Asianet Suvarna News Asianet Suvarna News

IPL 2022 ಇಂದಿನಿಂದ ಮುಂಬೈ-ಚೆನ್ನೈಗೆ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​..!

* ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಪ್ಲೇ ಆಫ್‌ ಗೇರುವ ಅವಕಾಶ

* ಪಂಜಾಬ್ ಎದುರಿನ ಸೋಲಿನ ಬೆನ್ನಲ್ಲೇ ಆರ್‌ಸಿಬಿ ಪ್ಲೇ ಆಫ್‌ ಹಾದಿ ಕೊಂಚ ಕಠಿಣ

* ಮುಂಬೈ ಹಾಗೂ ಚೆನ್ನೈ ಇನ್ನುಳಿದ ಪಂದ್ಯ ಗೆದ್ದರೆ, ಆರ್‌ಸಿಬಿ ಪ್ಲೇ ಆಫ್ ಹಾದಿ ಸುಗಮ

IPL 2022 Paly off scenario RCB Fans now onwards fulls Support to CSK and Mumbai Indians kvn
Author
Bengaluru, First Published May 15, 2022, 4:22 PM IST

ಮುಂಬೈ(ಮೇ.15): 61 ಲೀಗ್​ ಪಂದ್ಯಗಳು ಮುಗಿದಿವೆ. ಉಳಿದಿರೋದು 9 ಲೀಗ್ ಮ್ಯಾಚ್​ಗಳು ಮಾತ್ರ. ಗುಜರಾತ್ ಟೈಟನ್ಸ್ (Gujarat Titans) ಬಿಟ್ಟರೆ ಯಾವೊಂದು ತಂಡ ಸಹ ಪ್ಲೇ ಆಫ್​ನಲ್ಲಿ ತಮ್ಮ ಸ್ಥಾನವನ್ನ ಖಚಿತಪಡಿಸಿಕೊಂಡಿಲ್ಲ. ಲಖನೌ ಸೂಪರ್ ಜೈಂಟ್ಸ್‌ (Lucknow Super Giants) 16 ಅಂಕ ಗಳಿಸಿದ್ದರೂ ಉಳಿದ ಎರಡು ಪಂದ್ಯಗಳನ್ನ ಹೀನಾಯವಾಗಿ ಸೋತು ರನ್ ರೇಟ್ ಕುಸಿದರೆ ಮಾತ್ರ ಪ್ಲೇ ಆಫ್ ಕಷ್ಟವಾಗಲಿದೆ. ಐದು ತಂಡಗಳಿಗೆ ತಲಾ 16 ಅಂಕ ಗಳಿಸುವ ಅವಕಾಶವಿದೆ. ಆಗ ರನ್ ರೇಟ್​ ಆಧಾರದ ಮೇರೆಗೆ ಮೂರು ಟೀಮ್ಸ್ ಪ್ಲೇ ಆಫ್​​​ಗೆ ಎಂಟ್ರಿ ಪಡೆದ್ರೆ, ಇನ್ನೆರಡು ಲೀಗ್​ನಿಂದ ಕಿಕೌಟ್ ಆಗಲಿವೆ.

RCB ತಂಡ ಸುಲಭವಾಗಿ ಪ್ಲೇ ಆಫ್​ಗೆ ಹೋಗಬೇಕಾದರೆ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲಬೇಕು. ಆಗ 16 ಅಂಕಗಳಿಸಲಿದೆ. ಹಾಗೆ ಅದೃಷ್ಟವೂ ಬೇಕು. ಕೆಲ ತಂಡಗಳು ಸೋತು, ಗೆದ್ದರಷ್ಟೇ RCB ಪ್ಲೇ ಆಫ್ ಕನಸು ನನಸಾಗೋದು. ಅದು ಹೇಗೆ ಅನ್ನೋದನ್ನ ತೋರಿಸ್ತೀವಿ ನೋಡಿ.

ರಾಜಸ್ಥಾನ ಎರಡಕ್ಕೆ ಎರಡನ್ನೂ ಸೋಲಬೇಕು:

12 ಪಂದ್ಯಗಳಿಂದ 14 ಅಂಕಗಳಿಸಿರುವ ರಾಜಸ್ಥಾನ ರಾಯಲ್ಸ್ (Rajasthan Royals) ಉಳಿದ ಎರಡಕ್ಕೆ ಎರಡು ಪಂದ್ಯನ್ನೂ ಸೋಲಬೇಕು. ಆಕಸ್ಮಾತ್ ಒಂದು ಗೆದ್ದು ಒಂದನ್ನ ಸೋತರೂ ಆರ್​​​ಸಿಬಿಗೆ ಕಷ್ಟವಾಗಿದೆ. ಎರಡನ್ನೂ ಗೆದ್ದರೂ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್​ಗೆ ಹೋಗಲಿದೆ.

ಡೆಲ್ಲಿ ಎರಡು ಪಂದ್ಯದಲ್ಲಿ ಒಂದನ್ನ ಮಾತ್ರ ಗೆಲ್ಲಬೇಕು:

ಡೆಲ್ಲಿ ಕ್ಯಾಪಿಟಲ್ಸ್ ತಂಡ 12 ಮ್ಯಾಚ್​​​ನಲ್ಲಿ 6 ಗೆದ್ದು 6 ಸೋತಿದೆ. 12 ಅಂಕಗಳಿಸಿರುವ ಡೆಲ್ಲಿ ಟೀಂ ಇನ್ನೆರಡು ಪಂದ್ಯ ಅಂದರೆ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಈ ಎರಡಲ್ಲಿ ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋಲಬೇಕು. ಪಂಜಾಬ್ ವಿರುದ್ಧ ಸೋತರೂ ಉತ್ತಮ. ಆಗ RCB ಪ್ಲೇ ಆಫ್​ ಎಂಟ್ರಿ ಈಸಿಯಾಗಲಿದೆ.

IPL 2022 ಸನ್ ರೈಸರ್ಸ್ ತಂಡಕ್ಕೆ ಹೀನಾಯ ಸೋಲು

ಡೆಲ್ಲಿ ವಿರುದ್ಧ ಗೆದ್ದು ಹೈದ್ರಾಬಾದ್ ವಿರುದ್ಧ ಸೋಲಬೇಕು ಪಂಜಾಬ್:

ಪಂಜಾಬ್ ಕಿಂಗ್ಸ್ (Punjab Kings) ತಂಡ ಸಹ 12 ಅಂಕಗಳಿಸಿದ್ದು ಉಳಿದ ಎರಡು ಪಂದ್ಯದಲ್ಲಿ ಒಂದನ್ನ ಗೆದ್ದು ಒಂದನ್ನ ಸೋಲಬೇಕು. ಅದು ಡೆಲ್ಲಿ ವಿರುದ್ಧ ಗೆದ್ದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಸೋಲಬೇಕು. ಡೆಲ್ಲಿ-ಪಂಜಾಬ್ ಪಂದ್ಯ ಇರೋದ್ರಿಂದ ಈ ಎರಡಲ್ಲಿ ಒಂದು ತಂಡ ಮಾತ್ರ ಪ್ಲೇ ಆಫ್​ಗೆ ಎಂಟ್ರಿ ಪಡೆಯಲು ಅವಕಾಶ ಇದೆ. ಈ ಎಲ್ಲಾ ಲೆಕ್ಕಾಚಾರ ಆದ್ಮೇಲೆ ಸನ್‌ರೈಸರ್ಸ್ ಹೈದ್ರಾಬಾದ್ (Sunrisers Hyderabad) ಉಳಿದ ಎರಡಕ್ಕೆ ಎರಡು ಪಂದ್ಯ ಗೆದ್ದರೂ, ಸೋತರೂ RCBಗೆ ಏನು ತೊಂದರೆಯಿಲ್ಲ.

ಚೆನ್ನೈ-ಮುಂಬೈಗೇಕೆ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್..?:

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಆಗ್ಲೇ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿವೆ. ಆದರೆ ಈ ಎರಡು ತಂಡಗಳು ಲೀಗ್​ನಲ್ಲಿ ಇನ್ನು ತಲಾ ತಲಾ ಎರಡು ಪಂದ್ಯಗಳನ್ನ ಆಡಲಿವೆ. ಆ ಎರಡನ್ನೂ ಗೆಲ್ಲಬೇಕು. ಆಗ ಮಾತ್ರ RCB ಪ್ಲೇ ಆಫ್​ ರೋಡ್ ಕ್ಲೀಯರ್ ಆಗಲಿದೆ. ಹಾಗಾಗಿಯೇ ರೆಡ್ ಆರ್ಮಿ ಫ್ಯಾನ್ಸ್, ಇಂದಿನಿಂದ ಚೆನ್ನೈ-ಮುಂಬೈಗೆ ಸಪೋರ್ಟ್​ ಮಾಡ್ತಿದ್ದಾರೆ. ಈ ಲೆಕ್ಕಾಚಾರ ಸ್ವಲ್ಪ ಎಡವಟ್ಟಾದ್ರು RCB ಈ ಸಲವೂ ಲೀಗ್​ನಿಂದಲೇ ಔಟ್.
 

Follow Us:
Download App:
  • android
  • ios