* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜತೆಗಿನ ಚಹಲ್‌ ನಂಟು ಅಂತ್ಯ* ಆರ್‌ಸಿಬಿ ಎದುರು ಮೊದಲ ಪಂದ್ಯವನ್ನಾಡಿದ ಲೆಗ್‌ ಸ್ಪಿನ್ನರ್* ಆರ್‌ಸಿಬಿ ಎದುರು ಶಿಸ್ತುಬದ್ದ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದ ಚಹಲ್

ಮುಂಬೈ(ಏ.06): ಐಪಿಎಲ್​​​​​ ಬರೀ ಮನರಂಜನೆಯ ಕೂಟವಲ್ಲ. ಇಲ್ಲಿ ಬರೀ ಹಣದ ಹೊಳೆ ಹರಿಯಲ್ಲ. ಸಂಬಂಧಗಳು ಚಿಗುರುತ್ತೆ. ದೇಶಿ-ವಿದೇಶಿ ಪ್ಲೇಯರ್ಸ್​ ನಡುವಿನ ಒಡನಾಟ ಗಟ್ಟಿಗೊಳ್ಳುತ್ತೆ. ಕ್ರೀಡೆಗೆ ಆ ಶಕ್ತಿ ಇದೆ. ಇಂತಹ ಸ್ನೇಹ ಸಂಬಂಧಕ್ಕೆ, ಭಾವನಾತ್ಮಕ ಬೆಸುಗೆಗೆ ಯುಜವೇಂದ್ರ ಚಹಲ್​ಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ನಿಮಗೆಲ್ಲರಿಗೂ ಗೊತ್ತಿದೆ. ಇಂದು ಯುಜುವೇಂದ್ರ ಚಹಲ್ (Yuzvendra Chahal) ಅನ್ನೋ ಮಿಸ್ಟ್ರಿ ಸ್ಪಿನ್ನರ್ ಅಪಾರ ನೇಮ್​ ಆ್ಯಂಡ್ ಫೇಮ್​ ಗಳಿಸಿದ್ದಾರಂದ್ರೆ ಅದಕ್ಕೆ ಕಾರಣ ಆರ್​ಸಿಬಿ.

ಯುಜುವೇಂದ್ರ ಚಹಲ್​ ಪಾಲಿಗೆ ಆರ್​ಸಿಬಿ (RCB) ಅನ್ನೋದು ಬರೀ ಒಂದು ಫ್ರಾಂಚೈಸಿ ಮಾತ್ರವಲ್ಲ, ಅದೊಂದು ಅಟ್ಯಾಚ್​​ಮೆಂಟ್​​. ಅದೊಂದು ಸ್ಪೆಷಲ್​​ ಲವ್​​. ಅದು ಮಧುರ ನೆನಪುಗಳ ಬುತ್ತಿ. ಹೀಗೆ ಸದಾ ರೆಡ್ ಆರ್ಮಿ ಸ್ಮರಿಸೋ ಸ್ಟಾರ್ ಸ್ಪಿನ್ನರ್ ಚಹಲ್​ ಮಂಗಳವಾರ ಮಾತ್ರ ಆರ್​ಸಿಬಿಗೆ ಐಯಮ್​​ ಸಾರಿ ಅಂದುಬಿಟ್ರು. ಯಾಕಂದ್ರೆ ಚಹಲ್​​ ಹಾಗೂ ಆರ್​ಸಿಬಿ ನಡುವಿನ ಆ ಸ್ನೇಹ ನಿನ್ನೆಗೆ ಕೊನೆಗೊಂಡಿತ್ತು. 

RCB ಜತೆಗಿನ 8 ವರ್ಷದ ಸಂಬಂಧಕ್ಕೆ ಚಹಲ್ ಗುಡ್​​​ಬೈ:

ಆರ್​ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ನಡುವಿನ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು. ಅದೇನಂದ್ರೆ ಆರ್​ಸಿಬಿಯನ್ನೇ ಉಸಿರಾಗಿಸಿಕೊಂಡಿದ್ದ ಚಹಲ್​​ ನಿನ್ನೆ ಅದೇ ತಂಡದ ವಿರುದ್ಧ ಕಣಕ್ಕಿಳಿದ್ರು. ಬರೋಬ್ಬರಿ 8 ವರ್ಷಗಳ ಬಳಿಕ ರೆಡ್ ಆರ್ಮಿ ಬದಲು ಪಿಂಕ್​​ ಜೆರ್ಸಿ ತೊಟ್ಟು ರಾಜಸ್ಥಾನ ರಾಯಲ್ಸ್ ಪರ ಕಣ ಆಡಿದ್ರು.

IPL 2022: RCB ಕಾಲೆಳೆಯಲು ಹೋಗಿ ತಾನೇ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್..!

ನಿಮಗೆ ಗೊತ್ತಿರ್ಲಿಲ್ಲ. ನಿನ್ನೆಯ ಪಂದ್ಯ ಬಿಟ್ಟು ಚಹಲ್​ ಐಪಿಎಲ್​​ನಲ್ಲಿ ಒಟ್ಟು 116 ಪಂದ್ಯಗಳನ್ನಾಡಿದ್ದಾರೆ. ಆ ಪೈಕಿ 115 ಪಂದ್ಯಗಳನ್ನ ಆರ್​ಸಿಬಿ ಪರ ಆಡಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಮುಂಬೈ ಇಂಡಿಯನ್ಸ್ (Mumbai Indians) ಪರ ಕಾಣಿಸಿಕೊಂಡಿದ್ದಾರೆ. 2014ರಲ್ಲಿ ರೆಡ್ ಆರ್ಮಿ ಸೇರಿದ ಚಹಲ್​ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ತಂಡದ ಕಾಯಂ ಬೌಲರ್ ಆಗಿ ಗುರುತಿಸಿಕೊಂಡ್ರು. 144 ವಿಕೆಟ್ ಪಡೆದು ಲೆಕ್ಕವಿಲ್ಲದಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ರು. ಇಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಟೀಮ್​ ಇಂಡಿಯಾಗೂ (TTeam India) ಎಂಟ್ರಿ ಕೊಟ್ರು. 

ಹಣಕ್ಕಾಗಿ ರಾಜಸ್ಥಾನ ಸೇರಿಲ್ಲ.. ಆರ್​ಸಿಬಿ ಅಂದ್ರೆ ಜೀವಾಳ..:

ಇನ್ನು ರಿಸ್ಟ್ ಸ್ಪಿನ್ನರ್ ರಾಜಸ್ಥಾನ ಸೇರ್ತಿದ್ದಂತೆ ಅವರ ಮೇಲೆ ಇಂತಹದೊಂದು ಆರೋಪ ಕೇಳಿ ಬಂದಿತ್ತು. ಆದ್ರೆ ಚಹಲ್ ಇದನ್ನ ಅಲ್ಲಗಳೆದ್ರು. ನನಗೆ ಹಣ ಮುಖ್ಯ ಆಗಿರ್ಲಿಲ್ಲ. ಯಾಕಂದ್ರೆ ಆರ್​ಸಿಬಿ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ, ಬೆಂಬಲ ಸಿಕ್ಕಿದೆ. ಆದ್ರೆ ಟೀಮ್ ಮ್ಯಾನೇಜ್​​ಮೆಂಟ್​ ಆಕ್ಷನ್​​​ನಲ್ಲಿ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ. ಹಾಗಾಗಿ ನನ್ನನ್ನ ರಾಜಸ್ಥಾನ ಖರೀದಿಸ್ತು ಎಂದು ಇತ್ತೀಚೆಗಷ್ಟೇ ಹೇಳಿದ್ರು. 

ಇನ್ನು ನಿನ್ನೆಯ ಪಂದ್ಯದಲ್ಲಿ ಆರ್​​ಸಿಬಿಯ 2 ವಿಕೆಟ್ ಪಡೆದ ಚಹಲ್, ವಿರಾಟ್ ಕೊಹ್ಲಿ (Virat Kohli) ಅವರನ್ನ ರನೌಟ್ ಸಹ ಮಾಡಿದ್ರು. ನಿನ್ನೆ ಆರ್​​ಸಿಬಿಗೆ ಶಾಕ್ ನೀಡಿದ್ದೇ ಚಹಲ್. ಆದರೂ ರಾಯಲ್ಸ್ ವಿರುದ್ಧ ಆರ್​​ಸಿಬಿ ರೋಚಕ ಜಯ ಸಾಧಿಸಿತು. ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಮೋಘ ಜತೆಯಾಟವಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲಿನ ಕಹಿಯುಂಡಿದೆ.