IPL 2022 ಟೂರ್ನಿಯಲ್ಲಿ ಕನ್ನಡದ ಕಂಪು, ಸ್ಟಾರ್ ಆಟಗಾರರ ಬಾಯಲ್ಲಿ ಕನ್ನಡ ಕಲರವ..!
* ಐಪಿಎಲ್ ಜೋರಾಯ್ತು ಕನ್ನಡ ಕಲರವ
* ಕೆಕೆಆರ್ ಎದುರಿನ ಗೆಲುವಿನ ಬೆನ್ನಲ್ಲೇ ರಾಹುಲ್-ಗೌತಮ್ ಕನ್ನಡದಲ್ಲೇ ಮಾತು
* ಕೆಎಲ್ ರಾಹುಲ್ ಹಾಗೂ ಕೆ ಗೌತಮ್ ಕನ್ನಡದ ಕಂಪು
ಬೆಂಗಳೂರು(ಮೇ.20): ಹುಟ್ಟಿದರೇ ಕನ್ನಡ ನಾಡಲ್ಲೇ ಹುಟ್ಟಬೇಕು. ಇಲ್ಲಿ ಹುಟ್ಟೋದು ಪುಣ್ಯ ಮಾಡಿರೋರು ಮಾತ್ರ. ಇದೇ ಕಾರಣಕ್ಕೆ ನಮ್ಮ ಕನ್ನಡಿಗರಿಗೆ ನಮ್ಮ ಭಾಷೆ, ನೆಲ, ಜಲದ ಮೇಲೆ ಅಷ್ಟು ಪ್ರೀತಿ. ನಾವು ಎಲ್ಲೇ ಹೊರಹೋದಾಗ ಯಾರಾದ್ರೂ ಕನ್ನಡ ಮಾತನಾಡೋರು ಸಿಕ್ಕಿಬಿಟ್ರೆ ನಮಗೆ ಇನ್ನಿಲ್ಲದ ಸಂತೋಷ. ಸದ್ಯ ನಡೆಯುತ್ತಿರೋ IPLನ ಪ್ರಸಾರದ ಹಕ್ಕು ಪಡೆದಿರೋ ಸ್ಟಾರ್ ನೆಟ್ವರ್ಕ್ನಲ್ಲೂ ಕನ್ನಡದ ಕಂಪು ಹರಡಿ ಬಿಟ್ಟಿದೆ.
ರಾಹುಲ್ ಜೊತೆ ಕನ್ನಡದಲ್ಲಿ ಮಾತಾಡಿದ ಗೌತಮ್: ಐಪಿಎಲ್ನಲ್ಲಿ ಕರ್ನಾಟಕದ ಪ್ಲೇಯರ್ಸ್ ಕನ್ನಡದಲ್ಲೇ ಮಾತನಾಡಿಕೊಳ್ಳೋದನ್ನ ನಾವು ನೀವೆಲ್ಲರೂ ಕೇಳಿರ್ತಿವಿ. ಕೆಕೆಆರ್ ತಂಡದಲ್ಲಿದ್ದಾಗ ರಾಬಿನ್ ಉತ್ತಪ್ಪ-ಪ್ರಸಿದ್ಧ್ ಕೃಷ್ಣ, ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮನೀಶ್ ಪಾಂಡೆ ಕನ್ನಡದಲ್ಲಿ ಮಾತಾಡಿದ್ದು ಸಖತ್ ಸುದ್ದಿಯಾಗಿತ್ತು. ಈಗ ಇದೇ ರೀತಿ ಮೈದಾನದಲ್ಲಿ ಕನ್ನಡಿಗರು ಮಾತನಾಡಿದ್ದಾರೆ. ಈ ಸೀಸನ್ನ ಲಖನೌ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ಕೆ ಗೌತಮ್ ಕನ್ನಡದ ಕಂಪು ಹರಿಸಿದ್ದಾರೆ.
ಮಗ ಎರಡು ಲೆಫ್ಟ್ಹ್ಯಾಂಡರ್ ಇದ್ದಾರೆ ನಾನು ಹಾಕ್ತೀನಿ:
ಮಗ ಎರಡು ಲೆಫ್ಟ್ಹ್ಯಾಂಡರ್ ಇದ್ದಾರೆ ನಾನು ಹಾಕ್ತೀನಿ. ನಾನು ಏನು ಸುಳ್ಳು ಹೇಳ್ತಿಲ್ಲಮ್ಮ. ಇದು ಲಖನೌ ತಂಡದ ರಾಹುಲ್ ಹಾಗೂ ಗೌತಮ್ ಕನ್ನಡದಲ್ಲಿ ಮಾತಾಡಿದ ಪರಿ. ಪಂದ್ಯದ ಬಳಿಕ ಗೌತಮ್ರನ್ನ ಕಾಮೆಂಟೇಟರ್ಸ್ ಕನ್ನಡದಲ್ಲಿ ಮಾತನಾಡಿಸ್ತಿದ್ರು. ಕ್ರೂಷಿಯಲ್ 20ನೇ ಓವರ್ ತಾನು ಹಾಕುವ ಬಗ್ಗೆ ರಾಹುಲ್ ಜೊತೆಗಿನ ಮಾತುಕತೆಯನ್ನ ಗೌತಮ್ ಬಿಚ್ಚಿಟ್ರು. ಇದೇ ವೇಳೆ ರಾಹುಲ್ ಕೂಡ ಜೊತೆಗೂಡಿ ಕನ್ನಡದಲ್ಲೇ ನಿರರ್ಗಳವಾಗಿ ಮಾತನಾಡಿದ್ರು. ಒಟ್ಟಿನಲ್ಲಿ ಈ ಸಲದIPLನಲ್ಲೂ ಕಂಪು ಬೀರಿದೆ. ಇಂಥಹ ವಿಡಿಯೋಗಳನ್ನ ಮತ್ತೆ ಮತ್ತೆ ನೋಡಿ ಎಂಜಾಯ್ ಮಾಡಿ.
IPL 2022 ಲಖನೌ ಎದುರು ರೋಚಕ ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್..!
ಕೊನೆ ಓವರ್ ಡ್ರಾಮಾ: ಕೊನೆ ಓವರಲ್ಲಿ ಗೆಲ್ಲಲು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 21 ರನ್ ಬೇಕಿತ್ತು. ಮಾರ್ಕಸ್ ಸ್ಟೋಯ್ನಿಸ್ ಎಸೆದ ಓವರ್‌ನ ಮೊದಲ 4 ಎಸೆತಗಳಲ್ಲಿ ರಿಂಕು ಸಿಂಗ್ 18 ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲು ತಲುಪಿಸಿದರು. 5ನೇ ಎಸೆತದಲ್ಲಿ ರಿಂಕು ಹೊಡೆತ ಚೆಂಡನ್ನು ಎವಿನ್ ಲೆವಿಸ್ ಅತ್ಯಮೋಘವಾಗಿ ಕ್ಯಾಚ್ ಹಿಡಿದರು. ಐಪಿಎಲ್‌ನ ಸಾರ್ವಕಾಲಿಕ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದೆನಿಸಿಕೊಂಡಿತು. ಕೊನೆ ಎಸೆತದಲ್ಲಿ 3 ರನ್ ಬೇಕಿದ್ದಾಗ, ಉಮೇಶ್ ಯಾದವ್‌ರನ್ನು ಬೌಲ್ಡ್ ಮಾಡಿದ ಸ್ಟೋಯ್ನಿಸ್, ಲಖನೌಗೆ ರೋಚಕ ಗೆಲುವು ತಂದುಕೊಟ್ಟರು. 15 ಎಸೆತದಲ್ಲಿ 40 ರನ್ ಸಿಡಿಸಿ ರಿಂಕು ತೋರಿದ ಹೋರಾಟ ವ್ಯರ್ಥವಾಯಿತು.