ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌ ಭಾರತ ನಡೆಸುತ್ತಿರುವ ಕೋವಿಡ್ 19 ವೈರಸ್ ವಿರುದ್ದದ ಹೋರಾಟಕ್ಕೆ 7.5 ಕೋಟಿ ರುಪಾಯಿ ದೇಣಿಗೆ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಜೈಪುರ(ಏ.29): ಇಡೀ ದೇಶವೇ ಜಾಗತಿಕ ಪಿಡುಗಾದ ಕೊರೋನಾ ವೈರಸ್ ವಿರುದ್ದ ನಿರಂತರವಾಗಿ ಹೋರಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೋವಿಡ್ ವಿರುದ್ದದ ಹೋರಾಟಕ್ಕೆ ಒಂದು ಮಿಲಿಯನ್ ಡಾಲರ್(7.5 ಕೋಟಿ ರುಪಾಯಿ)ಅನ್ನು ಭಾರತ ಸರ್ಕಾರಕ್ಕೆ ದೇಣಿಗೆ ರೂಪದಲ್ಲಿ ನೀಡುವ ಮೂಲಕ ದೇಶದ ಜತೆ ಕೈಜೋಡಿಸಿದೆ.

ಕೋವಿಡ್ ಪರಿಹಾರ ನಿಧಿಗೆ ರಾಜಸ್ಥಾನ ರಾಯಲ್ಸ್‌ 7.5 ಕೋಟಿ ರುಪಾಯಿಯನ್ನು ನೀಡಿದೆ ಎಂದು ತಿಳಿಸಲು ಖುಷಿಯಾಗುತ್ತಿದೆ. ಭಾರತದಲ್ಲಿರುವ ಜನರು ಕೋವಿಡ್ ವಿರುದ್ದ ಹೋರಾಡಲು ಇದು ಬಲ ತುಂಬಲಿದೆ ಎಂದು ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಾಜಸ್ಥಾನ ರಾಯಲ್ಸ್‌ನ ಆಟಗಾರರು, ಮಾಲೀಕರು ಒಟ್ಟಾಗಿ ರಾಯಲ್ ರಾಜಸ್ಥಾನ ಫೌಂಡೇಶನ್ ಮೂಲಕ ಕೋವಿಡ್ ರಿಲೀಫ್‌ ಫಂಡ್‌ಗೆ ದೇಣಿಗೆ ನೀಡಿದ್ದಾರೆ. 

Scroll to load tweet…

ಭಾರತದ ಕೋವಿಡ್ ಸಂಕಷ್ಟಕ್ಕೆ ಮಿಡಿದ ಆಸೀಸ್‌ ಕ್ರಿಕೆಟಿಗ ಬ್ರೆಟ್‌ ಲೀ ಹೃದಯ

ಈ ಮೊದಲು ಅಸ್ಟ್ರೆಲಿಯಾದ ವೇಗಿಗಳಾದ ಪ್ಯಾಟ್ ಕಮಿನ್ಸ್‌ ಹಾಗೂ ಬ್ರೆಟ್‌ ಲೀ ಸ್ವಯಂ ಪ್ರೇರಿತವಾಗಿ ದೇಣಿಗೆ ನೀಡುವ ಮೂಲಕ ಭಾರತದ ಕೋವಿಡ್‌ ಸಂಕಷ್ಟಕ್ಕೆ ನೆರವಾಗಿದ್ದರು. ಮೊದಲಿಗೆ ಕಮಿನ್ಸ್‌ ಸುಮಾರು 37 ಲಕ್ಷ ರುಪಾಯಿ ದೇಣಿಗೆ ನೀಡಿ ಮಾದರಿಯಾಗಿದ್ದರು. ಮಾತ್ರವಲ್ಲದೇ ಇತರರು ಸಂಕಷ್ಟದಲ್ಲಿರುವ ಭಾರತಕ್ಕೆ ನೆರವಾಗಿ ಎಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಅಸೀಸ್‌ ಮಾಜಿ ವೇಗಿ ಬ್ರೆಟ್ ಲೀ 40.35 ಲಕ್ಷ ರುಪಾಯಿ ಮೌಲ್ಯದ ಒಂದು ಬಿಟ್‌ ಕಾಯಿನ್‌ ಪಿಎಂ ಕೇರ್ಸ್‌ ಫಂಡ್‌ಗೆ ದೇಣಿಗೆ ರೂಪದಲ್ಲಿ ನೀಡಿದ್ದರು.