Asianet Suvarna News Asianet Suvarna News

IPL 2022 ಬಟ್ಲರ್ ಏಕಾಂಗಿ ಹೋರಾಟ, ಮುಂಬೈಗೆ 159 ರನ್ ಟಾರ್ಗೆಟ್!

  • ಮುಂಬೈ ಇಂಡಿಯನ್ಸ್‌ಗೆ 159 ರನ್ ಟಾರ್ಗೆಟ್
  • ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ
  • ಮುಂಬೈನಲ್ಲಿ ನಡೆಯುತ್ತಿರುವ ಪಂದ್ಯ
IPL 2022 Jos Buttler help Rajasthan Royals to set 159 run raget to Mumbai Indians ckm
Author
Bengaluru, First Published Apr 30, 2022, 9:25 PM IST

ಮುಂಬೈ(ಏ.30): ಜೋಸ್ ಬಟ್ಲರ್ ಏಕಾಂಗಿ ಹೋರಾಟದಿಂದ ರಾಜಸ್ಥಾನ ರಾಯಲ್ಸ್ ಅಲ್ಪ ಮೊತ್ತ ಭೀತಿಯಿಂದ ಪಾರಾಯಿತು. ಬಟ್ಲರ್ ಹಾಫ್ ಸೆಂಚುರಿ ನೆರವಿನಿಂದ ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.

ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಪಡಿಕ್ಕಲ್ 15 ರನ್ ಸಿಡಿಸಿ ಔಟಾದರು. 26 ರನ್‌ಗೆ ರಾಜಸ್ಥಾನ ರಾಯಲ್ಸ್ ಮೊದಲ ವಿಕೆಟ್ ಕಳೆದುಕೊಂಡಿತು. ಇತ್ತ ನಾಯಕ ಸಂಜು ಸಾಮ್ಸನ್ 16 ರನ್ ಸಿಡಿಸಿ ಔಟಾದರು. 

ಡರಿಲ್ ಮೆಚೆಲ್ ಅಬ್ಬರಿಸುವ ಸೂಚನೆ ನೀಡಿದರೆ. ಆದರೆ ಮಿಚೆಲ್ 20 ಎಸೆತದಲ್ಲಿ 17 ರನ್ ಸಿಡಿಸಿ ಔಟಾದರು.ಜೋಸ್ ಬಟ್ಲರ್ ಹೋರಾಟದಿಂದ ರಾಜಸ್ಥಾನ ಚೇತರಿಸಿಕೊಂಡಿತು. ಬಟ್ಲರ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಬಟ್ಲರ್ 67 ರನ್ ಸಿಡಿಸಿ ಔಟಾದರು.

IPL 2022: ಆರ್‌ಸಿಬಿಗೆ ಹ್ಯಾಟ್ರಿಕ್, ಟೈಟಾನ್ಸ್‌ ಪ್ಲೇ ಆಫ್‌ ಹಾದಿ ಸುಗಮ

ರಿಯಾನ್ ಪರಾಗ್ ಅಬ್ಬರಿಸಲಿಲ್ಲ. ರವಿಚಂದ್ರನ್ ಆಶ್ವಿನ್ 21 ರನ್ ಕಾಣಿಕೆ ನೀಡಿದರು. ಶಿಮ್ರೋನ್ ಹೆಟ್ಮೆಯರ್ ಅಜೇಯ 6 ರನ್ ಸಿಡಿಸಿದರು. ಟ್ರೆಂಟ್ ಬೋಲ್ಡ್ ಅಜೇಯ 1 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು.   

ಇನ್ನೂ ಗೆಲುವು ಕಾಣದ ಮುಂಬೈ ಇಂಡಿಯನ್ಸ್
ಇತಿಹಾಸ ತಮ್ಮ ಪರವಾಗಿದ್ದರೂ ಸಮತೋಲನ ಕಂಡುಕೊಳ್ಳುವವರೆಗೂ ಗೆಲುವು ಒಲಿಯುವುದಿಲ್ಲ ಎನ್ನುವುದಕ್ಕೆ ಮುಂಬೈ ಇಂಡಿಯನ್ಸ್‌ ಉತ್ತಮ ಉದಾಹರಣೆ. ತನ್ನ ಬಹುತೇಕ ಯಶಸ್ವಿ ಆಟಗಾರರನ್ನು ಕೈಬಿಟ್ಟು ಹೊಸ ಸಾಹಸಕ್ಕೆ ಮುಂದಾದ 5 ಬಾರಿ ಚಾಂಪಿಯನ್‌ ಮುಂಬೈ, 15ನೇ ಆವೃತ್ತಿಯ ಐಪಿಎಲ್‌ನಲ್ಲಿ ದಾಖಲೆಯ 8ನೇ ಸೋಲು ಅನುಭವಿಸಿದೆ. ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ 36 ರನ್‌ಗಳಿಂದ ಪರಾಭವಗೊಂಡಿತು.  8 ಪಂದ್ಯಗಳಲ್ಲಿ 5ನೇ ಗೆಲುವು ದಾಖಲಿಸಿದ ಲಖನೌ, ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು 5ನೇ ಸ್ಥಾನಕ್ಕೆ ತಳ್ಳಿ ತಾನು 4ನೇ ಸ್ಥಾನಕ್ಕೇರಿದೆ. ಲಖನೌ ಗೆಲುವಿಗೆ ಪ್ರಮುಖ ಕಾರಣಕರ್ತರು ನಾಯಕ ಕೆ.ಎಲ್‌.ರಾಹುಲ್‌, ವೇಗಿ ದುಷ್ಮಾಂತ ಚಮೀರ ಹಾಗೂ ಸ್ಪಿನ್ನರ್‌ ಕೃನಾಲ್‌ ಪಾಂಡ್ಯ.ರಾಹುಲ್‌ರ ಅಮೋಘ ಶತಕದ ನೆರವಿನಿಂದ ಲಖನೌ 20 ಓವರಲ್ಲಿ 6 ವಿಕೆಟ್‌ಗೆ 168 ರನ್‌ ಕಲೆಹಾಕಿದರೆ, ಚಮೀರ (4 ಓವರಲ್ಲಿ 14 ರನ್‌, 15 ಡಾಟ್‌ ಬಾಲ್‌) ಹಾಗೂ ಕೃನಾಲ್‌ ಪಾಂಡ್ಯ (4 ಓವರ್‌ 19 ರನ್‌ಗೆ 3 ವಿಕೆಟ್‌) ಅವರ ಸೊಗಸಾದ ಸ್ಪೆಲ್‌ಗಳ ನೆರವಿನಿಂದ ಮುಂಬೈ ತಂಡವನ್ನು ಲಖನೌ 8 ವಿಕೆಟ್‌ಗೆ 132 ರನ್‌ಗಳಿಗೆ ಕಟ್ಟಿಹಾಕಿತು.

ಚೆನ್ನೈ ನಾಯಕತ್ವವನ್ನು ಮರಳಿ ಎಂಎಸ್ ಧೋನಿಗೆ ನೀಡಿದ ರವೀಂದ್ರ ಜಡೇಜಾ!

ರೋಹಿತ್‌ ಶೀಘ್ರ ಲಯಕ್ಕೆ: ಗಂಗೂಲಿ ವಿಶ್ವಾಸ
ಐಪಿಎಲ್‌ನಲ್ಲಿ ರನ್‌ ಗಳಿಸಲು ಪರದಾಡುತ್ತಿರುವ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಹಾಗೂ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಬೆನ್ನಿಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನಿಂತಿದ್ದು, ಇಬ್ಬರೂ ಶೀಘ್ರದಲ್ಲೇ ತಮ್ಮ ಎಂದಿನ ಲಯಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಅವರಿಬ್ಬರೂ ಶ್ರೇಷ್ಠ ಆಟಗಾರರು. ಖಂಡಿತಾ ಅವರು ಶೀಘ್ರದಲ್ಲೇ ಲಯ ಕಂಡುಕೊಂಡು ರನ್‌ ಗಳಿಸಲು ಶುರು ಮಾಡುತ್ತಾರೆ. ಕೊಹ್ಲಿ ಈಗ ಯಾವ ಪರಿಸ್ಥಿತಿಯಲ್ಲಿದ್ದಾರೆಂದು ಗೊತ್ತಿಲ್ಲ. ಆದರೆ ಅವರು ಲಯಕ್ಕೆ ಮರಳುತ್ತಾರೆ. ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರ’ ಎಂದು ಕೊಂಡಾಡಿದ್ದಾರೆ.

Follow Us:
Download App:
  • android
  • ios