 4ನೇ ಸ್ಥಾನ ಪಡೆದುಕೊಂಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಪಂದ್ಯಗಳನ್ನಾಡಿದ್ದು, 5 ಪಂದ್ಯದದಲ್ಲಿ ಗೆಲುವು ಮತ್ತೆ ಐದರಲ್ಲಿ ಸೋಲು ಕಂಡಿದೆ. ಈ ಮೂಲಕ 5ನೇ ಸ್ಥಾನದಲ್ಲಿದೆ. 6ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳಲ್ಲಿ 4 ಗಲುವು ಸಾಧಿಸಿ 8 ಅಂಕ ಸಂಪಾದಿಸಿದೆ. ಪಂಜಾಬ್ ಕಿಂಗ್ಸ್ 9 ಪಂದ್ಯಗಳಲ್ಲಿ 4 ಪಂದ್ಯದಲ್ಲಿ ಗೆಲುವು ಕಂಡಿದೆ. ಇದರೊಂದಿಗೆ 7ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 9 ಪಂದ್ಯಗಳಲ್ಲಿ 3 ಗೆಲುವು ಕಂಡು 8ನೇ ಸ್ಥಾನಲ್ಲಿದೆ. ಇನ್ನು 9 ಪಂದ್ಯದಲ್ಲಿ 3 ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನದಲ್ಲಿದೆ. ಕೇವಲ 1 ಗೆಲವು ಸಾಧಿಸಿರುವ ಮುಂಬೈ ಇಂಡಿಯನ್ಸ್ 10ನೇ ಸ್ಥಾನದಲ್ಲಿದೆ.
