Asianet Suvarna News Asianet Suvarna News

IPL 2021: ಕಪ್ ಗೆಲ್ಲೋದು ನೋಡ್ತಿಯಾ? ಧೂಳೆಬ್ಬಿಸಿದೆ ಆರ್‌ಸಿಬಿ ಚಾಲೆಂಜ್ ಸಾಂಗ್

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡ್ರೀಮ್‌ ಓಪನ್‌ ಪಡೆದಿದೆ. ಅದೇ ರೀತಿ ಆರ್‌ಸಿಬಿ ತಂಡಕ್ಕಾಗಿಯೇ ಯುವ ಮ್ಯೂಸಿಕ್‌ ಡೈರೆಕ್ಟರ್‌ ಆಕಾಶ್‌ ಪರ್ವ ವಿಭಿನ್ನ ರೀತಿಯ ಆರ್‌ಸಿಬಿ ರ‍್ಯಾಪ್‌ ಸಾಂಗ್‌ವೊಂದು ರಚಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಈ ಬಗ್ಗೆ ಸ್ವತಃ ಏಷ್ಯಾನೆಟ್‌ ಸುವರ್ಣನ್ಯೂಸ್.ಕಾಂ ಜತೆ ಆಕಾಶ್‌ ಪರ್ವ ತಮ್ಮ ಅಸಿಸಿಕೆ ಹಂಚಿಕೊಂಡಿದ್ದಾರೆ. 

IPL 2021 Young Music Director Cricket fan Akash Parva sings RCB Song kvn
Author
Bengaluru, First Published Apr 17, 2021, 7:04 PM IST

- ನವೀನ್‌ ಕೊಡಸೆ

ಬಿಟ್ಟಾಕು ಬಿಟ್ಟಾಕು ಮಗಾ ಹಳೆ ಸ್ಟೋರಿಯ, ಶಬ್ಬಾಶ್‌ ಅನ್ನಬೇಕು ಇಡೀ ಇಂಡಿಯಾ, ಆರ್‌ಸಿಬಿ ಗೆಲ್ಲೋದು ಈ ಸಲ ನೋಡ್ತಿಯಾ. ಧಮ್ ಇದ್ರೆ ಚಾಲೆಂಜ್‌ ಮಾಡ್ತೀಯಾ? ಅನ್ನೋ ರ‍್ಯಾಪ್‌ ಸಾಂಗ್‌ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ಧೋಳೆಬ್ಬಿಸಿದೆ. ಈ ಹಾಡಿಗೆ ತಕ್ಕಂತೆ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಫ್ಯಾನ್ಸ್‌ಗೆ ಭರಪೂರ ಮನರಂಜನೆ ನೀಡಿದೆ.

ಆರ್‌ಸಿಬಿ ಅಪ್ಪಟ ಅಭಿಮಾನಿಯಾಗಿರುವ ಬೆಂಗಳೂರು ಮೂಲದ ಮ್ಯೂಸಿಕ್‌ ಡೈರೆಕ್ಟರ್ ಆಕಾಶ್‌ ಪರ್ವ ಅವರನ್ನೊಳಗೊಂಡ ತಂಡ ವಿಭಿನ್ನ ರೀತಿಯ ಆರ್‌ಸಿಬಿ ಸಾಂಗ್ ನಿರ್ಮಿಸಿದೆ. ಮೂಲತಃ ಕೀ ಬೋರ್ಡ್‌ ಕಲಾವಿದರಾಗಿದ್ದ ಆಕಾಶ್, ಲೈಟಾಗಿ ಲವ್ ಆಗಿದೆ ಸಿನೆಮಾ ಮೂಲಕ ಮ್ಯೂಸಿಕ್‌ ಡೈರೆಕ್ಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ತಬಲ ನಾಣಿ ಮುಖ್ಯ ಭೂಮಿಕೆಯಲ್ಲಿರುವ ಹಾಸ್ಯ ಪ್ರಧಾನ ಚಿತ್ರ ಕೆಇಬಿ ಕೆಂಪಣ್ಣ, ಹಿಟ್ಲರ್ ಚಿತ್ರಗಳಿಗೆ ಮ್ಯೂಸಿಕ್‌ ಮಾಡಿದ್ದಾರೆ. ಜೀ ಸರಿಗಮಪ ಕಾರ್ಯಕ್ರಮದಲ್ಲಿ ಕೀ ಬೋರ್ಡ್‌ ಕಲಾವಿದರಾಗಿ ಸೈ ಎನಿಸಿಕೊಂಡಿರುವ ಆಕಾಶ್‌ ಪರ್ವ, ಅರ್‌ಸಿಬಿ ಕುರಿತಂತೆ ಮಾಡಿದ ಈ ಸಾಂಗ್‌ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. 

RCB ಮ್ಯೂಸಿಕ್ ಕಂಪೋಸ್ ಮಾಡಲು ಪ್ರಮುಖ ಕಾರಣ ಏನು?

ನನಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಐಪಿಎಲ್‌ ತುಂಬಾನೆ ಇಷ್ಟ. ನಾನು ಮೂಲತಃ ಬೆಂಗಳೂರಿಗನಾಗಿರುವುದರಿಂದ ಬೆಂಗಳೂರು ತಂಡಕ್ಕೆ ಸಪೋರ್ಟ್ ಮಾಡಬೇಕು. ಆರ್‌ಸಿಬಿಯನ್ನು ವಿಭಿನ್ನವಾಗಿ ಹಾಡಿನಲ್ಲಿ ತೋರಿಸಬೇಕು ಎನ್ನುವ ಉದ್ದೇಶದಿಂದ ಆರ್‌ಸಿಬಿ ಕುರಿತಂತೆ ಮ್ಯೂಸಿಕ್‌ ಕಂಪೋಸ್‌ ಮಾಡಿದೆ.

ಈಗಾಗಲೇ ಆರ್‌ಸಿಬಿ ಬಗ್ಗೆ ಹಲವು ಸಾಂಗ್‌ಗಳು ಬಂದಿವೆ. ಆದರೆ ಈ ಸಾಂಗ್‌ ಸಾಹಿತ್ಯ ವಿಭಿನ್ನವಾಗಿದೆ. ಈ ಬಗ್ಗೆ ಏನಂತೀರಾ?

ಈ ಹಾಡಿಗೆ ಸಾಹಿತ್ಯ ಬರೆದಿದ್ದು ಈಶ್ವರ್ ಶಾಮ್‌ರಾಮ್. ಈ ಹಿಂದೆ ಯಾರೂ ಕೇಳಿರದ ರೀತಿಯಲ್ಲಿ ಸಾಂಗ್‌ ಮಾಡಲು ನಾನು ಅವರ ಜತೆ ಚರ್ಚಿಸಿದೆ. ಅವರು ಬರೆದ ಲಿರೀಕ್ಸ್‌ಗೆ ಅನುಗುಣವಾಗಿ ನಾವು ಹಾಡು ರಚಿಸಿದೆವು.

ಗೆಲ್ಲಲಿ ಸೋಲಲಿ, ಫ್ಯಾನ್ಸ್‌ಗೆ RCB ಒಂದು ರೀತಿ ಇಮೋಶನ್, ನಿಮಗೆ ಆರ್‌ಸಿಬಿ ಅಂದ್ರೆ ಏನು?

ಆರ್‌ಸಿಬಿ ಕಟ್ಟಾ ಅಭಿಮಾನಿ ನಾನು. ಆರ್‌ಸಿಬಿ ಕಪ್‌ ಗೆಲ್ಲೋವರೆಗೂ ನಾವು ಸಾಂಗ್‌ ಮಾಡ್ತಾನೆ ಇರ್ತೇವೆ. ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎನ್ನುವುದು ನನ್ನ ಅಚಲ ನಂಬಿಕೆ. ಎಲ್ಲರೂ ಆರ್‌ಸಿಬಿ ತಂಡಕ್ಕೆ ಹುಮ್ಮಸ್ಸು ತುಂಬುವಂತಿರಲಿ ಎಂದು ಈ ಸಾಂಗ್ ಮಾಡಿದ್ದೇನೆ.

ನಿಮ್ಮ ಸಾಂಗ್ ಆರ್‌ಸಿಬಿ ಫ್ಯಾನ್ಸ್‌ಗೆ ಚೀಯರ್‌ ಅಪ್ ಮಾಡೋ ರೀತಿ ಇದೆ. ಸಾಂಗ್ ಕಂಪೋಸ್ ಮಾಡುವಾಗ ಯಾವೆಲ್ಲಾ ಅಂಶ ಸಾಂಗ್‌ನಲ್ಲಿ ಸೇರಿಸಬೇಕು ಅಂದುಕೊಂಡಿದ್ದೀರಿ?

ಈ ಸಾಂಗ್ ಕೇಳಿದ ತಕ್ಷಣ ಉಳಿದ ತಂಡಗಳಿಗೆ ಒಂದು ರೀತಿಯ ಭಯ ಆಗಬೇಕು. ಆರ್‌ಸಿಬಿಯನ್ನು ಒಂದು ಹೀರೋ ರೀತಿ ಈ ಹಾಡಿನಲ್ಲಿ ಬಿಂಬಿಸಲಾಗಿದೆ.

ನೀವು ಸಾಂಗ್‌ನಲ್ಲಿ ಈ ಸಲ ಕಪ್ ಗೆಲ್ಲೋದು ನೋಡ್ತಿಯಾ ಎಂದು ಚಾಲೆಂಜ್ ಹಾಕಿದ್ದೀರಿ? ಫ್ಯಾನ್ಸ್ ಕೂಡ ಇದೇ ಮೂಡ್‌ನಲ್ಲಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಈ ಸಲದ ತಂಡವನ್ನು ನೋಡಿದರೆ ಖಂಡಿತ ಕಪ್ ಗೆದ್ದೇ ಗೆಲ್ಲುತ್ತೆ ಎಂದೆನಿಸುತ್ತಿದೆ. ಈ ಹಿಂದಿನ ಎಲ್ಲಾ ಸೋಲುಗಳಿಗೆ ಆರ್‌ಸಿಬಿ ಈ ಸಲ ಕಪ್‌ ಗೆದ್ದು ಉತ್ತರ ನೀಡುತ್ತೆ ಎನ್ನುವುದು ನನ್ನೊಬ್ಬನ ನಿರೀಕ್ಷೆಯಲ್ಲ, ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳಲ್ಲೂ ಇದೇ ವಿಶ್ವಾಸವಿದೆ.
 

Follow Us:
Download App:
  • android
  • ios