ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟಾನ್ಸ್ ರೋಚಕ ಹೋರಾಟಕ್ಕೆ ಸಾಕ್ಷಿಯಾಗಲಿಗೆ ವಾಂಖೆಡೆ ಸನ್‌ರೈಸರ್ಸ್ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ
ಮುಂಬೈ(ಏ.27): ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ 40ನೇ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಇಂದು ಗೆದ್ದ ತಂಡ ನೇರವಾಗಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಗುಜರಾತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೈದರಾಬಾದ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಜೆ ಸುಚಿತ್ ಬದಲು ವಾಶಿಂಗ್ಟನ್ ಸುಂದರ್ ತಂಡ ಸೇರಿಕೊಂಡಿದ್ದಾರೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ವೃದ್ಧಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲ್ಯೂಕಿ ಫರ್ಗ್ಯೂಸನ್, ಯಶ್ ದಯಾಳ್, ಮೊಹಮ್ಮದ್ ಶಮಿ
1 ರನ್ ಗೆ 8 ಲಕ್ಷ..! ಮುಂಬೈ ಇಂಡಿಯನ್ಸ್ ಗೆ ಸಖತ್ ದುಬಾರಿಯಾದ ಇಶಾನ್ ಕಿಶನ್!
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಶೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹಲ್ ತ್ರಿಪಾಠಿ, ಆ್ಯಡಿನ್ ಮರ್ಕ್ರಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಶಿಂಗ್ಟನ್ ಸುಂದರ್, ಮಾರ್ಕೋ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಕೆಂಡ್ ಬೌಲಿಂಗ್ ವೇಳೆ ಡ್ಯೂ ಫ್ಯಾಕ್ಟರ್ ಪರಿಣಾಮ ಬೀರಲಿದೆ. ಆದರೆ ಕಳೆದ 5 ಪಂದ್ಯದಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಈಗಾಗಲೇ ಒಂದು ಪಂದ್ಯ ಆಡಿದೆ. ಇನ್ನು ಸನ್‌ರೈಸರ್ಸ್ ಈ ಆವೃತ್ತಿಯಲ್ಲಿ ಪಂದ್ಯ ಆಡಿಲ್ಲ.
ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಆರಂಭಿಕ 4 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸರಾಸರಿ ಸ್ಕೋರ್ 149. ಆದರೆ ಕಳೆದ 5 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡದ ಸರಾಸರಿ ಸ್ಕೋರ್ 186ರನ್. ಹೈದರಾಬಾದ್ ತಂಡದಲ್ಲಿ ಹೆಚ್ಚು ಬದಲಾವಣೆ ಮಾಡದೇ ಕಣಕ್ಕಿಳಿದು ಯಶಸ್ಸು ಸಾಧಿಸಿದೆ. ಕಾರಣ ಕಳದ 7 ಪಂದ್ಯಗಳಲ್ಲಿ ಕೇವಲ 3 ಬದಲಾವಣೆ ಮಾಡಿದೆ.
IPL 2022: ರಾಜಸ್ಥಾನ ರಾಯಲ್ಸ್ ಎದುರು ಹರ್ಷಲ್ ಪಟೇಲ್ ಈ ರೀತಿ ಮಾಡಿದ್ದು ಸರಿನಾ..?
ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 6 ಗೆಲುವು ಕಂಡಿರುವ ಗುಜರಾತ್ 12 ಅಂಕ ಸಂಪಾದಿಸಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 10 ಅಂಕ ಸಂಪಾದಿಸಿದೆ. ಆದರೆ ಹೈದರಾಬಾದ್ ನೆಟ್ ರನ್ ರೇಟ್ +0.691. ಹೀಗಾಗಿ ಇಂದು ಗುಜರಾತ್ ವಿರುದ್ಧ ಗೆಲುವು ದಾಖಲಿಸಿದರೆ 12 ಅಂಕ ಹಾಗೂ ಅತ್ಯುತ್ತಮ ರನ್‌ರೇಟ್‌ನಿಂದ ಮೊದಲ ಸ್ಥಾನಕ್ಕೇರಲಿದೆ.
ಐಪಿಎಲ್ ಅಂಕಪಟ್ಟಿ;
ಸದ್ಯ ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿರುವ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಇನ್ನು ಎರಡು ಮತ್ತ ಮೂರನೇ ಸ್ಥಾನವನ್ನು ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಅಲಂಕರಿಸಿದೆ. 4ನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ 8 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಪಂದ್ಯಗಳನ್ನು ಆಡಿದ್ದು, 5 ಗೆಲುವು ಸಾಧಿಸಿದೆ. ಈ ಮೂಲಕ 5ನೇ ಸ್ಥಾನದಲ್ಲಿದೆ. ಇನ್ನು 6ನೇ ಸ್ಥಾನಲ್ಲಿರುವ ಪಂಜಾಬ್ ಕಿಂಗ್ಸ್ 8 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಕಂಡಿದೆ. 7ನೇ ಸ್ಥಾನದಲ್ಲಿರುವಡೆಲ್ಲಿ ಕ್ಯಾಪಿಟಲ್ಸ್ 7 ಪಂದ್ಯಗಳ ಪೈಕಿ 3 ಗೆಲುವು ಕಂಡಿದೆ. ಆರಂಭದಲ್ಲಿ ಅಬ್ಬರಿಸಿದ ಕೋಲ್ಕತಾ ನೈಟ್ ರೈಡರ್ಸ್ 8 ಪಂದ್ಯಗಳಲ್ಲಿ ಕೇವಲ 3 ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದೆ. 8 ಪಂದ್ಯಗಳ ಪೈಕಿ ಕೇವಲ 2 ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನದಲ್ಲಿದ್ದರೆ, 8 ರಲ್ಲಿ 8 ಪಂದ್ಯ ಸೋತು, ಇದುವರೆಗೂ ಗೆಲುವು ಕಾಣದ ಮುಂಬೈ ಇಂಡಿಯನ್ಸ್ 10ನೇ ಸ್ಥಾನದಲ್ಲಿದೆ.
