ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ಮುಂದೆ ಪಂಜಾಬ್ ಕಿಂಗ್ಸ್ ನೀಡಿದ ಬೃಹತ್ ಮೊತ್ತ ಹೆಚ್ಚಿನ ಸವಾಲು ನೀಡಲಿಲ್ಲ. ಅಂತಿಮ ಹಂತದಲ್ಲಿ ನಾಯಕ ಪಂತ್ ಹಾಗೂ ಸ್ಟೊಯ್ನಿಸ್ ಜೊತೆಯಾಟ ಡೆಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು.
ಮುಂಬೈ(ಏ.18): ಪಂಜಾಬ್ ಕಿಂಗ್ಸ್ ವಿರುದ್ಧವೂ ಅಬ್ಬರಿಸಿದ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ. ಜೊತೆಗೆ ಇತರ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ರೋಚಕ ಗೆಲುವು ದಾಖಲಿಸಿದೆ
IPL 2021: ಕೆಕೆಆರ್ ವಿರುದ್ದದ ಅರ್‌ಸಿಬಿಗೆ ಹ್ಯಾಟ್ರಿಕ್ ಜಯ
196 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಸ್ಫೋಟಕ ಆರಂಭ ನೀಡಿದರು. ಪೃಥ್ವಿ 17 ಎಸೆತದಲ್ಲಿ 32 ರನ್ ಸಿಡಿಸಿ ಔಟಾದರು. ಆದರೆ ಧವನ್ ಅಬ್ಬರ ಮುಂದುವರಿಯಿತು. ಇನ್ನು ಸ್ಟಿವ್ ಸ್ಮಿತ್ ಕೇವಲ 9 ರನ್ ಸಿಡಿಸಿ ಔಟಾದರು.
ಅಬ್ಬರಿಸಿದ ಧವನ್ ಹಾಫ್ ಸೆಂಚುರಿ ಸಿಡಿಸಿದರು. ಧವನ್ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ತಂಡದ ಗೆಲುವಿನ ಹಾದಿ ಸುಗಮಗೊಂಡಿತು. ಧವನ್ 49 ಎಸೆತದಲ್ಲಿ 92 ರನ್ ಸಿಡಿಸಿ ಔಟಾದರು. 8 ರನ್‌ಗಳಿಂದ ಧವನ್ ಶತಕ ವಂಚಿತರಾದರು.
ಧವನ್ ವಿಕೆಟ್ ಪತನದ ಬಳಿಕ ಜವಾಬ್ದಾರಿ ಹೊತ್ತು ಕೊಂಡ ನಾಯಕ ರಿಷಬ್ ಪಂತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟ ಡೆಲ್ಲಿ ತಂಡದ ಸಂಕಷ್ಟ ದೂರ ಮಾಡಿತು. ಪಂತ್ 15 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಡೆಲ್ಲಿ ತಂಡದ ಆತಂಕ ಹೆಚ್ಚಾಯಿತು. ಗೆಲುವಿನ ಹಾದಿ ಕಠಿಣಗೊಂಡಿತು.
ಸ್ಟೊಯ್ನಿಸ್ ಅಜೇಯ 27 ರನ್ ಹಾಗೂ ಲಲಿತ್ ಯಾದವ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗೆಲುವು ದಾಖಲಿಸಿತು.
