ಪಂಜಾಬ್ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯ  125 ರನ್ ಸಿಡಿಸಿ ಸುಲಭ ಟಾರ್ಗೆಟ್ ನೀಡಿದ ಪಂಜಾಬ್ ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯ  

ಶಾರ್ಜಾ(ಸೆ.25):  ಬ್ಯಾಟ್ಸ್‌ಮನ್ ವೈಫಲ್ಯದಿಂದ ಪಂಜಾಬ್ ಕಿಂಗ್ಸ್(Punjab Kings) ಅಲ್ಪಮೊತ್ತಕ್ಕೆ ಕುಸಿದಿದೆ. ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿದೆ. ಇದರೊಂದಿಗೆ ಹೈದರಾಬಾದ್ ತಂಡಕ್ಕೆ 126 ರನ್ ಸುಲಭ ಟಾರ್ಗೆಟ್ ಸಿಕ್ಕಿದೆ. ಆದರೆ ಐಪಿಎಲ್ 2021ರಲ್ಲಿ(IPL 2021) ಪಂಜಾಬ್ 5ನೇ ಅತೀ ಕಡಿಮೆ ಮೊತ್ತ ದಾಖಲಿಸಿದ ಕುಖ್ಯಾತಿಗೆ ಗುರಿಯಾಗಿದೆ.

IPL 2021: ರಾಯಲ್ಸ್‌ ಮಣಿಸಿ ಫ್ಲೇ ಆಫ್‌ ಹಾದಿ ಖಚಿತಪಡಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌

ಐಪಿಎಲ್ 2021ರಲ್ಲಿ ದಾಖಲಾದ ಅತ್ಯಲ್ಪ ಮೊತ್ತ:
92/10 ಆರ್‌ಸಿಬಿ v ಕೆಕೆಆರ್, ಅಬು ಧಾಬಿ
106/8 ಪಂಜಾಬ್ v ಸಿಎಸ್‌ಕೆ, ಮುಂಬೈ
120/10 ಪಂಜಾಬ್ v ಹೈದರಾಬಾದ್, ಚೆನ್ನೈ 
123/9 ಪಂಜಾಬ್ v ಕೆಕೆಆರ್, ಅಹಮ್ಮದಾಬಾದ್ 
125/7 ಪಂಜಾಬ್ v ಹೈದರಾಬಾದ್, ಶಾರ್ಜಾ

Scroll to load tweet…

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ ತಂಡಕ್ಕೆ ತೀವ್ರ ಹಿನ್ನಡೆ ನೀಡಿತು. ನಾಯಕ ಕೆಎಲ್ ರಾಹುಲ್(KL Rahul) ಹಾಗೂ ಮಯಾಂಕ್ ಅಗರ್ವಾಲ್ ಎಂದಿನಂತೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ 21 ರನ್ ಸಿಡಿಸಿ ಜೇಸನ್ ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು.

IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್‌ 10 CSK ಕ್ರಿಕೆಟಿಗರ ಸುಂದರ ಮಡದಿಯರು..!

ಪಂಜಾಬ್ ಕಿಂಗ್ಸ್ 26 ರನ್‌ಗೆ ಮೊದಲ ವಿಕೆಟ್ ಪತನಗೊಂಡಿತು. ಎರಡನೇ ವಿಕೆಟ್ ಪತನಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಪಂಜಾಬ್ 27 ರನ್ ಗಳಿಸುವಷ್ಟರಲ್ಲೇ 2ನೇ ವಿಕೆಟ್ ಪತನಗೊಂಡಿತು. ಮಯಾಂಕ್ ಅಗರ್ವಾಲ್ ಕೇವಲ 5 ರನ್ ಸಿಡಿಸಿ ಔಟಾದರು. ಇದರೊಂದಿಗೆ ಪಂಜಾಬ್ ತಂಡದ ಕುಸಿತ ಆರಂಭಗೊಂಡಿತು.

ಕಳೆದ ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಕ್ರಿಸ್ ಗೇಲ್ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗೇಲ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಗೇಲ್ ಕೇವಲ 14 ರನ್ ಸಿಡಿಸಿ ಔಟಾದರು. ಆ್ಯಡಿನ್ ಮರ್ಕ್ರಾಮ್ ಕೇವಲ 17 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ನಿಕೋಲಸ್ ಪೂರನ್ ಹಾಗೂ ದೀಪಕ್ ಹೂಡ ಕೂಡ ನಿರಾಸೆ ಅನುಭವಿಸಿದರು.

IPL 2021 ಎಂದೆಂದಿಗೂ ನಮ್ದು ಆರ್‌ಸಿಬಿಗೆ ಸಪೋರ್ಟ್ ಎಂದ ಕಿಚ್ಚ ಸುದೀಪ್..!

ಪೂರನ್ 8 ರನ್ ಸಿಡಿಸಿ ಔಟಾದರೆ, ಹೂಡ 13 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು. ಹರ್ಪ್ರೀತ್ ಬ್ರಾರ್ ಹೋರಾಟ ನೀಡಿದರೂ ಸಾಕಾಗಲಿಲ್ಲ. ನಥನ್ ಎಲ್ಲಿಸ್ 12 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಶಮಿ ಡಕೌಟ್ ಆದರು. ಇತ್ತ ಬ್ರಾರ್ ಅಜೇಯ 18 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. 

ಅಂಕಪಟ್ಟಿ:
ಪಂಜಾಬ್ ಕಿಂಗ್ಸ್ ಐಪಿಎಲ್ 2021ರ ಎರಡನೆ ಭಾಗವನ್ನು ಸೋಲಿನೊಂದಿಗೆ ಆರಂಭಿಸಿದೆ. ಇದೀಗ ಹೈದರಾಬಾದ್ ವಿರುದ್ಧ ಅಲ್ಪಮೊತ್ತ ದಾಖಲಿಸಿ ಸೋಲಿನ ಆತಂಕ ಎದುರಿಸುತ್ತಿದೆ. ಸದ್ಯ ಅಂಕಪಟ್ಟಿಯಲ್ಲಿ(Points Table) ಪಂಜಾಬ್ ಕಿಂಗ್ಸ್ 7ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 8ನೇ ಹಾಗೂ ಕೊನೆಯ ಸ್ಥಾನದಲ್ಲಿದೆ.