IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್ 10 CSK ಕ್ರಿಕೆಟಿಗರ ಸುಂದರ ಮಡದಿಯರು..!
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡವು ಯುಎಇ(UAE) ಚರಣದ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದೆ. ಅರಬ್ಬರ ನಾಡಿನಲ್ಲಿ ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಮ್ಮೆ ನಂ.1 ಸ್ಥಾನಕ್ಕೇರಿದೆ. ಧೋನಿ(MS Dhoni) ನೇತೃತ್ವದ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಬಾರಿ ಕೂಡಾ ಐಪಿಎಲ್ ಟ್ರೋಫಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಧೋನಿ, ಜಡೇಜಾ, ಬ್ರಾವೋ, ರೈನಾ ಅವರಂತಹ ಸಿಎಸ್‌ಕೆ ಆಟಗಾರರು ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರೆ, ಅವರ ಪತ್ನಿಯರು ಲೈಮ್‌ಲೈಟ್‌ನಲ್ಲಿ ಮಿಂಚುತ್ತಿರುತ್ತಾರೆ. ಬನ್ನಿ ಒಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ರಿಕೆಟಿಗರ ಮುದ್ದಾದ ಪತ್ನಿಯರ ಪರಿಚಯ ಮಾಡಿಕೊಳ್ಳೋಣ
ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಯನ್ನು ಪರಿಚಯಿಸುವ ಅಗತ್ಯವೇ ಇಲ್ಲವೆನ್ನುವಷ್ಟು ಚಿರಪರಿಚಿತ ಹೆಸರು. ಸಾಕ್ಷಿ ಯಾವಾಗಲೂ ಸುದ್ದಿಯಲ್ಲಿಯೇ ಇರುತ್ತಾರೆ. ಸಾಕ್ಷಿ ಹಾಗೂ ಧೋನಿ 2010ರ ಜುಲೈ 04ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಯ ಸುಂದರ ಕುಟುಂಬಕ್ಕೆ 2015ರಲ್ಲಿ ಝಿವಾ ಎನ್ನುವ ಮಗಳ ಎಂಟ್ರಿ ಆಗಿದೆ. ಧೋನಿ ಜತೆ ಸಾಕ್ಷಿ ಹಾಗೂ ಝಿವಾ ಸದಾ ಸುದ್ದಿಯಲ್ಲಿರುತ್ತಾರೆ.
ಸುರೇಶ್ ರೈನಾ ಪತ್ನಿ ಪ್ರಿಯಾಂಕಾ ರೈನಾ ಸಹಾ ಸಾಕಷ್ಟು ಸುಂದರವಾಗಿದ್ದಾರೆ. ಪ್ರಿಯಾಂಕ ಓರ್ವ ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ, ಇದಷ್ಟೇ ಅಲ್ಲದೇ ಒಂದು NGO ನಡೆಸುತ್ತಿದ್ದಾರೆ. ರೈನಾ ಹಾಗೂ ಪ್ರಿಯಾಂಕ ವಿವಾಹವು 2015ರ ಏಪ್ರಿಲ್ 14ರಂದು ನಡೆಯಿತು. ಈ ಜೋಡಿಗೆ ಗ್ರೆಸಿಯಾ ಮತ್ತು ರಿಯೊ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಚೆನ್ನೈ ತಂಡದ ಅತ್ಯಂತ ಮೋಜು ಮಸ್ತಿ ಮಾಡುವ ಆಟಗಾರನೆಂದರೆ ಅದು ವಿಂಡೀಸ್ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ. ಬ್ರಾವೋ ಖಾಸಗಿ ಬದುಕು ಸದಾ ಚರ್ಚೆಯಲ್ಲಿರುತ್ತದೆ. ಬ್ರಾವೋ ಇದುವರೆಗೂ ಮದುವೆಯಾಗಿಲ್ಲ. ಆದರೆ ಬ್ರಾವೋ ಸಾಕಷ್ಟು ಸಂಬಂಧ ಹೊಂದಿದ್ದಾರೆ. ಅಂದಹಾಗೆ ಬ್ರಾವೋಗೆ ಇಬ್ಬರು ಮಕ್ಕಳು ಸಹಾ ಇದ್ದಾರೆ. ಸದ್ಯ ಬ್ರಾವೋ ಗರ್ಲ್ ಫ್ರೆಂಡ್ ಜೇಸನಾ ಸಿತಾ ಜತೆ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ಯುವ ಹಾಗೂ ಸ್ಮಾರ್ಟ್ ಆಟಗಾರನೆಂದರೆ ಅದು ಸ್ಯಾಮ್ ಕರ್ರನ್. ಸ್ಯಾಮ್ ಖಾಸಗಿ ಬದುಕು ಸಾಕಷ್ಟು ಚರ್ಚೆಯಲ್ಲಿದೆ. ಕರ್ರನ್ ತಮ್ಮ ಲವ್ ಲೈಫ್ ಮುಚ್ಚುಮರೆ ಮಾಡಿಲ್ಲ. ಸ್ಯಾಮ್ ಕರ್ರನ್ ತನ್ನ ಜತೆಗಾರ್ತಿ ಇಸಾಬೆಲಾ ಸೈಮಂಡ್ಸ್ ವಿಲ್ಮೋಟ್ ಜತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ವಿಶ್ವದ ಅತ್ಯಂತ ಚಾಣಾಕ್ಷ ಕ್ಷೇತ್ರ ರಕ್ಷಕ ಎಂದು ಕರೆಸಿಕೊಳ್ಳುವ ರವೀಂದ್ರ ಜಡೇಜಾ ರಿವಾ ಸೋಲಂಕಿಯವರನ್ನು ವಿವಾಹವಾಗಿದ್ದಾರೆ. ರಿವಾ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಒಬ್ಬರು ಸ್ನೇಹಿತರ ಪಾರ್ಟಿಯಲ್ಲಿ ಬೇಟಿಯಾಗಿದ್ದ ಈ ಜೋಡಿ ಆ ಬಳಿಕ ಡೇಟಿಂಗ್ ನಡೆಸಿದ್ದರು. ಇದಾದ ಬಳಿಕ 2016ರ ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಒಂದು ವರ್ಷಕ್ಕೆ ಮಗಳು ನಿಧ್ಯಾನ ಈ ಸುಂದರ ಕುಟುಂಬ ಕೂಡಿಕೊಂಡಿದ್ದಾಳೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ಸಜ್ಜನ ಕ್ರಿಕೆಟಿಗ ಚೇತೇಶ್ವರ್ ಪೂಜಾರ 2013ರ ಫೆಬ್ರವರಿ 13ರಂದು ತನ್ನ ಸ್ನೇಹಿತೆ ಪೂಜಾ ಪಾಬರಿಯನ್ನು ವಿವಾಹವಾಗಿದ್ದಾರೆ. ಈ ಜೋಡಿಗೆ ಅಧಿತಿ ಎನ್ನುವ ಮುದ್ದಾದ ಮಗಳು ಇದ್ದಾಳೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಫಾಫ್ ಡು ಫ್ಲೆಸಿಸ್ 2013ರಲ್ಲಿ ತನ್ನ ಗೆಳತಿ ಇಮಾರಿ ವಿಸ್ಸೆರ್ ಅವರನ್ನು ವಿವಾಹವಾಗಿದ್ದಾರೆ. 2017ರಲ್ಲಿ ಈ ಜೋಡಿಗೆ ಹೆಣ್ಣು ಮಗು ಸೇರ್ಪಡೆ ಮತ್ತಷ್ಟು ಖುಷಿ ಹೆಚ್ಚಿಸಿತು. ಇನ್ನು ಕಳೆದ ಆಗಸ್ಟ್‌ನಲ್ಲಿ ಡು ಪ್ಲೆಸಿಸ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಲವ್ ಸ್ಟೋರಿ ಕುರಿತಂತೆ ಸಾಕಷ್ಟು ಚರ್ಚೆ ಆರಂಭವಾಗಿದೆ. ಗಾಯಕ್ವಾಡ್ ಹೆಸರಿನ ಜತೆ ಮರಾಠಿ ನಟಿ ಸಯಾಲಿ ಸಂಜೀವ್ ಜತೆ ಥಳುಕು ಹಾಕಿಕೊಂಡಿದೆ. ಮಾಡೆಲಿಂಗ್ ಕ್ಷೇತ್ರದಿಂದ ಬಂದ ಸಯಾಲಿ ಆ ಬಳಿಕ ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ರನ್ ಮಷೀನ್ ಅಂಬಟಿ ರಾಯುಡು 2009ರಲ್ಲಿ ತಮ್ಮ ಕಾಲೇಜ್ ಗೆಳತಿ ಚೆನ್ನುಪಲ್ಲಿ ವಿದ್ಯಾ ಅವರನ್ನು ವಿವಾಹವಾಗಿದ್ದಾರೆ. ವಿದ್ಯಾ ಮಾಧ್ಯಮ ಹಾಗೂ ಸುದ್ದಿಯಿಂದ ಸದಾ ದೂರ ಇರಲು ಇಷ್ಟಪಡುತ್ತಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳಿದ್ದಾಗ ಸದಾ ಮೈದಾನಕ್ಕೆ ಬಂದು ಚಿಯರ್ ಮಾಡುತ್ತಿರುತ್ತಾರೆ.
ಚನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಕೂಡಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಚಹರ್ ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಭಾರದ್ವಾಜ್ ಸಹೋದರಿ ಜಯ ಭಾರದ್ವಾಜ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಐಪಿಎಲ್ ಮುಗಿದ ಬಳಿಕ ದೀಪಕ್ ಚಹಾರ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ.