ಭಾರತದ ಕೋವಿಡ್ ಸಂಕಷ್ಟಕ್ಕೆ ಮಿಡಿದ ಆಸೀಸ್ ಕ್ರಿಕೆಟಿಗ ಬ್ರೆಟ್ ಲೀ ಹೃದಯ
ಆಸೀಸ್ ವೇಗಿ ಪ್ಯಾಟ್ ಕಮಿನ್ಸ್‌ರಿಂದ ಸ್ಪೂರ್ತಿಗೊಂಡ ಮಾಜಿ ವೇಗಿ ಬ್ರೆಟ್ ಲೀ ಇದೀಗ ಕೋವಿಡ್ 19 ವಿರುದ್ದ ಭಾರತದ ಹೋರಾಟಕ್ಕೆ ಅಂದಾಜು 41 ಲಕ್ಷ ರುಪಾಯಿ ಮೊತ್ತದ ಒಂದು ಬಿಟ್ ಕಾಯಿನ್ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.28): ಆಸ್ಪ್ರೇಲಿಯಾದ ಮಾಜಿ ವೇಗಿ, ಐಪಿಎಲ್ ವೀಕ್ಷಕ ವಿವರಣೆಗಾರ ಬ್ರೆಟ್ ಲೀ ಭಾರತದಲ್ಲಿ ಆಕ್ಸಿಜನ್ ಪೂರೈಕೆಗೆ 1 ಬಿಟ್ ಕಾಯಿನ್(ಅಂದಾಜು 41 ಲಕ್ಷ ರು.) ದೇಣಿಗೆ ನೀಡಿದ್ದಾರೆ. ‘ಕ್ರಿಪ್ಟೋ ರಿಲೀಫ್’ ಮೂಲಕ ದೇಣಿಗೆ ಹಣ ಭಾರತ ಸರ್ಕಾರಕ್ಕೆ ತಲುಪುವಂತೆ ಮಾಡಲು ನಿರ್ಧರಿಸಿದ್ದಾರೆ.
‘ಭಾರತ ನನ್ನ 2ನೇ ಮನೆಯಿದ್ದಂತೆ. ಸದ್ಯ ಎದುರಾಗಿರುವ ಪರಿಸ್ಥಿತಿ ನೋಡಿ ಬಹಳ ಸಂಕಟವಾಗುತ್ತಿದೆ’ ಎಂದು ಲೀ ಹೇಳಿದ್ದಾರೆ. ಈ ಮೊದಲು ಪ್ಯಾಟ್ ಕಮಿನ್ಸ್ ಭಾರತದ ಸಂಕಷ್ಟಕ್ಕೆ ನೆರವಾಗಿದ್ದಕ್ಕೆ ಲೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಭಾರತೀಯರಿಗೆ ಮಿಡಿದ ಆಸೀಸ್ ಹೃದಯ; ಆಕ್ಸಿಜನ್ ಖರೀದಿಗೆ 37 ಲಕ್ಷ ದೇಣಿಗೆ ನೀಡಿದ ಕಮಿನ್ಸ್!
ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಸಹಾಯ ನಿಧಿಗೆ 50000 ಅಮೆರಿಕನ್ ಡಾಲರ್ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಆಸ್ಪ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್‌ರಿಂದ ಸ್ಫೂರ್ತಿ ಪಡೆದು ಲೀ ಹಣ ಸಹಾಯ ಮಾಡಿದ್ದಾರೆ. ಬ್ರೆಟ್ ಲೀ ಕಾರ್ಯಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.