ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ ಕೆಬಿಸಿ ಸ್ಪರ್ಧಿ ರೋಲ್ ಮಾಡೆಲ್ ರೋಹಿತ್ ಶರ್ಮಾ, ರೋಹಿತ್ ಭೇಟಿಯಾಗುವ ಆಸೆ ರೋಹಿತ್ ಶರ್ಮಾಗೆ ವಿಡಿಯೋ ಕಾಲ್ ಮಾಡಿದ ಅಮಿತಾಬ್ ಬಚ್ಚನ್
ಮುಂಬೈ(ಸೆ.23): ವೃತ್ತಿಯಲ್ಲಿ ಟೀಚರ್, ಆದರೆ ಮುಂಬೈ ಇಂಡಿಯನ್ಸ್ (Mumbai Indians) ನಾಯಕ ರೋಹಿತ್ ಶರ್ಮಾ(Rohit Sharma) ಅಪ್ಪಟ ಅಭಿಮಾನಿ. ಬಾಲಿವುಡ್(Bollywood) ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಪರ್ಧಿ ಪ್ರಾಂಶುಗೆ ರೋಹಿತ್ ರೋಲ್ ಮಾಡೆಲ್. ಸ್ಪರ್ಧಿಯ ಆಸೆ ಪೂರೈಸಲು IPL 2021 ಟೂರ್ನಿ ಬ್ಯೂಸಿ ವೇಳಾಪಟ್ಟಿ ನಡುವೆ ರೋಹಿತ್ ಶರ್ಮಾ ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿದ್ದಾರೆ.
IPL 2021: ರೋಹಿತ್, ಕೊಹ್ಲಿ ದಾಖಲೆ ಅಳಿಸಿ ಹಾಕಿದ ಶಿಖರ್ ಧವನ್..!
ದುಬೈನಲ್ಲಿ ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿರುವ ರೋಹಿತ್ ಶರ್ಮಾ ಅಭಿಮಾನಿ ಆಸೆ ಪೂರೈಸಲು ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ ಅಚ್ಚರಿ ನೀಡಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ(kaun banega crorepati) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಂಶು, ರೋಹಿತ್ ಶರ್ಮಾ ಫೋಟೋವನ್ನು ತಮ್ಮ ವ್ಯಾಲೆಟ್‌ನಲ್ಲಿ ಇಟ್ಟುಕೊಂಡೇ ತಿರುಗಾಡುವ ಟೀಚರ್. ಹೀಗಾಗಿ ರೋಹಿತ್ ಅಭಿಮಾನಿ ಆಸೆಯನ್ನು ಪೂರೈಸಲು ಅಮಿತಾಬ್ ಬಚ್ಚನ್(Amitabh Bachchan) ನೇರವಾಗಿ ರೋಹಿತ್ ಶರ್ಮಾಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಯಾರಾಗಲಿದ್ದಾರೆ ಟೀಂ ಇಂಡಿಯಾ ಮುಂದಿನ ಟಿ20 ಕ್ಯಾಪ್ಟನ್..?
ಅಮಿತಾಬ್ ಬಚ್ಚನ್ ಮನವಿಗೆ ಸ್ಪಂದಿಸಿದ ರೋಹಿತ್ ಶರ್ಮಾ ಅಭಿಮಾನಿ(Fan) ಆಸೆ ಪೂರೈಸಲು ವಿಡಿಯೋ ಕಾಲ್ ಬರುವುದಾಗಿ ಹೇಳಿದ್ದಾರೆ. ಇತ್ತ ಅಮಿತಾಬ್ ಬಚ್ಚನ್ ಪ್ರಾಂಶುಗೆ ಸರ್ಪ್ರೈಸ್ ಕಾಲರ್ ಇದ್ದಾರೆ. ಮಾತನಾಡಿ ಎಂದಿದ್ದಾರೆ. ಸ್ಕ್ರೀನ್ ಮೇಲೆ ರೋಹಿತ್ ಶರ್ಮಾ ಪ್ರತ್ಯಕ್ಷರಾಗುತ್ತಿದ್ದಂತೆ, ಪ್ರಾಂಶು ಭಾವುಕರಾಗಿದ್ದಾರೆ. ಈ ವೇಳೆ ಅಮಿತಾಬ್ ಬಚ್ಚನ್ ನಿಮ್ಮ ನೆಚ್ಚಿನ ಕ್ರಿಕೆಟಿಗ ನಿಮ್ಮ ಮುಂದೆ ವಿಡಿಯೋ ಕಾಲ್‌ನಲ್ಲಿದ್ದಾರೆ ಮಾತನಾಡಿ ಎಂದಿದ್ದಾರೆ.
ದೇವರಲ್ಲಿ ಹೇಗೆ ಮಾತನಾಡಲಿ ಎಂದು ಪ್ರಾಂಶು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಪ್ರಾಂಶುಗೆ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಉತ್ತಮವಾಗಿ ಆಟವಾಡಿ ಗೆಲುವು ಸಾಧಿಸಲು ಶುಭಕೋರಿದ್ದಾರೆ.
ರೋಹಿತ್ ಶರ್ಮಾ ಅಭಿಮಾನಿಯ ಕರೆಗೆ ಓಗೊಟ್ಟು ವಿಡಿಯೋ ಕಾಲ್ ಮೂಲಕ ಮಾತನಾಡಿದ ಬಳಿಕ, ಇದೀಗ ಅಭಿಮಾನಿಗಳು ತಾವು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ತೆರಳಿ ರೋಹಿತ್ ಶರ್ಮಾ ಭೇಟಿಯಾಗುವ ಅವಕಾಶವಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
INDvsENG ಟೆಸ್ಟ್: 69 ವರ್ಷದ ದಾಖಲೆ ಮುರಿದ ರೋಹಿತ್ ಹಾಗೂ ಕೆಎಲ್ ರಾಹುಲ್ ಜೋಡಿ!
ಐಪಿಎಲ್ 2021ರಲ್ಲಿ ರೋಹಿತ್ ಶರ್ಮಾ :
ಐಪಿಎಲ್ ಟೂರ್ನಿ 2021ರ ಎರಡನೇ ಭಾಗದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್ ಶ್ರಮಾ ವಿಶ್ರಾಂತಿ ಪಡೆದಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಕೀರನ್ ಪೊಲಾರ್ಡ್(kieron pollard)ನಾಯಕತ್ವ ವಹಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮುಗ್ಗರಿಸಿತ್ತು. ಕೆಕೆಆರ್(KKR)ವಿರುದ್ಧದ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಾಗಿದ್ದಾರೆ.
