ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.02): ಸನ್‌ರೈಸ​ರ್ಸ್ ಹೈದರಾಬಾದ್‌ ಹಾಗೂ ರಾಜಸ್ಥಾನ ರಾಯಲ್ಸ್‌, ಈ ಎರಡೂ ತಂಡಗಳು ಈ ವರ್ಷ ಒಂದೇ ದೋಣಿಯಲ್ಲಿ ಸಾಗುತ್ತಿವೆ. ಎರಡು ತಂಡಗಳು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಮೇಜರ್‌ ಸರ್ಜರಿಯಾಗಿದ್ದು, ಡೇವಿಡ್‌ ವಾರ್ನರ್‌ ಬದಲಿಗೆ ಕೇನ್‌ ವಿಲಿಯಮ್ಸನ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಅದೃಷ್ಟ ಇನ್ನಾದರೂ ಬದಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಐಪಿಎಲ್ 2021: ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ವಿಲಿಯಮ್ಸನ್‌ ಹೊಸ ನಾಯಕ

ಎರಡೂ ತಂಡಗಳಲ್ಲಿ ಮ್ಯಾಚ್‌ ವಿನ್ನರ್‌ಗಳ ದಂಡೇ ಇದೆ. ಆದರೆ ಅವರ ಪ್ರತಿಭೆಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಎರಡೂ ತಂಡಕ್ಕೆ ಸಮತೋಲನದಿಂದ ಕೂಡಿದ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ. ಸನ್‌ರೈಸ​ರ್ಸ್ ಆಡಿರುವ 6ರಲ್ಲಿ 5 ಪಂದ್ಯಗಳನ್ನು ಸೋತರೆ, ರಾಯಲ್ಸ್‌ 6ರಲ್ಲಿ 4 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಕೊನೆ 2 ಸ್ಥಾನಗಳಲ್ಲಿರುವ ತಂಡಗಳು ಟೂರ್ನಿಯಲ್ಲಿ ಉಳಿಯಲು ಹೋರಾಡಲಿವೆ.

ಸಂಭವನೀಯ ಆಟಗಾರರ ಪಟ್ಟಿ

ಸನ್‌ರೈಸ​ರ್ಸ್: ವಾರ್ನರ್‌/ರಾಯ್‌, ಬೇರ್‌ಸ್ಟೋವ್‌, ಪಾಂಡೆ, ವಿಲಿಯಮ್ಸನ್‌(ನಾಯಕ), ಶಂಕರ್‌, ಕೇದಾರ್‌, ರಶೀದ್‌, ಸುಚಿತ್‌, ಸಂದೀಪ್‌, ಖಲೀಲ್‌, ಕೌಲ್‌.

ರಾಜಸ್ಥಾನ: ಯಶಸ್ವಿ, ಬಟ್ಲರ್‌, ಸ್ಯಾಮ್ಸನ್‌(ನಾಯಕ), ಮಿಲ್ಲರ್‌, ದುಬೆ, ರಿಯಾನ್‌, ಮೋರಿಸ್‌, ತೆವಾಟಿಯಾ, ಶ್ರೇಯಸ್‌, ಸಕಾರಿಯಾ, ಮುಸ್ತಾಫಿಜುರ್‌.

ಸ್ಥಳ: ನವದೆಹಲಿ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್