* ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಫೇಲ್* ಇತಿಹಾಸ ಮರುಕಳಿಸಿದರೆ 4ನೇ ಪಂದ್ಯದಿಂದ ರನ್ ಮಳೆ ಗ್ಯಾರಂಟಿ* ಈ ಹಿಂದಿನ ಆವೃತ್ತಿಗಳಲ್ಲೂ ಮೊದಲ 3 ಪಂದ್ಯ ಫೇಲ್ ಆಗಿದ್ದ ಗಾಯಕ್ವಾಡ್
ಬೆಂಗಳೂರು(ಏ.06): 0,1,1. ಕಳೆದ ಐಪಿಎಲ್ ಶೂರ, ಆರೆಂಜ್ ಕ್ಯಾಪ್ (Orange Cap) ವಿನ್ನರ್ ಋತುರಾಜ್ ಗಾಯಕ್ವಾಡ್ (Ruturaj Gaikwad) ಪ್ರಸಕ್ತ ಐಪಿಎಲ್‌ನಲ್ಲಿ ಗಳಿಸಿದ ರನ್ಗಳಿವು. ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಡಕೌಟ್ ಆದ್ರೆ, ಲಖನೌ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ತಲಾ 1 ರನ್ಗೆ ಆಟ ನಿಲ್ಲಿಸಿದ್ರು. ಆರಂಭಿಕ ಮೂರು ಪ್ಲಾಫ್ ಶೋ ನೀಡಿರೋ ಚೆನ್ನೈ ಓಪನರ್ ವಿರುದ್ಧ ಟೀಕಾಸ್ತ್ರ ಪ್ರಯೋಗವಾಗ್ತಿದೆ. ಆದ್ರೆ ಋತುರಾಜ್ರನ್ನ ಟೀಕಿಸೋ ಮುನ್ನ ಇನ್ನೂ ಒಮ್ಮೆ ಯೋಚಿಸಿ. ಯಾಕಂದ್ರೆ ಮೊದಲ ಮೂರು ಬ್ಯಾಡ್ ಇನ್ನಿಂಗ್ಸ್ ಕೊನೆಯಲ್ಲ. ಅದನ್ನು ಕೊನೆಯಾಗಿಸುವ ಪ್ಲೇಯರ್ ಗಾಯಕ್ವಾಡ್ ಅಲ್ಲ ಅನ್ನೋದು ಕೂಡ ನಿಮಗೆ ನೆನಪಿರ್ಲಿ. ಯಾಕಂದ್ರೆ ಋತುರಾಜ್ ಐಪಿಎಲ್ ಹಿಸ್ಟರಿ ಕೆದಕಿದ್ರೆ ಆತನ ಆಸಲಿ ಆಟ ಶುರುವಾಗೋದೆ 4ನೇ ಪಂದ್ಯದಿಂದ.
ಮೂರು ಅವೃತ್ತಿ. ಮೊದಲ 3 ಪಂದ್ಯದಲ್ಲಿ ಪ್ಲಾಫ್ ಶೋ, 4ನೇ ಪಂದ್ಯದಿಂದ ಗಾಯಕ್ವಾಡ್ರ ಅಸಲಿ ಆಟ ಶುರು: ಹೌದು, ರನ್ ಮಶೀನ್ ಗಾಯಕ್ವಾಡ್ ಈ ಸೀಸನ್ ಮಾತ್ರವಲ್ಲ, ಹಿಂದಿನ ಎರಡು ಸೀಸನ್ನ ಆರಂಭಿಕ ಮೂರು ಪಂದ್ಯಗಳಲ್ಲಿ ರನ್ ಬರ ಎದುರಿಸಿದ್ದಾರೆ. ನಂತರವಷ್ಟೇ ರನ್ ಹೊಳೆ ಹರಿಸ್ತಾರೆ, ಟೆರಿಬಲ್ ಪರ್ಫಾಮೆನ್ಸ್ ನೀಡ್ತಾರೆ.
IPL 2020. ಫಸ್ಟ್ 3 ಮ್ಯಾಚ್ 5 ರನ್. ಬಳಿಕ 199 ರನ್
2020ರಲ್ಲಿ ಐಪಿಎಲ್ ಲೋಕಕ್ಕೆ ಎಂಟ್ರಿಕೊಟ್ಟ ಋತುರಾಜ್, ಮೊದಲ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದ್ರು. ಎರಡು ಪಂದ್ಯಗಳಲ್ಲಿ ಡಕೌಟ್ ಆದ್ರೆ, ಒಂದು ಪಂದ್ಯದಲ್ಲಿ 5 ರನ್ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಬಳಿಕ ಸಿಡಿದೆದ್ದ ಗಾಯಕ್ವಾಡ್ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ್ರು. ಟೂರ್ನಿಯಲ್ಲಿ 204 ರನ್ ಬಾರಿಸಿದ್ರು. ಇದರ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು (Chennai Super Kings) ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.
IPL 2022 'ಆರ್‌ಸಿಬಿ ಐ ಯಾಮ್ ಸಾರಿ' ಎಂದುಬಿಟ್ರಾ ಯುಜುವೇಂದ್ರ ಚಹಲ್..!
IPL 2021. ಫಸ್ಟ್ 3 ಮ್ಯಾಚ್ ಫೇಲ್. ಕೊನೆಗೆ ಆರೆಂಜ್ ಕ್ಯಾಪ್ ವಿನ್ನರ್
ಇನ್ನು 2020ರಂತೆ 2021ರಲ್ಲೂ ಆರಂಭಿಕ ಮೂರು ಐಪಿಲ್ ಮ್ಯಾಚ್ನಲ್ಲಿ ಕಳಪೆ ಆಟವಾಡಿದ್ರು. ಆದ್ರೆ ಆ ಬಳಿಕ ಹಿಸ್ಟರಿ ಸೃಷ್ಟಿಸಿದ್ರು. 4ನೇ ಮ್ಯಾಚ್ನಿಂದ ರನ್ ಗುಡ್ಡೆ ಹಾಕಿ ಆರೆಂಜ್ ಕ್ಯಾಪ್ ವಿನ್ನರ್ ಆದ್ರು. 1 ಸೆಂಚುರಿ, 4 ಹಾಫ್ಸೆಂಚುರಿ ಸಹಿತ ಒಟ್ಟು 635 ರನ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಗೆ ಕಾರಣರಾಗಿದ್ರು. ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಸ್ಪರ್ಧೆಗೆ ಬಿದ್ದವರಂತೆ ರನ್ ಬಾರಿಸುವ ಮೂಲಕ ಅಬ್ಬರಿಸಿದ್ದರು.
ಈ ಬಾರಿಯೂ 2020-21ರ ಆರ್ಭಟ ರಿಪೀಟ್ ಆಗುತ್ತಾ..?
ಈ ಹಿಂದಿನ ಆವೃತ್ತಿಗಳಂತೆ ಋತುರಾಜ್ ಪ್ರಸಕ್ತ ಐಪಿಎಲ್‌ನಲ್ಲಿ 4ನೇ ಪಂದ್ಯದಿಂದ ಲಯಕ್ಕೆ ಮರಳಬೇಕಿದೆ. ಆ ಕೆಪಾಸಿಟಿ ಗಾಯಕ್ವಾಡ್ಗಿದೆ.ಆದರೆ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಋತುರಾಜ್ ಗಾಯಕ್ವಾಡ್‌ಗೆ ಸೂಕ್ತ ಮಾರ್ಗದರ್ಶನ ನೀಡಲು ಫಾಫ್ ಡು ಪ್ಲೆಸಿಸ್ (Faf du Plessis) ಇದ್ರು, ಆದರೆ ಈ ಬಾರಿ ಫಾಫ್ ಆರ್‌ಸಿಬಿ ತಂಡದಲ್ಲಿದ್ದಾರೆ. ಇದೆಲ್ಲದರ ಹೊರತಾಗಿ ಇತಿಹಾಸ ಮರುಕಳಿಸಿದರೆ, ಋತುರಾಜ್ ಗಾಯಕ್ವಾಡ್ ಅಬ್ಬರವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ಯಂಗ್ಮ್ಯಾನ್ಗೆ ಶನಿವಾರದಿಂದ ಕೇಡುಗಾಲ ಮುಗಿಯಲಿದೆ. ಇನ್ನೇನಿದ್ರು ಶುಭಕಾಲ. ಹಾಫ್ ಸೆಂಚುರಿ, ಸೆಂಚುರಿ ವೈಭವವನ್ನ ನೀವು ಕಣ್ತುಂಬಿಕೊಳ್ಳಲು ಸಜ್ಜಾಗಿ.
