ಐಪಿಎಲ್ ಟೂರ್ನಿಯಲ್ಲಿ ಪ್ರತಿ ಪಂದ್ಯಗಳು ರೋಚಕ ಅಂತ್ಯ ಕಾಣುತ್ತಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಹೋರಾಟಕ್ಕೆ ಸಜ್ಜಾಗಿದೆ. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಮಾಹಿತಿ ಇಲ್ಲಿದೆ. 

ಚೆನ್ನೈ(ಏ.11): 14ನೇ ಆವೃತ್ತಿ ಐಪಿಎಲ್ ಟೂರ್ನಿಯ 3ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ತಂಡ ಮುಖಾಮುಖಿಯಾಗುತ್ತಿದೆ. ಕೆಲ ಬದಲಾವಣೆಯೊಂದಿಗೆ ಈ ಬಾರಿ ಉಭಯ ತಂಡಗಳು ಕಣಕ್ಕಿಳಿಯುತ್ತಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಹಾಗೂ ಹೈದರಾಬಾದ್ ತಂಡ ದಿಟ್ಟ ಹೋರಾಟ ನೀಡಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಗುರುವನ್ನೇ ಮೀರಿಸಿದ ಶಿಷ್ಯ; ಸಿಎಸ್‌ಕೆ ಮಣಿಸಿದ ರಿಷಪ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್!.

ಹರಾಜಿನಲ್ಲಿ ಕೆಕೆಆರ್ ತಂಡ ಸೇರಿಕೊಂಡಿರುವ ಹರ್ಭಜನ್ ಸಿಂಗ್, ಇಂದು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನೋ ಕುತೂಹಲ ಇದೀಗ ಎಲ್ಲರಲ್ಲಿ ಮನೆ ಮಾಡಿದೆ. ವರುಣ್ ಚಕ್ರವರ್ತಿ ಕಳೆದ ಆವತ್ತಿಯಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಕಾರಣ ಹರ್ಭಜನ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ಬೆಂಚ್ ಕಾದರೂ ಆಶ್ಚರ್ಯವಿಲ್ಲ.

IPL 2021: ಪಂದ್ಯ ಸೋತರೂ ಅಭಿಮಾನಿಗಳ ಮನಗೆದ್ದ ರೋಹಿತ್ ಶರ್ಮಾ

ಕೆಕೆಆರ್ ಸಂಭಾವತ್ಯ ತಂಡ:
ಶುಭ್‌ಮಾನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್(ನಾಯಕ), ಶಕೀಬ್ ಅಲ್ ಹಸನ್, ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ಪ್ಯಾಟ್ ಕಮಿನ್ಸ್, ಪ್ರಸಿದ್ಧ್ ಕೃಷ್ಣ.

ಹೈದರಾಬಾದ್ ಸಂಭಾವ್ಯ ತಂಡ:
ಡೇವಿಡ್ ವಾರ್ನರ್(ನಾಯಕ), ವೃದ್ಧಿಮಾನ್ ಸಾಹ, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಬ್ದುಲ್ ಸಮಾದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್