Asianet Suvarna News Asianet Suvarna News

IPL 2022 ಹಾರ್ದಿಕ್ ಪಾಂಡ್ಯ ಹಾಫ್ ಸೆಂಚುರಿ, ಆರ್‌ಸಿಬಿಗೆ 169 ರನ್ ಗುರಿ

  • 168 ರನ್ ಸಿಡಿಸಿದ ಗುಜರಾತ್ ಟೈಟಾನ್ಸ್
  • ಅಜೇಯ 62 ರನ್ ಸಿಡಿಸಿದ ನಾಯಕ ಹಾರ್ದಿಕ್
  • ಆರ್‌ಸಿಬಿಗೆ ಗೆಲ್ಲಲೇಬೇಕಾದ ಮಹತ್ವ ಪಂದ್ಯ
     
IPL 2022 Hardik Pandya help Gujarat Titans to set 169 run target to Royal Challengers Bangalore ckm
Author
Bengaluru, First Published May 19, 2022, 9:25 PM IST

ಮುಂಬೈ(ಮೇ.19):  ಆರ್‌ಸಿಬಿ ವಿರುದ್ಧದ ಪಂದ್ಯದದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ 5 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿದೆ.  

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಗುಜರಾತ್ ಟೈಟಾನ್ಸ್ ಆರಂಭದಲ್ಲಿ ಶುಬ್‌ಮನ್ ಗಿಲ್ ವಿಕೆಟ್ ಕಳೆದುಕೊಂಡಿತು. ಗಿಲ್ 1 ರನ್ ಸಿಡಿಸಿ ಔಟಾದರು. ಮಾಥ್ಯೂವೇಡ್ 16 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ವೃದ್ಧಿಮಾನ್ ಸಾಹ 31 ರನ್ ಸಿಡಿಸಿದರು. 

ಸಾಹ ವಿಕೆಟ್ ಪತನದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟ ಆರಂಭಗೊಂಡಿತು. ಕಳಪೆ ಫಾರ್ಮ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ ಆಕ್ರಮಣಕಾರಿ ಆಟಕ್ಕಿಂತ ರನ್ ಕಲೆಹಾಕುವತ್ತ ಹೆಚ್ಚಿನ ಗಮನಹರಿಸಿದರು. ಇತ್ತ ಡೇವಿಡ್ ಮಿಲ್ಲರ್ 34 ರನ್ ಕಾಣಿಕೆ ನೀಡಿದರು.

IPL 2022 ಲಖನೌ ಎದುರು ರೋಚಕ ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್..!

ರಾಹುಲ್ ಟಿವಾಟಿಯಾ ಕೇವಲ 2 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ರಶೀದ್ ಖಾನ್ ಜೊತೆ ಸೇರಿದ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಪ್ರಯತ್ನ ಮಾಡಿದರು. ಪರಿಣಾಮ ಹಾರ್ದಿಕ್ ಪಾಂಡ್ಯ ಅಡೇಯ 62 ರನ್ ಸಿಡಿಸಿದರೆ, ರಶೀದ್ ಖಾನ್ ಅಜೇಯ 19 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 5 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿತು.

ಐಪಿಎಲ್‌ನಲ್ಲಿ ರಾಹುಲ್‌ ಸತತ 5 ವರ್ಷ 500+ ರನ್‌: ದಾಖಲೆ!
ಭಾರತದ ತಾರಾ ಕ್ರಿಕೆಟಿಗ, ಲಖನೌ ಸೂಪರ್‌ ಜೈಂಟ್ಸ್‌ ನಾಯಕ ಕೆ.ಎಲ್‌.ರಾಹುಲ್‌ ಸತತ 5ನೇ ಬಾರಿಗೆ ಐಪಿಎಲ್‌ ಆವೃತ್ತಿಯೊಂದರಲ್ಲಿ 500ಕ್ಕೂ ಹೆಚ್ಚು ರನ್‌ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಈ ವರ್ಷ ಅವರು 14 ಪಂದ್ಯಗಳಲ್ಲಿ 537 ರನ್‌ ಕಲೆಹಾಕಿದ್ದು, 2 ಶತಕ ಹಾಗೂ 3 ಅರ್ಧಶತಕ ದಾಖಲಿಸಿದ್ದಾರೆ. ರಾಹುಲ್‌ 2021ರ ಆವೃತ್ತಿಯಲ್ಲಿ 626, 2020ರಲ್ಲಿ 670, 2019ರಲ್ಲಿ 593 ಮತ್ತು 2018ರ ಐಪಿಎಲ್‌ನಲ್ಲಿ 659 ರನ್‌ಗಳನ್ನು ದಾಖಲಿಸಿದ್ದರು. ಐಪಿಎಲ್‌ನಲ್ಲಿ ಒಟ್ಟು 108 ಪಂದ್ಯಗಳನ್ನು ಆಡಿರುವ ಕರ್ನಾಟಕದ ಆಟಗಾರ, 3810 ರನ್‌ ಗಳಿಸಿದ್ದಾರೆ. ಒಟ್ಟು 4 ಶತಕ, 30 ಅರ್ಧಶತಕಗಳು ರಾಹುಲ್‌ರ ಬ್ಯಾಟ್‌ನಿಂದ ಸಿಡಿದಿವೆ. ಐಪಿಎಲ್‌ನಲ್ಲಿ ಒಟ್ಟು 324 ಬೌಂಡರಿ, 159 ಸಿಕ್ಸರ್‌ಗಳನ್ನು ರಾಹುಲ್‌ ಬಾರಿಸಿದ್ದಾರೆ.

IPL 2022 ಲಖನೌಗೆ 2 ರನ್ ರೋಚಕ ಗೆಲುವು, ಟೂರ್ನಿಯಿಂದ ಹೊರಬಿದ್ದ ಕೆಕೆಆರ್!

ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಕೂಡ 5 ಬಾರಿ ಐಪಿಎಲ್‌ನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ ಸತತ 5 ವರ್ಷ ಈ ಸಾಧನೆ ಮಾಡಿರುವುದು ರಾಹುಲ್‌ ಒಬ್ಬರೇ. ಇನ್ನು ಅತಿಹೆಚ್ಚು ಬಾರಿ 500ಕ್ಕೂ ಹೆಚ್ಚು ರನ್‌ ಕಲೆಹಾಕಿದ ದಾಖಲೆ ಡೇವಿಡ್‌ ವಾರ್ನರ್‌ ಹೆಸರಿನಲ್ಲಿದೆ. ವಾರ್ನರ್‌ 6 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Follow Us:
Download App:
  • android
  • ios