Asianet Suvarna News Asianet Suvarna News

IPL 2022 ಲಖನೌ ಮಣಿಸಿದ ರಾಜಸ್ಥಾನ, ಪ್ಲೇ ಆಫ್ ರೇಸ್ ಮತ್ತಷ್ಟು ಕಠಿಣ!

  • ಲಖನೌ ಸೂಪರ್ ಜೈಂಟ್ಸ್ ವಿರುದ್ದ ರಾಜಸ್ಥಾನಕ್ಕೆ 24 ರನ್ ಗೆಲುವು
  • ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಎಲ್ ರಾಹುಲ್ ಪಡೆಗೆ ಸೋಲು
  • ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್
IPL 2022 All round performance help Rajasthan Royals to beat Lucknow Super Giants by 24 runs ckm
Author
Bengaluru, First Published May 15, 2022, 11:34 PM IST

ಮುಂಬೈ(ಮೇ.15): ದೀಪಕ್ ಹೂಡ ಹೋರಾಟ ಸಾಕಾಗಲಿಲ್ಲ, ಇತರ ಬ್ಯಾಟ್ಸ್‌ಮನ್‌ಗಳು ನೆರವಿಗೆ ಬರಲಿಲ್ಲ. ಪರಿಣಾಮ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮುಗ್ಗರಿಸಿದೆ. ಲಖನೌ ಮಣಿಸಿದ ರಾಜಸ್ಥಾನ 16 ಅಂಕ ಸಂಪಾದಿಸಿದೆ. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈ ಮೂಲಕ ಪ್ಲೇ ಆಫ್ ರೇಸ್ ಮತ್ತಷ್ಟು ಕಠಿಣಗೊಂಡಿದೆ.

179 ರನ್ ಟಾರ್ಗೆಟ್ ಪಡೆದ ಲಖನೌ ಸೂಪರ್ ಜೈಂಟ್ಸ್  ತಂಡಕ್ಕೆ ಆರಂಭ ಆಘಾತ ತಂದಿತು. ಲಖನೌ 15 ರನ್ ಸಿಡಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಕ್ವಿಂಟನ್ ಡಿಕಾಕ್ 7 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಆಯುಷ್ ಬದೋನಿ ಡಕೌಟ್ ಆದರು. 15ರನ್‌ಗೆ ಲಖನೌ ಸೂಪರ್ ಜೈಂಟ್ಸ್ ಎರಡನೇ ವಿಕೆಟ್ ಕಳೆದುಕೊಂಡಿತು.

IPL 2022 ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ 10ನೇ ಗೆಲುವು ಕಂಡ ಗುಜರಾತ್ ಟೈಟಾನ್ಸ್!

ನಾಯಕ ಕೆಎಲ್ ರಾಹುಲ್ ರನ್ ಗಳಿಸಲು ಕೊಂಚ ತಿಣುಕಾಡಿದರು. 19 ಎಸೆತದಲ್ಲಿ 10 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.ದೀಪಕ್ ಹೂಡ ಹಾಗೂ ಕ್ರುನಾಲ್ ಪಾಂಡ್ಯ ಜೊತೆಯಾಟ ಲಖನೌ ತಂಡಕ್ಕೆ ನೆರವಾಯಿತು. ಕ್ರುನಾಲ್ ಪಾಂಡ್ಯ 25 ರನ್ ಸಿಡಿಸಿ ಔಟಾದರು. ಆದರೆ ದೀಪಕ್ ಹೂಡ ಹೋರಾಟ ಮುಂದುವರಿಸಿದರು.

ದೀಪಕ್ ಹೂಡ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಮಾರ್ಕಸ್ ಸ್ಟೊಯ್ನಿಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದದರೆ, ಹೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು 39 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನರೆವಿನಿಂದ 59 ರನ್ ಸಿಡಿಸಿದರು.

ಹೂಡ ವಿಕೆಟ್ ಪತನದ ಬೆನ್ನಲ್ಲೇ ಜೇಸನ್ ಹೋಲ್ಡರ್ ಕೂಡ ವಿಕೆಟ್ ಕೈಚೆಲ್ಲಿದರು. ದುಷ್ಮಂತ್ ಚಮೀರಾ ಡಕೌಟ್ ಆದರು. ರಾಜಸ್ಥಾನ ರಾಯಲ್ಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.  ಲಖನೌ ಸೂಪರ್ ಜೈಂಟ್ಸ್ ತಂಡದ ಗೆಲುವಿಗೆ ಅಂತಿಮ 6 ಎಸೆತದಲ್ಲಿ 34 ರನ್ ಅವಶ್ಯಕತೆ ಇತ್ತು. 

IPL 2022 ಇಂದಿನಿಂದ ಮುಂಬೈ-ಚೆನ್ನೈಗೆ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​..!

ಸ್ಟೊಯ್ನಿಸ್ 27 ರನ್ ಸಿಡಿಸಿ ಔಟಾದರು. ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ಕಳೆದುಕೊಂಡು 1154 ರನ್ ಸಿಡಿಸಿತು. ರಾಜಸ್ಥಾನ ರಾಯಲ್ಸ್ 24 ರನ್ ಗೆಲುವು ದಾಖಲಿಸಿತು. 2ನೇ ಸ್ಥಾನದಲ್ಲಿದ್ದ ಲಖನೌ 3ನೇ ಸ್ಥಾನಕ್ಕೆ ಕುಸಿದರೆ, ರಾಜಸ್ಥಾನ ರಾಯಲ್ಸ್ 2ನೇ ಸ್ಥಾನಕ್ಕೇರಿದೆ. ಉಭಯ ತಂಡಗಳು ತಲಾ 16 ಅಂಕ ಸಂಪಾದಿಸಿದೆ. ಇನ್ನು ಪ್ಲೇ ಆಫ್ ಹಂತಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿಲ್ಲ. ಆದರೆ ಸ್ಥಾನ ಬಹುತೇಕ ಖಚಿತವಾಗಿದೆ. 

ರಾಜಸ್ಥಾನ ರಾಯಲ್ಸ್ ಇನ್ನಿಂಗ್ಸ್:
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿತು. ಯಶಸ್ವಿ ಜೈಸ್ವಾಲ್ 41 ರನ್ ಕಾಣಿಕೆ ನೀಡಿದರು. ಸಂಜು ಸ್ಯಾಮ್ಸನ್ 32 ರನ್, ದೇವದತ್ ಪಡಿಕ್ಕಲ್ 39 ರನ್ ಸಿಡಿಸಿದರು. ಜೋಸ್ ಬಟ್ಲರ್ ಅಬ್ಬರಿಸಲಿಲ್ಲ. ರಿಯಾನ್ ಪರಾಗ್ 19 ರನ್ ಸಿಡಿಸಿ ಔಟಾದು. ಜೇಮ್ಸ್ ನೀಶಮ್ 14 ರನ್ ಕಾಣಿಕೆ ನೀಡಿದರು. ಆರ್ ಅಶ್ವಿನ್ ಅಜೇಯ 10 ಟ್ರೆಂಟ್ ಬೋಲ್ಟ್ ಅಜೇ 17 ರನ್ ನೆರವಿನಿಂದ ರಾಜಸ್ಥಾನ 178 ರನ್ ಸಿಡಿಸಿತು.
 

Follow Us:
Download App:
  • android
  • ios