* ಐಪಿಎಲ್‌ನಲ್ಲಿ ಮಾಂತ್ರಿಕ ಬೌಲಿಂಗ್ ನಡೆಸುತ್ತಿದ್ದಾರೆ ಸುನಿಲ್ ನರೇನ್* ಯುಜವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಮೀರಿಸಿದ ಬೌಲಿಂಗ್* ಜಸ್ಟ್​ 5ರ ಎಕಾನಮಿಯಲ್ಲಿ ನರೇನ್ ಬೌಲಿಂಗ್

ಮುಂಬೈ(ಮೇ.12): 15ನೇ ಸೀಸನ್ ಐಪಿಎಲ್ (IPL 2022)​ ಮುಗಿತಾ ಬರ್ತಿದೆ. ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಗೆಲ್ಲಲು ಬೌಲರ್​ಗಳ ಮಧ್ಯೆ ಫೈಟ್ ಬಿದ್ದಿದೆ. ಟೀಂ ಇಂಡಿಯಾದಿಂದ (Team India) ಡ್ರಾಪ್ ಆಗಿ ಅವಮಾನ ಅನುಭವಿಸಿದ್ದ ಕುಲ್ಚಾ ಜೋಡಿ ಈ ಸಲ ಪರ್ಪಪ್ ಕ್ಯಾಪ್ ಗೆಲ್ಲೋ ರೇಸ್​ನಲ್ಲಿದೆ. ಯುಜವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ವಿಕೆಟ್​ಗಳ ಮೇಲೆ ವಿಕೆಟ್ ಪಡೆದು ಈ ಸೀಸನ್​ನಲ್ಲಿ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಳ್ಳಲು ಹೋರಾಟ ನಡೆಸ್ತಿದ್ದಾರೆ. ಆದ್ರೆ ಈ ಇಬ್ಬರ ನಡುವೆ ಮತ್ತೊಬ್ಬ ಸ್ಪಿನ್ನರ್​ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರೂ ಆತನ ಸಾಧನೆ ಮಾತ್ರ ಯಾರ ಕಣ್ಣಿಗೂ ಕಾಣ್ತಿಲ್ಲ. ಆತನೇ ಸುನಿಲ್ ನರೇನ್ (Sunil Narine).

ಜಸ್ಟ್​ 5ರ ಎಕಾನಮಿಯಲ್ಲಿ ನರೇನ್ ಬೌಲಿಂಗ್:
ಟಿ20 ಕ್ರಿಕೆಟ್​ನಲ್ಲಿ ಪಂದ್ಯ ಟೈ ಆದ್ರೆ ಸೂಪರ್ ಓವರ್ ನಡೆಸಲಾಗುತ್ತೆ. ಆ ಸೂಪರ್ ಓವರ್​ನಲ್ಲಿ ಬ್ಯಾಟರ್​​ಗಳು ರನ್ ಹೊಳೆಯನ್ನೇ ಹರಿಸ್ತಾರೆ. ಆದ್ರೆ ಅದೇ ಸೂಪರ್ ಓವರ್​ನಲ್ಲಿ ಮೇಡನ್ ಮಾಡಿರೋ ಏಕೈಕ ಬೌಲರ್ ಅಂದ್ರೆ ಅದು ವೆಸ್ಟ್ ಇಂಡೀಸ್​ನ ಸುನಿಲ್ ನರೇನ್. ಹೌದು, ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೇಡನ್ ಸೂಪರ್ ಓವರ್ ಮಾಡಿದ್ದಾರೆ ಸುನಿಲ್. ಈ ಮೂಲಕ ಸೂಪರ್ ಓವರ್​ನಲ್ಲಿ ಮೇಡನ್ ಮಾಡಿರೋ ವಿಶ್ವದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.

IPL 2022: ಚೆನ್ನೈ ಫ್ರಾಂಚೈಸಿ ಜೊತೆ ಕಿರಿಕ್ ಮಾಡಿಕೊಂಡ್ರಾ ರವೀಂದ್ರ ಜಡೇಜಾ?

ಐಪಿಎಲ್​ನಲ್ಲಿ ಕೆಕೆಆರ್ (Kolkata Knight Riders) ಪರ ಆಡುತ್ತಿರುವ ಸುನಿಲ್ ನರೇನ್ ಅದ್ಭುತವಾಗಿ ಬೌಲಿಂಗ್ ಮಾಡ್ತಿದ್ದಾರೆ. ಆದರೆ ಕೆಕೆಆರ್​ 12 ಪಂದ್ಯಗಳಿಂದ ಕೇವಲ ಐದನ್ನು ಗೆದ್ದಿದೆ. ಹಾಗಾಗಿ ನರೇನ್ ಸಾಧನೆ ಯಾರ ಕಣ್ಣಿಗೆ ಕಾಣ್ತಿಲ್ಲ. 12 ಮ್ಯಾಚ್​ನಿಂದ 8 ವಿಕೆಟ್ ಪಡೆದು ನರೇನ್ ನಿರಾಸೆ ಮೂಡಿಸಿರಬಹುದು. ಆದ್ರೆ 5ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಈ ಸೀಸನ್ ಐಪಿಎಲ್​​ನಲ್ಲಿ ಇಷ್ಟು ಕಡಿಮೆ ಎಕಾನಮಿಯಲ್ಲಿ ಯಾರೊಬ್ಬರೂ ಬೌಲಿಂಗ್ ಮಾಡಿಲ್ಲ. ಈ ಸಾಧನೆಗೆ ನರೇನ್​ಗೆ ಹ್ಯಾಟ್ಸ್​ ಅಪ್ ಹೇಳಲೇಬೇಕು. ಸುನೀಲ್ ನರೇನ್ ಈ ಸೀಸನ್ ಐಪಿಎಲ್​ನಲ್ಲಿ 12 ಪಂದ್ಯಗಳಿಂದ 48 ಓವರ್​ ಬೌಲಿಂಗ್ ಮಾಡಿದ್ದಾರೆ. 5.22ರ ಎಕಾನಮಿಯಲ್ಲಿ ರನ್ ನೀಡಿ 8 ವಿಕೆಟ್ ಪಡೆದಿದ್ದಾರೆ. 48 ಓವರ್​ನಿಂದ ಅವರು ನೀಡಿರೋ ರನ್ 251.

ಐಪಿಎಲ್​ನಲ್ಲಿ ಎಲ್ಲಾ ಸ್ಲಾಟ್​ನಲ್ಲೂ ಬ್ಯಾಟಿಂಗ್ ಮಾಡಿರುವ ಏಕೈಕ ಆಟಗಾರ:

33 ವರ್ಷದ ನರೇನ್ ಕೇವಲ ಸ್ಪಿನ್ನರ್ ಮಾತ್ರವಲ್ಲ, ಅದ್ಭುತ ಬ್ಯಾಟರ್ ಕೂಡ. ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡೋ ತಾಕತ್ತು ಈ ವಿಂಡೀಸ್ ಪ್ಲೇಯರ್​ಗಿದೆ. ಐಪಿಎಲ್​ನಲ್ಲಿ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಈ ಸೀಸನ್​ನಲ್ಲಿ ಮಾತ್ರ ಯಾಕೋ ಅವರ ಬ್ಯಾಟ್ ಸೈಲೆಂಟ್ ಆಗಿದೆ. ಟಿ20 ಕ್ರಿಕೆಟ್​ನಲ್ಲಿ ಸಿಕ್ಕ ಸಿಕ್ಕ ಬೌಲರ್​​ಗಳನ್ನ ದಂಡಿಸೋ ಬ್ಯಾಟರ್​ಗಳು, ನರೇನ್ ಎದುರು ಸೈಲೆಂಟ್ ಆಗಿ ಹೋಗಿದ್ದಾರೆ. ಇದೇ ಸುನಿಲ್ ನರೇನ್ ತಾಕತ್ತು.