ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿ, ಆರ್‌ಸಿಬಿಯಲ್ಲಿ ಆತಂಕ ಟಾಸ್ ವಿಳಂಭ, ಮಳೆ ನಿಯಮದ ಅನ್ವಯಿಸಿದರೆ ಆರ್‌ಸಿಬಿ ಹಿನ್ನಡೆ ಮಳೆಯಿಂದ ಪಂದ್ಯ ರದ್ದಾದರೆ ಲಖನೌ ಪ್ಲೇ ಆಫ್‌ಗೆ ಲಗ್ಗೆ

ಕೋಲ್ಕತಾ(ಮೇ.25): ಐಪಿಎಲ್ 2022 ಟೂರ್ನಿ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಕಾಟ ಜೋರಾಗಿದೆ. ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಇದರಿಂದ ಟಾಸ್ ವಿಳಂಭವಾಗಿದೆ.

ಮಳೆ ಆರಂಭಗೊಳ್ಳುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆತಂಕ ಹೆಚ್ಚಾಗಿದೆ. ಕಾರಣ ಮಳೆಯಿಂದ ಪಂದ್ಯ ಸಂಪೂರ್ಣ ರದ್ದಾದರೆ ಲಖನೌ ಸೂಪರ್ ಜೈಂಟ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರಬೀಳಲಿದೆ

IPL 2022 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್, ರಾಜಸ್ಥಾನ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್!

ಒಂದೊಮ್ಮೆ ನಿಗದಿತ ಸಮಯದೊಳಿಗೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಕೇವಲ ಸೂಪರ್‌ ಓವರ್‌ ವಿಜೇತರನ್ನು ನಿರ್ಧರಿಸಲಿದೆ. ಟಿ20 ಕ್ರಿಕೆಟ್‌ನಲ್ಲಿ ಕೇವಲ ಸೂಪರ್‌ ಓವರ್‌ನಿಂದಲೇ ಫಲಿತಾಂಶ ನಿರ್ಧರಿಸುವ ನಿಯಮ ಇದೇ ಮೊದಲು.

ಫೈನಲ್‌ ಸೇರಿ ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶವನ್ನು ನೀಡಲಾಗಿದೆ. ಮೊದಲ 3 ಪಂದ್ಯಗಳು ಮಳೆಯಿಂದಾಗಿ ವಿಳಂಬಗೊಂಡರೆ ಓವರ್‌ ಕಡಿತಗೊಳಿಸದೆ ರಾತ್ರಿ 9.40ಕ್ಕೆ ಆರಂಭಿಸಲು ಗಡುವು ನೀಡಲಾಗಿದೆ. ಒಂದು ವೇಳೆ ತಲಾ 5 ಓವರ್‌ ಪಂದ್ಯ ನಡೆಸಲು ಅವಕಾಶ ಸಿಕ್ಕರೆ ಆ ಪಂದ್ಯವನ್ನು ಆರಂಭಿಸಲು ರಾತ್ರಿ 11.56ರ ವರೆಗೂ ಸಮಯವಿರಲಿದೆ. 5 ಓವರ್‌ ಪಂದ್ಯದಲ್ಲಿ ಟೈಮ್‌ ಔಟ್‌ ಇರುವುದಿಲ್ಲ. ಅಲ್ಲದೇ ಮಧ್ಯರಾತ್ರಿ 12.50ರೊಳಗೆ ಪಂದ್ಯ ಮುಗಿಯಬೇಕು.

5 ಓವರ್‌ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಸೂಪರ್‌ ಓವರ್‌ ನಡೆಯಲಿದೆ. ಸೂಪರ್‌ ಓವರ್‌ ಆರಂಭಿಸಲು ಮಧ್ಯರಾತ್ರಿ 12.50ರ ವರೆಗೂ ಸಮಯವಿರಲಿದೆ. ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರ ನಿರ್ಧಾರವಾಗಲಿದೆ. ಕ್ವಾಲಿಫಯರ್‌-1 ಮಳೆಗೆ ಬಲಿಯಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್‌ ನೇರವಾಗಿ ಫೈನಲ್‌ಗೇರಲಿದೆ. ರಾಜಸ್ಥಾನ ಕ್ವಾಲಿಫಯರ್‌-2ರಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್‌ ಪಂದ್ಯ ಮಳೆಗೆ ಆಹುತಿಯಾದರೆ, ಆರ್‌ಸಿಬಿ ಹೊರಬೀಳಲಿದ್ದು, 2ನೇ ಕ್ವಾಲಿಫಯರ್‌ ಪಂದ್ಯಕ್ಕೆ ಲಖನೌ ಪ್ರವೇಶ ಪಡೆಯಲಿದೆ.

ಬೆಂಗಳೂರು ನನ್ನ ಎರಡನೇ ತವರು: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಎಬಿ ಡಿವಿಲಿಯರ್ಸ್‌..!

ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿಟ್ಟ ಹೋರಾಟ ನೀಡಿತ್ತು. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಿದೆ. ಕಳಪೆ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ. ತಂಡದ ಟಾಪ್ ಆರ್ಡರ್ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿತ್ತು. 

ನೆಟ್ಸ್‌ನಲ್ಲಿ ಸತತ 90 ನಿಮಿಷ ಬ್ಯಾಟಿಂಗ್‌ ಮಾಡಿದ್ದೆ: ಕೊಹ್ಲಿ
ಗುಜರಾತ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 73 ರನ್‌ ಗಳಿಸಿ ಆರ್‌ಸಿಬಿಗೆ ಆಪತ್ಬಾಂಧವರಾದ ಬಂದ ವಿರಾಟ್‌ ಕೊಹ್ಲಿ ಪಂದ್ಯಕ್ಕೂ ಮುನ್ನ ನಿರಂತರ ಅಭ್ಯಾಸ ನಡೆಸಿದ್ದಾಗಿ ತಿಳಿಸಿದ್ದಾರೆ. ಪಂದ್ಯ ಬಳಿಕ ಮಾತನಾಡಿದ ಅವರು, ನಿಜವಾಗಿಯೂ ಕಠಿಣ ಪರಿಶ್ರಮ ವಹಿಸಿದ್ದೇನೆ. ಈ ಪಂದ್ಯಕ್ಕೂ ಹಿಂದಿನ ದಿನ ನೆಟ್ಸ್‌ನಲ್ಲಿ 90 ನಿಮಿಷಗಳ ಕಾಲ ನಿರಂತರವಾಗಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದೇನೆ. ನಮ್ಮ ಪಾಲಿಗೆ ಇದು ಮಹತ್ವದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ತಂಡದ ಪರ ಪರಿಣಾಮ ಬೀರಲು ಸಾಧ್ಯವಾಗಿದೆ. ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಲು ಸಾಧ್ಯವಾಗಿದೆ’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕೊಹ್ಲಿ ಹೇಳಿದ್ದಾರೆ.