IPL ಫೈನಲ್ ಪಂದ್ಯಕ್ಕೂ ಮೊದಲು ವರ್ಣರಂಜಿತ ಸಮಾರಂಭ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ ಅದ್ಭುತ ಪ್ರದರ್ಶನ ಸಂಗೀತ ನಿರ್ದೇಶ ಏರ್ ರೆಹಮಾನ್‌ನಿಂದ ಸಂಗೀತ ರಸ ಸಂಜೆ
ಅಹಮ್ಮದಾಬಾದ್(ಮೇ.29): IPL 2022 ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವರ್ಣರಂಜಿತ ಸಮಾರೋಪ ಸಮಾರಂಭ ಟೂರ್ನಿ ಕಳೆ ಹೆಚ್ಚಿಸಿದೆ. ಬಾಲಿವುಡ್ ನಟ ರಣವೀರ್ ಸಿಂಗ್, ಸಂಗೀತ ನಿರ್ದೇಶಕ ಎರ್ ಆರ್ ರೆಹಮಾನ್ ನಡೆಸಿಕೊಟ್ಟ 40 ನಿಮಿಷಗಳ ಅದ್ಧೂರಿ ಕಾರ್ಯಕ್ರಮ ಅಭಿಮಾನಿಗಳ ಮನೆಸೂರೆಗೊಂಡಿತು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಐಪಿಎಲ್ ಅಭಿಮಾನಿಗಳ ಮನಸೂರೆಗೊಂಡಿತು. ರಣವೀರ್ ಸಿಂಗ್ ಅದ್ಭುತ ಡ್ಯಾನ್ಸ್ ಇಡೀ ಕ್ರೀಡಾಂಗಣದಲ್ಲಿ ಹೊಸ ಚೈತನ್ಯ ನೀಡಿತು. ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಡ್ಯಾನ್ಸ್ ಮಾಡಿ ರಂಜಿಸಿದರು. ಇನ್ನು ಯಶ್ ಅಭಿನಯದ ಕೆಜಿಎಫ್ ಚಿತ್ರದ ಡೈಲಾಗ್ ಕೂಡ ಸಮಾರೋಪ ಸಮಾರಂಭದಲ್ಲಿ ಮೇಳೈಸಿತು.
IPL 2022 ಆರ್‌ಸಿಬಿಗೆ 7 ಕೋಟಿ ರೂ, ಚಾಂಪಿಯನ್ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು?
ಎರ್ ಆರ್ ರೆಹಮಾನ್ ಐಕಾನಿಕ್ ವಂದೇ ಮಾತರಂ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಕಳೆದ 8 ದಶಕಗಳಿಂದ ಟೀಂ ಇಂಡಿಯಾ ಕಾರ್ಯಕ್ರಮಗಳಲ್ಲಿ ಹಾಡಿನ ಮೂಲಕ ರೆಹಮಾನ್ ರಂಜಿಸಿದ್ದಾರೆ. ಇತ್ತ ರ್ಯಾಪ್ ಸಾಂಗ್ ಮೂಲಕವೂ ರಹೆಮಾನ್ ರಂಜಿಸಿದರು.
;
15ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ನಡೆಯಿತು. ರಣ್‌ವೀರ್ ಸಿಂಗ್ ಹಾಗೂ ಎ.ಆರ್.ರಹಮಾನ್ ನೃತ್ಯ, ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. 6.20ಕ್ಕೆ ಆರಂಭಗೊಂಡ ಸಮಾರಂಭ ಸುಮಾರು 40 ನಿಮಿಷಗಳ ಕಾಲ ನಡೆಯಿತು.. ಅಲ್ಲದೇ ಜಾರ್ಖಂಡ್‌ನ ಪ್ರಸಿದ್ಧ ಚೌ ನೃತ್ಯ ಕಾರ‍್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸಮಾರಂಭದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಟೀಂ ಇಂಡಿಯಾದ 7 ದಶಕಗಳ ಕ್ರಿಕೆಟ್ ಪಯಣದ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
IPL 2022: RCB ಕಪ್ ಗೆಲ್ಲೋವರೆಗೂ ಮದುವೆಯಾಗೊಲ್ಲ, ಬೆಂಗಳೂರು ಫ್ಯಾನ್ ಪೋಸ್ಟರ್ ವೈರಲ್..!
ಅತೀ ದೊಡ್ಡ ಕ್ರಿಕೆಟ್ ಜರ್ಸಿ ಅನಾವರಣ
ವರ್ಣರಂಜಿತ ಸಮಾರೋಪ ಸಮಾರಂಭಕ್ಕೂ ಮೊದಲು ಬಿಸಿಸಿಐ ಕ್ರಿಕೆಟ್‌ನ ಅತೀ ದೊಡ್ಡ ಜರ್ಸಿ ಅನಾವರಣ ಮಾಡಿತು. 10 ತಂಡಗಳ ಲೋಗೋ ಇರುವ ಈ ಜರ್ಸಿ ಗಿನ್ನಿಸ್ ದಾಖಲೆ ಬರೆಯಿತು.
