ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೋರಾಟ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ಬೌಲಿಂಗ್ ಆಯ್ಕೆ ಅಬು ಧಾಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ಅಬು ಧಾಬಿ(ಅ.02): IPL 2021ರಲ್ಲಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಹಾಗೂ ಪ್ಲೇ ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನ ರಾಯಲ್ಸ್(Rajasthan Royals) ಇಂದು ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

Scroll to load tweet…

ಚೆನ್ನೈ ಸೂಪರ್ ಕಿಂಗ್ಸ್:
ರುತುರಾಜ್ ಗಾಯಕ್ವಾಡ್, ಫಾಫ್ ಡುಪ್ಲೆಸಿಸ್, ಮೊಯಿನ್ ಆಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್.ಧೋನಿ, ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಶಾರ್ದೂಲ್ ಠಾಕೂರ್, ಕೆಎಂ ಆಸಿಫ್, ಜೋಶ್ ಹೇಜಲ್‌ವುಡ್

Scroll to load tweet…

IPL 2021 ಕೆಕೆಆರ್‌ನಿಂದ ನಾಯಕ ಮಾರ್ಗನ್‌ಗೆ ಗೇಟ್‌ಪಾಸ್‌‌?

47ನೇ ಲೀಗ್ ಪಂದ್ಯ ಅಬು ಧಾಬಿಯಲ್ಲಿ ನಡೆಯತ್ತಿದೆ. ಈ ಹಿಂದಿನ ಪಂದ್ಯಗಳಿಗೆ ಬಳಸಿದ ಪಿಚ್‌ನಲ್ಲಿ ಇಂದು ಪಂದ್ಯ ನಡೆಯುತ್ತಿಲ್ಲ. ಚೆನ್ನೈ(CSK), ರಾಜಸ್ಥಾನ(RR) ಪಂದ್ಯಕ್ಕೆ ಹೊಸ ಪಿಚ್ ಬಳಸಾಗುತ್ತಿದೆ. ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ವೇಗಿಗಳು ತಮ್ಮ ಬೇಸಿಕ್ ಸ್ಕಿಲ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕಿದೆ. ಬ್ಯಾಟ್ಸ್‌ಮನ್‌ಗಳಿಗೆ ಈ ಪಿಚ್ ಹೆಚ್ಚಿನ ನೆರವು ನೀಡಲಿದೆ.

IPL 2021: ಈ ಕಾರಣಕ್ಕಾಗಿ ಒಂದೂ ಪಂದ್ಯವನ್ನಾಡದೇ ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದ ಅರ್ಜುನ್‌ ತೆಂಡುಲ್ಕರ್

ಅಂಕಿ ಅಂಶಗಳು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿದೆ. ರಾಜಸ್ಥಾನ ಹಾಗೂ ಚೆನ್ನೈ ಮುಖಾಮುಖಿಯಲ್ಲಿ ಚೆನ್ನೈ ಮೇಲುಗೈ ಸಾಧಿಸಿದೆ. ಚೈನ್ನೈ ಸೂಪರ್ ಕಿಂಗ್ಸ್ 15 ಗೆಲುವು ಸಾಧಿಸಿದ್ದರೆ, ರಾಜಸ್ಥಾನ 9 ಗೆಲವು ಕಂಡಿದೆ. 

ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಉತ್ತಮ ಆರಂಭ, ಬಲಿಷ್ಠ ಮಧ್ಯಮ ಕ್ರಮಾಂಕ ಹಾಗೂ ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಚೆನ್ನೈ ತಂಡಕ್ಕೆ ನೆರವಾಗುತ್ತಿದೆ. ಇತ್ತ ಬೌಲಿಂಗ್‌ನಲ್ಲೂ ಅಷ್ಟೇ ಉತ್ತಮ ಹೋರಾಟ ನೀಡುತ್ತಿದೆ.

IPL 2021: ಪತ್ನಿಯರ ಬರ್ತ್‌ಡೇ ರೋಮ್ಯಾಂಟಿಕ್‌ ಆಗಿ ಸೆಲೆಬ್ರೆಟ್‌ ಮಾಡಿದ RCB ಪ್ಲೇಯರ್ಸ್‌

ಐಪಿಎಲ್ 2021ರ ಎರಡನೇ ಭಾಗದಲ್ಲಿ ರಾಜಸ್ಥಾನ ರಾಯಲ್ಸ್ ಕೇವಲ 1 ಗೆಲುವು ಕಂಡಿದೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕ್ರಿಸ್ ಮೊರಿಸ್ ವೈಫಲ್ಯ ದೊಡ್ಡ ತಲೆನೋವು ತಂದಿದೆ. ದುಬಾರಿ ಮೊತ್ತಕ್ಕೆ ರಾಜಸ್ತಾನ ರಾಯಲ್ಸ್ ಮೊರಿಸ್ ಖರೀದಿಸಿದರೂ ಇದುವರೆಗೂ ಗಮನಸೆಳೆಯುವ ಪ್ರದರ್ಶನ ಮೂಡಿಬಂದಿಲ್ಲ. ಇವಿನ್ ಲಿವಿಸ್ ಕೂಡ ದಿಟ್ಟ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 

ಅಂಕಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ(Points Table) ಮೊದಲ ಸ್ಥಾನದಲ್ಲಿದೆ. ಆಡಿದ 11 ಪಂದ್ಯದಲ್ಲಿ 9 ಗೆಲುವು ಸಾಧಿಸಿರುವ ಚೆನ್ನೈ ಕೇವಲ 2 ಸೋಲು ಕಂಡಿದೆ. ಇತ್ತ ರಾಜಸ್ಥಾನ ರಾಯಲ್ಸ್ ತಂಡ ಆಡಿದ 11 ಪಂದ್ಯದಲ್ಲಿ ಕೇವಲ 4 ಗೆಲುವು ಕಂಡಿದೆ. ಇನ್ನುಳಿದ 7 ಪಂದ್ಯದಲ್ಲಿ ಮುಗ್ಗರಿಸಿದೆ. 8 ಅಂಕ ಸಂಪಾದಿಸಿರುವ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.