Asianet Suvarna News Asianet Suvarna News

IPL 2021: ಪಂಜಾಬ್‌ಗೆ 186 ರನ್ ಟಾರ್ಗೆಟ್, ಗೆಲುವಿನ ವಿಶ್ವಾಸದಲ್ಲಿ ರಾಜಸ್ಥಾನ!

  • IPL 2021 ಟೂರ್ನಿಯ 32ನೇ ಲೀಗ್ ಪಂದ್ಯ
  • ಪಂಜಾಬ್ ವಿರುದ್ಧ ದಿಟ್ಟ ಹೋರಾಟ ನೀಡಿದ ರಾಜಸ್ಥಾನ
  • ಪಂಜಾಬ್‌ಗೆ ಬೃಹತ್ ಟಾರ್ಗೆಟ್ ನೀಡಿದ ರಾಜಸ್ಥಾನ
IPL 2021 Yashasvi Jaiswal help Rajasthan royals to set 186 run target to Punjab kings ckm
Author
Bengaluru, First Published Sep 21, 2021, 9:28 PM IST
  • Facebook
  • Twitter
  • Whatsapp

ದುಬೈ(ಸೆ.21): ಉತ್ತಮ ಆರಂಭ, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೆರವಾಯಿತು. ಪಂಜಾಬ್ ಕಿಂಗ್ಸ್ ವಿರುದ್ಧದ 32ನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್  185 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಪಂಜಾಬ್‌ಗೆ 186 ರನ್ ಟಾರ್ಗೆಟ್ ನೀಡಿದೆ.

 

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ಉತ್ತಮ ಆರಂಭ ಪಡೆಯಿತು. ಜೋಸ್ ಬಟ್ಲರ್ ಬದಲು ತಂಡದಲ್ಲಿ ಸ್ಥಾನ ಪಡೆದ ಇವಿನ್ ಲಿವಿಸ್ ಉತ್ತಮ ಆರಂಭ ನೀಡಿದರು. ಇತ್ತ ಯಶಸ್ವಿ ಜೈಸ್ವಾಲ್ ಉತ್ತಮ ಸಾಥ್ ನೀಡಿದರು. ಲಿವಿಸ್ 21 ಎಸೆತದಲ್ಲಿ 36 ರನ್ ಸಿಡಿಸಿ ಔಟಾದರು. ಇತ್ತ ಯಶಸ್ವಿ ಜೈಸ್ವಾಲ್ 49 ರನ್ ಕಾಣಿಕೆ ನೀಡಿದರು.

 

IPL 2021; ಆರ್‌ಸಿಬಿ ನಾಯಕತ್ವ ತ್ಯಜಿಸಲು ಪತ್ನಿ ಅನುಷ್ಕಾ ಕಾರಣ?ಸ್ಟೇನ್ ಸ್ಫೋಟಕ ಹೇಳಿಕೆ!

ನಾಯಕ ಸಂಜು ಸಾಮ್ಸನ್ ಕೇವಲ 4 ರನ್ ಸಿಡಿಸಿ ಔಟಾದರು. ಇದು ರಾಜಸ್ಥಾನ ತಂಡಕ್ಕೆ ಕೊಂಚ ಹಿನ್ನಡೆ ತಂದುಕೊಟ್ಟಿತು. ಆದರೆ ಲಿಯಾಮ್ ಲಿವಿಂಗ್‌ಸ್ಟೋನ್, ಮಹಿಪಾಲ್ ಲೊಮ್ರೊರ್ ಹೋರಾಟದಿಂದ ರಾಜಸ್ಥಾನ ಚೇತರಿಸಿಕೊಂಡಿತು. ಲಿವಿಂಗ್‌ಸ್ಟೋನ್ 25 ರನ್ ಸಿಡಿಸಿ ಔಟಾದರು.

IPL 2021: ಹುಟ್ಟು ಹಬ್ಬ ಸಂಭ್ರಮದಲ್ಲಿ ಕ್ರಿಸ್ ಗೇಲ್, ಫ್ಯಾನ್ಸ್ ಮರೆತಿಲ್ಲ ಯೂನಿವರ್ಸ್ ಬಾಸ್ 6 ದಾಖಲೆ!

ರಿಯಾನ್ ಪ್ರಯಾಗ್ ಹೋರಾಟ ನೀಡಲಿಲ್ಲ ಇತ್ತ, ಲೊಮ್ರೊರ್ ಹೋರಾಟ ಮುಂದುವರಿಸಿದರು. ಲೊಮ್ರೊರ್ ಹೋರಾಟ 43 ರನ್‌ಗೆ ಅಂತ್ಯವಾಯಿತು. ಇತ್ತ ರಾಹುಲ್ ಟಿವಾಟಿಯಾ 2 ರನ್ ಸಿಡಿಸಿ ಔಟಾದರು. ಕ್ರಿಸ್ ಮೊರಿಸ್ ಕೇವಲ 5 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಚೇತನ್ ಸಕಾರಿಯಾ 7 ರನ್ ಸಿಡಿಸಿ ಔಟಾದರು. ಅಂತಿಮ ಎಸೆತದಲ್ಲಿ ಕಾರ್ತಿಕ್ ತ್ಯಾಗಿ ವಿಕೆಟ್ ಪತನದ ಮೂಲಕ ರಾಜಸ್ಥಾನ ರಾಯಲ್ಸ್  185 ರನ್‌ಗೆ ಆಲೌಟ್ ಆಯಿತು. ರಾಜಸ್ಥಾನ ರಾಯಲ್ಸ್ ಪರ ಅರ್ಶದೀಪ್ ಸಿಂಗ್ 5, ಮೊಹಮ್ಮದ್ ಶಮಿ 3 , ಇಶಾನ್ ಪೊರೆಲ್  1ಹಾಗೂ ಹರ್ಪ್ರೀತ್ ಬ್ರಾರ್ 1 ವಿಕೆಟ್ ಕಬಳಿಸಿದರು. 

 

IPL 2021; ನವನೀತಾ- ಜೇಮೀಸನ್ ಕೂಲ್ ಕೂಲ್ ನೋಟ ವೈರಲ್ ಆಗ್ದೆ ಇರುತ್ತಾ!

ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಈ ಪಂದ್ಯದ ಗೆಲುವು ಮಹತ್ವದ್ದಾಗಿದೆ. ಕಾರಣ ಉಭಯ ತಂಡಗಳು ಅಂಕಪಟ್ಟಿಯಲ್ಲಿ 7 ಮತ್ತು 8ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸ್ಥಾನಕ್ಕೆ ಅರ್ಹತೆ ಪಡೆಯಲು ಎಲ್ಲಾ ಪಂದ್ಯಗಳನ್ನು ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕಿದೆ. ಹೀಗಾಗಿ ರಾಜಸ್ಥಾನ ಹಾಗೂ ಪಂಜಾಬ್ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸಲಿದೆ.

186 ರನ್ ಟಾರ್ಗೆಟ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಬೃಹತ್ ಮೊತ್ತವಲ್ಲ. ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಹೊಂದಿದೆ. ಹೀಗಾಗಿ ಸವಾಲಿನ ಮೊತ್ತ ಚೇಸ್ ಮಾಡಲು ಪಂಜಾಬ್ ಶಕ್ತವಾಗಿದೆ. ಆದರೆ ಒತ್ತಡ ನಿಭಾಯಿಸಿ ಗೆಲುವು ಸಾಧಿಸುತ್ತಾ ಅನ್ನೋದು ಸದ್ಯದಕುತೂಹಲ

Follow Us:
Download App:
  • android
  • ios