* ಐಪಿಎಲ್‌ನಿಂದ ಹೊರಬಿದ್ದ ಸಿಎಸ್‌ಕೆ ಮಾಜಿ ನಾಯಕ ರವೀಂದ್ರ ಜಡೇಜಾ* ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ ಮುನಿಸಿಕೊಂಡ್ರಾ ಜಡ್ಡು?* ಇನ್‌ಸ್ಟಾಗ್ರಾಂನಲ್ಲಿ ಜಡೇಜಾ ಅನ್‌ಪಾಲೋ ಮಾಡಿದ ಸಿಎಸ್‌ಕೆ..!

ಮುಂಬೈ(ಮೇ.12): ಐಪಿಎಲ್​ನಲ್ಲಿ ಇಂದು ಮೋಸ್ಟ್ ಪಾಪ್ಯುಲರ್​ ಟೀಮ್​ಗಳಾದ ಸಿಎಸ್​ಕೆ (Chennai Super Kings) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗ್ತಿವೆ. ಈ ಎರಡು ಟೀಮ್ಸ್​ ಈಗಾಗಲೇ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿವೆ. ಹಾಗಾಗಿ ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಫ್ಯಾನ್ಸ್​ ಸಹ ಆಸಕ್ತಿ ಕಳೆದುಕೊಂಡಿದ್ದಾರೆ. ಆದ್ರೆ ಎಂಎಸ್ ಧೋನಿ ಆಡೋದ್ರಿಂದ ಈ ಪಂದ್ಯ ಕುತೂಹಲ ಕೆರಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್‌ 11 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದ್ದರೆ, ಮುಂಬೈ ಕೇವಲ ಎರಡನ್ನು ಗೆದ್ದಿದೆ. ಮುಂಬೈ ಇಂಡಿಯನ್ಸ್ ಗುರಿ ಒಂದೇ. ಪಾಯಿಂಟ್ ಟೇಬಲ್​ನಲ್ಲಿ ಕೊನೆ ಸ್ಥಾನದಿಂದ ಮೇಲೇಳಬೇಕು. ಅದು ಸಾಧ್ಯವಾಗಬೇಕಾದ್ರೆ ಉಳಿದ ಮೂರಕ್ಕೆ ಮೂರು ಪಂದ್ಯವನ್ನ ಗೆಲ್ಲಬೇಕು. ಆದರೆ ಸೋಲಿನ ಸುಳಿಯಲ್ಲಿ ಸಿಕ್ಕ ಒದ್ದಾಡುತ್ತಿರುವ ಮುಂಬೈ, ಗೆಲುವಿನ ಹಳಿಗೆ ಮರಳುವುದು ತುಂಬಾ ಕಷ್ಟ. ಇಬ್ಬರು ಕೂಲ್ ಕ್ಯಾಪ್ಟನ್​ಗಳ ಕಾಳಗದಲ್ಲಿ ಗೆಲ್ಲೋರ್ಯಾರು ಅನ್ನೋದೇ ಕುತೂಹಲ.

ಜಡೇಜಾ ಇಂಜುರಿನಾ..? ಟೀಮ್​ನಿಂದ ಡ್ರಾಪ್ ಮಾಡಿದ್ದಾ..?:

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಜುರಿಯಾಗಿದ್ದ ಸಿಎಸ್​ಕೆ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja Injury), ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿರಲಿಲ್ಲ. ಈಗ ಇಂದಿನ ಪಂದ್ಯ ಮಾತ್ರವಲ್ಲ, ಇಡೀ ಐಪಿಎಲ್​ನಿಂದಲೇ ಕಿಕೌಟ್ ಆಗಿದ್ದಾರೆ ಅನ್ನೋ ಸುದ್ದಿ ಬಂದಿದೆ. ಸಿಎಸ್​​ಕೆ ಆಡೋ ಉಳಿದ ಮೂರು ಮ್ಯಾಚ್​ಗಳನ್ನೂ ಜಡ್ಡು ಆಡ್ತಿಲ್ಲ. ಹಾಗಾದ್ರೆ ಸರ್ ಜಡೇಜಾಗೆ ಏನಾಗಿದೆ. ನಿಜವಾಗ್ಲೂ ಅವರು ಇಂಜುರಿಯಾಗಿದ್ದಾರಾ..? ಅಥವಾ ಫ್ರಾಂಚೈಸಿ ಜೊತೆ ಕಿರಿಕ್ ಮಾಡಿಕೊಂಡಿದ್ದಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಕೆ ಎಲ್ ರಾಹುಲ್-ಆತಿಯಾ ವಿವಾಹಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟ ಸುನಿಲ್ ಶೆಟ್ಟಿ..!

ಈ ಸೀಸನ್ ಐಪಿಎಲ್​ ಸ್ಟಾರ್ಟ್​ ಆಗೋಕು ಮುನ್ನ ರವೀಂದ್ರ ಜಡೇಜಾ ಅವರನ್ನ ಸಿಎಸ್​ಕೆ ನಾಯಕನನ್ನಾಗಿ ಫ್ರಾಂಚೈಸಿ ನೇಮಿಸಿತ್ತು. ಆದರೆ ಜಡ್ಡು ಕ್ಯಾಪ್ಟನ್ಸಿಯಲ್ಲಿ ಚೆನ್ನೈ ಸೋಲುಗಳನ್ನ ಕಂಡು ಪ್ಲೇ ಆಫ್ ರೇಸ್​ನಿಂದ ಹೊರಬಿತ್ತು. ಜಡೇಜಾ ಸಹ ವೈಯಕ್ತಿಕವಾಗಿ ವಿಫಲರಾದ್ರು. ಇದರಿಂದ ಬೇಸತ್ತ ಜಡ್ಡು, ನಾಯಕತ್ವಕ್ಕೆ ರಾಜೀನಾಮೆ ನೀಡಿ ಮತ್ತೆ ಧೋನಿ ಕೈಗೆ ಚುಕ್ಕಾಣಿ ಕೊಟ್ರು. ಇದು ನಮಗೆ ನಿಮಗೆ ಗೊತ್ತಿರುವ ಸ್ಟೋರಿ. ಆದ್ರೆ ಈಗ ಚೆನ್ನೈನಿಂದ ಬೇರೇನೆ ಸ್ಟೋರಿಯೊಂದು ಬಂದಿದೆ.

ಜಡೇಜಾರನ್ನ ಸಿಎಸ್​ಕೆ ಆನ್​ ಫಾಲೋ ಮಾಡಿದ್ದೇಕೆ..?:

ಜಡೇಜಾ ಮತ್ತು ಸಿಎಸ್​ಕೆ ಫ್ರಾಂಚೈಸಿ ನಡುವೆ ಏನೋ ಕೋಲ್ಡ್ ವಾರ್ ನಡೆದಿದೆ. ಹಾಗಾಗಿ ಜಡ್ಡುನನ್ನ ನಾಯಕತ್ವದಿಂದ ಕೆಳಗಿಳಿಸಿ, ಧೋನಿಯನ್ನ ಮತ್ತೆ ನಾಯಕನನ್ನಾಗಿ ಮಾಡಲಾಗಿದೆ. ಜಡ್ಡು ಇಂಜುಯಾಗಿರೋ ನೆಪವೊಡ್ಡಿ ಟೀಮ್​ನಿಂದಲೇ ಕಿಕೌಟ್ ಮಾಡಲಾಗಿದೆ ಅನ್ನೋ ಸುದ್ದಿ ಬಂದಿದೆ. ಇದಕ್ಕೆ ಇಂಬು ನೀಡುವಂತೆ ಇನ್ ಸ್ಟ್ರಾಗ್ರಾಮ್​ನಲ್ಲಿ ಜಡೇಜಾ ಅವರನ್ನ ಸಿಎಸ್​ಕೆ ಆನ್ ಫಾಲೋ ಮಾಡಿದೆ. ಆಗ್ಲೇ ಈ ಎಲ್ಲಾ ಸುದ್ದಿಗಳು ಹರಿದಾಡಿದ್ದು. ಆದ್ರೆ ಒಳಗಿನ ಮರ್ಮಾ ಮಾತ್ರ ಯಾರೂ ಹೇಳ್ತಿಲ್ಲ. ಜಡೇಜಾ ಇಂಜುರಿ, ಐಪಿಎಲ್​ನಿಂದ ಔಟ್ ಅನ್ನೋ ಸುದ್ದಿ ಮಾತ್ರ ಹೇಳ್ತಿದ್ದಾರೆ. ಒಟ್ನಲ್ಲಿ ಸುರೇಶ್ ರೈನಾ (Suresh Raina) ನಂತರ ಜಡೇಜಾ, ಫ್ರಾಂಚೈಸಿ ಜೊತೆ ಕಿತ್ತಾಡಿಕೊಂಡು ರೈನಾರಂತೆ ಸಿಎಸ್​ಕೆ ಬಿಡ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.