Asianet Suvarna News Asianet Suvarna News

ಐಪಿಎಲ್ 2021: ಆ್ಯಡಂ ಜಂಪಾ ದಿಢೀರನೇ ಬಯೋ-ಬಬಲ್ ತೊರೆದಿದ್ದೇಕೆ..?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಪಿನ್ನರ್ ಆ್ಯಡಂ ಜಂಪಾ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅರ್ಧದಲ್ಲೇ ಕಾಲ್ಕಿತ್ತಿದ್ದೇಕೆ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

IPL 2021 RCB Cricketer Adam Zampa why he Decided To Quit million dollar Cricket Tournament kvn
Author
Ahmedabad, First Published Apr 28, 2021, 4:29 PM IST

ಅಹಮದಾಬಾದ್‌(ಏ.28: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಕ್ರಿಕೆಟಿಗರಾದ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್‌ಸನ್ ಅರ್ಧದಲ್ಲೇ ತೊರೆದು ತವರಿನತ್ತ ಮುಖ ಮಾಡಿದ್ದಾರೆ. ಇದು ಹಲವರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಆ್ಯಡಂ ಜಂಪಾ ತಾವು ಅರ್ಧದಲ್ಲೇ ಐಪಿಎಲ್‌ನಿಂದ ಕಾಲ್ಕಿತ್ತಿದ್ದೇಕೆ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.

6 ತಿಂಗಳ ಹಿಂದಷ್ಟೇ ಯುಎಇನಲ್ಲಿದ್ದ ವಾತಾವರಣಕ್ಕೆ ಹೋಲಿಸಿದರೆ ಈ ಬಾರಿಯ ಬಯೋ-ಬಬಲ್‌ ಅಷ್ಟೊಂದು ಸುರಕ್ಷಿತವಾಗಿದೆ ಎಂದು ಅನಿಸಲಿಲ್ಲ ಎನ್ನುವ ಅಭಿಪ್ರಾಯವನ್ನು ಆ್ಯಡಂ ಜಂಪಾ ವ್ಯಕ್ತಪಡಿಸಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಆ್ಯಡಂ ಜಂಪಾ ಹಾಗೂ ಕೇನ್‌ ರಿಚರ್ಡ್‌ಸನ್‌ ಆರ್‌ಸಿಬಿ ಬಯೋ ಬಬಲ್‌ ತೊರೆದು ಕಾಂಗರೂ ನಾಡಿನತ್ತ ಮುಖ ಮಾಡಿದ್ದರು.  

6 ತಿಂಗಳ ಹಿಂದಷ್ಟೇ ದುಬೈನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿನ ಬಯೋ ಬಬಲ್ ಸಾಕಷ್ಟು ಸುರಕ್ಷಿತವಾಗಿತ್ತು. ಈ ಬಾರಿಯೂ ಅಲ್ಲಿಯೇ ಐಪಿಎಲ್ ಟೂರ್ನಿ ಆಯೋಜಿಸಿದ್ದರೆ ತುಂಬಾ ಚೆನ್ನಾಗಿರೋದು ಎನ್ನುವುದು ನನ್ನ ವೈಯುಕ್ತಿಕ ಅಭಿಪ್ರಾಯ. ಆದರೆ ಸಾಕಷ್ಟು ರಾಜಕೀಯ ಕಾರಣಗಳು ಟೂರ್ನಿ ಅಯೋಜನೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐಪಿಎಲ್ 2021: ರಿಚರ್ಡ್‌ಸನ್‌ ಬದಲಿಗೆ ಆರ್‌ಸಿಬಿ ಕೂಡಿಕೊಂಡ ಸ್ಕಾಟ್‌ ಕುಗ್ಗಲಯನ್‌

ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅದರಲ್ಲೂ ನಾನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನವನ್ನು ಪಡೆದಿರಲಿಲ್ಲ. ಈ ಬಯೋ ಬಬಲ್‌ನಲ್ಲಿರುವುದಕ್ಕಿಂತ ತವರಿಗೆ ವಾಪಾಸಾಗುವುದೇ ಒಳಿತು ಎಂದು ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ಜಂಪಾ ತಿಳಿಸಿದ್ದಾರೆ.

ಐಪಿಎಲ್‌ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರಿಂದ ಆಗುವ ನಷ್ಟದ ಬಗ್ಗೆ ಪ್ರತಿಕ್ರಿಯಿಸಿರುವ ಜಂಪಾ, ಖಂಡಿತಾವಾಗಿಯೂ ಹಣವನ್ನು ತ್ಯಾಗಮಾಡಿದಂತಾಗುತ್ತದೆ. ಆದರೆ ನನಗೆ ಹಣಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಎಂದು ಆಸೀಸ್‌ ಲೆಗ್‌ಸ್ಪಿನ್ನರ್‌ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ 2021: ಆರ್‌ಸಿಬಿಗೆ ಕೈಕೊಟ್ಟು ದಿಢೀರ್ ತವರಿಗೆ ಮರಳಿದ ಇಬ್ಬರು ಸ್ಟಾರ್ ಕ್ರಿಕೆಟಿಗರು..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆ್ಯಡಂ ಜಂಪಾ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಈ ಮೊದಲು ಜಂಪಾರನ್ನು 1.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದಾದ ಬಳಿಕ ಈ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಆ್ಯಡಂ ಜಂಪಾರನ್ನು ಆರ್‌ಸಿಬಿ ರೀಟೈನ್ ಮಾಡಿಕೊಂಡಿತ್ತು.

Follow Us:
Download App:
  • android
  • ios