Asianet Suvarna News Asianet Suvarna News

IPL 2021: ಸುಲಭ ಟಾರ್ಗೆಟ್ ಪಡೆದ ಹೈದರಾಬಾದ್‌ಗೆ ಶಾಕ್, ಪಂಜಾಬ್‌ ಕಿಂಗ್ಸ್‌ಗೆ 5 ರನ್ ಗೆಲುವು!

  • ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ನಡುವಿನ ರೋಚಕ ಪಂದ್ಯ
  • ಮೊತ್ತ ಕಡಿಮೆಯಾದರೂ ಹೋರಾಟ ಅಷ್ಟೇ ರೋಚಕ
  • ಪಂಜಾಬ್ ಕಿಂಗ್ಸ್‌ಗೆ 5 ರನ್ ಗೆಲುವು, ಹೋಲ್ಡರ್ ಹೋರಾಟ ವ್ಯರ್ಥ
IPL 2021  Ravi Bishnoi helo Punjab kings to beat Sunrisers Hyderbad by 5 runs in Sharjah ckm
Author
Bengaluru, First Published Sep 25, 2021, 11:18 PM IST

ಶಾರ್ಜಾ(ಸೆ.25):  ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಟಾರ್ಗೆಟ್ 126 ರನ್. ಆದರೆ ಹೋರಾಟ ಅದಕ್ಕಿಂತ ರೋಚಕ. ಪಂಜಾಬ್ ಕಿಂಗ್ಸ್(Punjab Kings) ಸುಲಭ ಟಾರ್ಗೆಟ್ ನೀಡಿ, ಅಷ್ಟೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಪರಿಣಾಮ ಪಂದ್ಯದ ಕುತೂಹಲ ಅಂತಿಮ ಎಸೆತದವರೆಗೂ ಹಿಡಿದಿಟ್ಟುಕೊಂಡಿತು. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರೆ ಪಂದ್ಯ ಟೈ, ಆದರೆ ನಥನ್ ಎಲ್ಲಿಸ್ ಜಾಣ್ಮೆ ವರ್ಕೌಟ್ ಆಯಿತು. ಪರಿಣಾಮ ಪಂಜಾಬ್ ಕಿಂಗ್ಸ್(PBKS) 5 ರನ್ ರೋಚಕ ಗೆಲುವು ಕಂಡಿದೆ. ಈ ಮೂಲಕ ಅತೀ ಕಡಿಮೆ ಮೊತ್ತ ದಾಖಲಿಸಿ ಗೆಲುವು ದಾಖಲಿಸಿದ ಹೆಗ್ಗಳಿಕೆಗೂ ಪಂಜಾಬ್ ಪಾತ್ರವಾಗಿದೆ.

IPL 2021: ರಾಯಲ್ಸ್‌ ಮಣಿಸಿ ಫ್ಲೇ ಆಫ್‌ ಹಾದಿ ಖಚಿತಪಡಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್‌

IPL ಟೂರ್ನಿಯಲ್ಲಿ ಕಡಿಮೆ ಮೊತ್ತ ದಾಖಲಿಸಿ ಪಂಜಾಬ್ ಗೆದ್ದ ಪಂದ್ಯಗಳು:
120 vs ಮುಂಬೈ, ಡರ್ಬನ್, 2009
126 vs ಹೈದರಾಬಾದ್, ಶಾರ್ದಾ, 2021 *
127 vs ಹೈದರಾಬಾದ್, ದುಬೈ, 2020
133 vs ಕೆಕೆಆರ್, ಅಬುಧಾಬಿ, 2014

ಟಾರ್ಗೆಟ್ 126. ಸುಲಭ ಗುರಿ ಮುಂದಿದ್ದರೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಳಪೆ ಆರಂಭ ಐಪಿಎಲ್ 2021ರ(IPL 2021) ಎರಡನೇ ಭಾಗದಲ್ಲೂ ಮುಂದುವರಿಯಿತು. ಡೇವಿಡ್ ವಾರ್ನರ್(David Warner) ಮತ್ತೆ ನಿರಾಸೆ ಅನುಭವಿಸಿದರು. ವಾರ್ನರ್ ಕೇವಲ 2 ರನ್ ಸಿಡಿಸಿ ಔಟಾದರು. ವೃದ್ಧಿಮಾನ್ ಸಾಹ ಹೋರಾಟ ಮುಂದುವರಿಸಿದರೆ, ಇತರರಿಂದ ಸಾಥ್ ಸಿಗಲಿಲ್ಲ.

IPL 2021: ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ KBC ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ!

ಮೊಹಮ್ಮದ್ ಶಮಿ(Mohammed Shami) ಮಾರಕ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸುಲಭ ಗೆಲುವು ಕೂಡ ಬೆಟ್ಟದಷ್ಟು ಎತ್ತರವಾಗಿ ಕಂಡಿತು.  ನಾಯಕ ಕೇನ್ ವಿಲಿಯಮ್ಸನ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಸನ್‌ರೈಸರ್ಸ್ ಹೈದರಾಬಾದ್ 10 ರನ್‌ಗ 2 ವಿಕೆಟ್ ಕಳೆದುಕೊಂಡಿತು. ಅಲ್ಪ ಮೊತ್ತದ ಪಂದ್ಯದಲ್ಲಿ ಎಲ್ಲಾ ಒತ್ತಡ ಹೈದರಾಬಾದ್ ತಂಡದ ಮೇಲೆ ಬಿತ್ತು.

ಹೈದರಾಬಾದ್ ಮಧ್ಯಮ ಕ್ರಮಾಂಕ ಕೂಡ ಆಸರೆಯಾಗಲಿಲ್ಲ. ಮನೀಶ್ ಪಾಂಡೆ 13 ರನ್ ಸಿಡಿಸಿ ಔಟಾದರು. ಕೇದಾರ್ ಜಾಧವ್ 12 ರನ್ ಸಿಡಿಸಿ ನಿರ್ಗಮಿಸಿದರು. ಅಬ್ದುಲ್ ಸಮಾದ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ಹೋರಾಟ ನೀಡಿದ ವೃದ್ಧಿಮಾನ್ ಸಾಹ 31 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.

ಜೇಸನ್ ಹೋಲ್ಡರ್(Jason Holder) ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಸರೆಯಾದರು. ಇದರಿಂದ ಪಂಜಾಬ್ ಆತಂಕ ಹೆಚ್ಚಾಯಿತು. ಹೋಲ್ಡರ್  ಬ್ಯಾಟಿಂಗ್ ಮುಂದುವರಿಸಿದರು. ಆದರೆ ರಶೀದ್ ಖಾನ್ ವಿಕೆಟ್ ಪತನ ವಿಲಿಯಮ್ಸನ್ ಪಡೆಗೆ ಆಘಾತ ನೀಡಿತು. ಅಂತಿಮ 9 ಎಸೆತದಲ್ಲಿ ಹೈದರಾಬಾದ್ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. 

IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್‌ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!

ಜೇಸನ್ ಹೋಲ್ಡರ್ ಸ್ಫೋಟಕ ಬ್ಯಾಟಿಂಗ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಅಂತಿಮ ಓವರ್‌ನಲ್ಲಿ ಸಿಡಿಸಿದ ಸಿಕ್ಸರ್‌ನಿಂದ ಹೈದರಾಬಾದ್ ಗೆಲುವಿಗೆ 3 ಎಸೆತದಲ್ಲಿ 10 ರನ್ ಬೇಕಿತ್ತು. ನಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಹೋಲ್ಡರ್‌ಗೆ ಮತ್ತೆ ಸಿಕ್ಸರ್, ಬೌಂಡರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 120 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. ಹೋಲ್ಡರ್ ಅಜೇಯ 47 ರನ್ ಸಿಡಿಸಿದರು.

5 ರನ್ ರೋಚಕ ಗೆಲುವು ಸಾಧಿಸಿದ ಪಂಜಾಬ್ ಕುಣಿದು ಕುಪ್ಪಳಿಸಿತು. ಪಂಜಾಬ್ ಪರ ರವಿ ಬಿಶ್ನೋಯ್ 3, ಮೊಹಮ್ಮದ್ ಶಮಿ 2 ಹಾಗೂ ಅರ್ಶದೀಪ್ ಸಿಂಗ್ 1 ವಿಕೆಟ್ ಕಬಳಿಸಿದರು.

ಅಂಕಪಟ್ಟಿ:
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಬದಲಾವಣೆ ಆಗಿದೆ.  ಪಂದ್ಯಕ್ಕೂ ಮೊದಲು ಪಂಜಾಬ್ 7ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 8ನೇ ಸ್ಥಾನದಲ್ಲಿತ್ತು.  ಇದೀಗ ಪಂಜಾಬ್ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಇತ್ತ ಹೈದರಾಬಾದ್ ಕೊನೆಯ ಸ್ಥಾನದಲ್ಲಿದೆ.

Follow Us:
Download App:
  • android
  • ios