Asianet Suvarna News Asianet Suvarna News

IPL Final ವೀಕ್ಷಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ..! ಮೈದಾನದ ಸುತ್ತ ಬಿಗಿ ಭದ್ರತೆ

* ಐಪಿಎಲ್ 2022 ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ

* ಐಪಿಎಲ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಆಗಮಿಸಲಿದ್ದಾರೆ ಪ್ರಧಾನಿ ಮೋದಿ, ಅಮಿತ್ ಶಾ

* ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಮೈದಾನದ ಸುತ್ತ ಬಿಗಿ ಭದ್ರತೆ

IPL 2022 Final huge Security layer deployed as Amit Shah Narendra Modi set to attend GT vs RR kvn
Author
Bengaluru, First Published May 29, 2022, 11:36 AM IST | Last Updated May 29, 2022, 11:36 AM IST

ಅಹಮದಾಬಾದ್(ಮೇ.29): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ ಫೈನಲ್ (Indian Premier League 2022 Final) ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ (Gujarat Titans vs Rajasthan Royals) ತಂಡಗಳು ಸೆಣಸಾಟ ನಡೆಸಲಿವೆ. ಈ ಮಹತ್ವದ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ (Home Minister Amit Shah) ಸ್ಟೇಡಿಯಂಗೆ ಬಂದು ಪಂದ್ಯ ವೀಕ್ಷಿಸಲಿದ್ದಾರೆ. ಈ ಕಾರಣಕ್ಕಾಗಿ ಮೈದಾನದ ಸುತ್ತ ಮತ್ತಷ್ಟು ಬಿಗಿ ಬಂದೋಬಸ್ತ್‌ ಮಾಡಲಾಗಿದೆ ಎಂದು ವರದಿಯಾಗಿದೆ.

ಐಪಿಎಲ್ ಪಂದ್ಯವನ್ನು ಪ್ರಧಾನಿ ಮೋದಿ, ಅಮಿತ್ ಶಾ ಮಾತ್ರವಲ್ಲದೇ, ಹಲವು ಬಾಲಿವುಡ್ ಸಿನಿ ತಾರೆಯರು ಹಾಗೂ ಗಣ್ಯರು ಫೈನಲ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಸುಮಾರು 6 ಸಾವಿರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಸ್ಟೇಡಿಯಂ ಸುತ್ತ ಬಿಗಿ ಬಂದೋಬಸ್ತ್ ವಹಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ 17 ಡಿಸಿಪಿಗಳು, 4 ಡಿಐಜಿಎಸ್‌, 28 ಎಸಿಪಿ, 51 ಪೊಲೀಸ್ ಇನ್‌ಸ್ಪೆಕ್ಟರ್, 268 ಸಬ್‌-ಇನ್‌ಸ್ಪೆಕ್ಟರ್ ಹಾಗೂ 5,000ಕ್ಕೂ ಅಧಿಕ ಪೇದೆಗಳು, 1000 ಪೇದೆಗಳು ಮತ್ತು ಮೂರು ಖಾಸಗಿ ಭದ್ರತಾ ಕಂಪನಿಯ ಸಿಬ್ಬಂದಿಗಳು ರಕ್ಷಣಾ ಜವಾಬ್ದಾರಿಯನ್ನು ವಹಿಸಿಕೊಂಡಿವೆ ಎಂದು ಅಹಮದಾಬಾದ್ ಪೊಲೀಸ್ ಕಮಿಷನರ್ ಸಂಜಯ್ ಶ್ರೀವಾತ್ಸವ್‌ ತಿಳಿಸಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡವು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ವಿರುದ್ದ ಕಾದಾಡಲಿದೆ. ಲೀಗ್ ಹಂತದ ಮುಕ್ತಾಯದ ವೇಳೆಗೆ ಮೊದಲೆರಡು ಸ್ಥಾನ ಪಡೆದ ತಂಡಗಳೇ ಇದೀಗ ಮತ್ತೊಮ್ಮೆ ಪ್ರಶಸ್ತಿಗಾಗಿ ಸೆಣಸಾಡಲು ಸಜ್ಜಾಗಿವೆ. 

IPL 2022 Final: ಗುಜರಾತ್ ಟೈಟಾನ್ಸ್ vs ರಾಜಸ್ಥಾನ ರಾಯಲ್ಸ್‌ ಫೈನಲ್‌ ಫೈಟ್
 
ಮೋದಿ ಕ್ರೀಡಾಂಗಣದಲ್ಲಿ ಇಂದು 1 ಲಕ್ಷ+ ಪ್ರೇಕ್ಷಕರು!

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ(ಮೊಟೇರಾ)ದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್‌ ಫೈನಲ್‌ಗೆ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ. ವಿಶ್ವ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ಎನ್ನುವ ಹಿರಿಮೆ ಹೊಂದಿರುವ ಈ ಕ್ರೀಡಾಂಗಣವು 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿದ್ದು, ಫೈನಲ್‌ಗೆ ಅಂದಾಜು 1.25 ಲಕ್ಷ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಟಿಕೆಟ್‌ ಮಾರಾಟ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಸೋಲ್ಡ್‌ಔಟ್‌ ಆಗಿದ್ದವು. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸುವ ಉದ್ದೇಶದಿಂದ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಬಾಲಿವುಡ್‌ ತಾರೆಯರು ಪ್ರದರ್ಶನ ನೀಡಲಿದ್ದಾರೆ.

ಅದ್ಧೂರಿ ಸಮಾರೋಪ ಸಮಾರಂಭ: ರಹಮಾನ್‌, ರಣ್‌ವೀರ್‌ ಪ್ರದರ್ಶನ

ಅಹಮದಾಬಾದ್‌: ಭಾನುವಾರ 15ನೇ ಆವೃತ್ತಿ ಐಪಿಎಲ್‌ ಫೈನಲ್‌ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಾಲಿವುಡ್‌ ಖ್ಯಾತ ನಟ ರಣ್‌ವೀರ್‌ ಸಿಂಗ್‌ ಹಾಗೂ ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್‌ ಪಾಲ್ಗೊಂಡು ನೃತ್ಯ, ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 6.20ಕ್ಕೆ ಆರಂಭಗೊಳ್ಳುವ ಸಮಾರಂಭ ಸುಮಾರು 40 ನಿಮಿಷಗಳ ಕಾಲ ನಡೆಯಲಿದೆ. ಅಲ್ಲದೇ ಜಾರ್ಖಂಡ್‌ನ ಪ್ರಸಿದ್ಧ ಚೌ ನೃತ್ಯ ಕಾರ‍್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿದ್ದು, ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳೂ ನಡೆಯಲಿವೆ. 

ಸಮಾರಂಭದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಟೀಂ ಇಂಡಿಯಾದ 7 ದಶಕಗಳ ಕ್ರಿಕೆಟ್‌ ಪಯಣದ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ‍್ಯದರ್ಶಿ ಜಯ್‌ ಶಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Latest Videos
Follow Us:
Download App:
  • android
  • ios