14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಅರ್ಧಕ್ಕೆ ತೊರೆದು ತವರಿನತ್ತ ಮುಖ ಮಾಡಿರುವ ಕೇನ್ ರಿಚರ್ಡ್‌ಸನ್‌ ಬದಲಿಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಮೀಸಲು ಆಟಗಾರ ಇದೀಗ ಆರ್‌ಸಿಬಿ ಪಾಳಯ ಕೂಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಹಮದಾಬಾದ್(ಏ.28)‌: ವೈಯಕ್ತಿಕ ಕಾರಣ ನೀಡಿ 14ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದ ಆಸ್ಪ್ರೇಲಿಯಾದ ಕೇನ್‌ ರಿಚರ್ಡ್‌ಸನ್‌ ಬದಲಿಗೆ ಆರ್‌ಸಿಬಿ ನ್ಯೂಜಿಲೆಂಡ್‌ನ ಆಲ್ರೌಂಡರ್‌ ಸ್ಕಾಟ್‌ ಕುಗ್ಗಲಯನ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. 

ಸ್ಕಾಟ್ ಕುಗ್ಗಲಯನ್‌ ಮುಂಬೈ ತಂಡದ ಮೀಸಲು ಆಟಗಾರನಾಗಿ ಬಯೋ ಬಬಲ್‌ನಲ್ಲಿದ್ದರು. ಅವರೀಗ ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸ್ಕಾಟ್‌ ಈ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಐಪಿಎಲ್‌ನಲ್ಲಿ ಆಡಿದ್ದರು. ಇನ್ನು ಜಂಪಾ ಬದಲಿಗೆ ಯಾವುದೇ ಆಟಗಾರರನ್ನು ಆರ್‌ಸಿಬಿ ತನ್ನ ತಂಡಕ್ಕೆ ಸೇರಿಸಿಕೊಂಡಿಲ್ಲ.

Scroll to load tweet…

ಐಪಿಎಲ್‌ 2021: ಆರ್‌ಸಿಬಿಗೆ ಕೈಕೊಟ್ಟು ದಿಢೀರ್ ತವರಿಗೆ ಮರಳಿದ ಇಬ್ಬರು ಸ್ಟಾರ್ ಕ್ರಿಕೆಟಿಗರು..!

29 ವರ್ಷದ ಸ್ಕಾಟ್ ಕುಗ್ಗಲಯನ್‌ ನ್ಯೂಜಿಲೆಂಡ್ ಪರ 2 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಸ್ಕಾಟ್ ಕುಗ್ಗಲಯನ್‌ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆಸ್ಟ್ರೇಲಿಯಾ ಬೌಲರ್‌ಗಳಾದ ಕೇನ್ ರಿಚರ್ಡ್‌ಸನ್ ಹಾಗೂ ಆಡಂ ಜಂಪಾ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಬಯೋಬಬಲ್ ತೊರೆದು ಕಾಂಗರೂ ನಾಡಿನತ್ತ ಮುಖ ಮಾಡಿದ್ದರು. 

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 6 ಪಂದ್ಯಗಳನ್ನಾಡಿ 5 ಗೆಲುವು ಹಾಗೂ ಒಂದು ಸೋಲಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.