ಲಖನೌ ಹಾಗೂ ಆರ್‌ಸಿಬಿ ನಡುವಿನ ಎಲಿಮಿನೇಟರ್ ಪಂದ್ಯಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ಕೆಸೋತ ತಂಡ ಟೂರ್ನಿಯಿಂದ ಔಟ್, ಗೆದ್ದ ತಂಡ 2ನೇ ಕ್ವಾಲಿಫೈಯರ್ ಪ್ರವೇಶ
ಕೋಲ್ಕತಾ(ಮೇ.25): ಒಂದು ಸಣ್ಣ ತಪ್ಪಿಗೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಕಾರಣ ಇದು ಎಲಿಮಿನೇಟರ್ ಪಂದ್ಯ. ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ. ಈ ಮಹತ್ವದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಮಳೆಯಿಂದ ಟಾಸ್ ವಿಳಂಬವಾಗಿತ್ತು.
ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ಸಿರಾಜ್ ತಂಡ ಸೇರಿಕೊಂಡಿದ್ದಾರೆ. ಲಖನೌ ತಂಡದಲ್ಲಿ ಕೆ ಗೌತಮ್ ಹಾಗೂ ಜಾನ್ಸಲ್ ಬದಲು ಕ್ರುನಾಲ್ ಪಾಂಡ್ಯ ಹಾಗೂ ಚಮೀರಾ ತಂಡ ಸೇರಿಕೊಂಡಿದ್ದಾರೆ. ಗೆಲ್ಲಲೇಬೇಕಾದ ಒತ್ತಡಲ್ಲಿ ಎರಡೂ ತಂಡಗಳಿವೆ. ಹೀಗಾಗಿ ರೋಚಕ ಹೋರಾಟ ಏರ್ಪಡಲಿದೆ.
IPL 2022 ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿ, ಆರ್‌ಸಿಬಿಗೆ ಆತಂಕ, ಲಖನೌಗೆ ಲಕ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11
ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್, ವಾನಿಂಡು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೆಜಲ್‌ವುಡ್, ಮೊಹಮ್ಮದ್ ಸಿರಾಜ್
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕ್ವಿಂಟನ್ ಡಿಕಾಕ್, ಕೆಎಲ್ ರಾಹುಲ್(ನಾಯಕ), ಇವಿನ್ ಲಿವಿಸ್, ದೀಪಕ್ ಹೂಡ, ಕ್ರುನಾಲ್ ಪಾಂಡ್ಯ, ಮನನ್ ವೋಹ್ರಾ, ಮಾರ್ಕಸ್ ಸ್ಟೊಯ್ನಿಸ್, ಮೊಹ್ಸಿನ್ ಖಾನ್, ಅವೇಶ್ ಖಾನ್, ದುಷ್ಮಂತ್ ಚಮೀರಾ, ರವಿ ಬಿಶ್ನೋಯ್
ಅಂಕಪಟ್ಟಿಯಲ್ಲಿ ಲಖನೌ ಅಧಿಕಾರಯುತವಾಗಿ ಪ್ಲೇ ಆಫ್ ಪ್ರವೇಶಿಸಿತ್ತು. ಅಂತಿಮ ಹಂತದಲ್ಲಿ ಕೆಲ ಸೋಲುಗಳಿಂದ ಲಖನೌ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ ಆರ್‌ಸಿಬಿ ತನ್ನೆಲ್ಲಾ ಪ್ರಯತ್ನದ ಬಳಿಕ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ಪಾರ್ಥಿಸಿತ್ತು. ಅದೃಷ್ಠವಶಾತ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತ್ತು. ಈ ಮೂಲಕ ಆರ್‌ಸಿಬಿ 4ನೇ ಸ್ಥಾನ ಖಚಿತಪಡಿಸಿಕೊಂಡಿತು.
IPL 2022 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್, ರಾಜಸ್ಥಾನ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅತ್ಯುತ್ತಮ ಅವಕಾಶ ಒದಗಿಬಂದಿದೆ. ಜೊತೆಗೆ ಅದೃಷ್ಠವೂ ಬೆನ್ನಿಗಿದೆ. ಹೀಗಾಗಿ ಈ ಬಾರಿ ಆರ್‌ಸಿಸಿ ಹೊಸ ಇತಿಹಾಸ ಬರೆದರೂ ಅಚ್ಚರಿಯಿಲ್ಲ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಸತತ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇದು ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಹಾಗೂ ಈಗಾಗಲೇ ಫೈನಲ್ ಪ್ರವೇಶಿಸಿರುವ ಗುಜರಾತ್ ಟೈಟಾನ್ಸ್ ತಂಡವನ್ನೇ ಮಣಿಸಿತ್ತು. 169 ರನ್ ಟಾರ್ಗೆಟ್ ಚೇಸ್ ಮಾಡಿದ ಆರ್‌ಸಿಬಿ 8 ವಿಕೆಟ್ ಗೆಲುವು ದಾಖಲಿಸಿತ್ತು. ಕೊಹ್ಲಿ 73 ರನ್ ಸಿಡಿಸಿದರೆ, ನಾಯಕ ಫಾಫ್ ಡುಪ್ಲೆಸಿಸ್ 44 ರನ್ ಕಾಣಿಕೆ ನೀಡಿದರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 40 ರನ್ ಸಿಡಿಸಿದ್ದರು. ಇದರೊಂದಿಗೆ ಆರ್‌ಸಿಬಿ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯದಿಂದ ಹೊರಬಂದಿತ್ತು.
