ಮುಂಬೈ(ಏ.24): ಐಪಿಎಲ್ ಟೂರ್ನಿ, ಪಂದ್ಯ, ಅಭ್ಯಾಸದ ನಡುವೆ ಕ್ರಿಕೆಟಿಗರ ಮಸ್ತಿಗಳು ಹೆಚ್ಚು ವೈರಲ್ ಆಗುತ್ತದೆ. ಆದರೆ ಕೊರೋನಾ ವೈರಸ್ ಕಾರಣ ಹಲವು ಇತಿ ಮಿತಿಗಳಿರುವುದರಿಂದ ಕ್ರಿಕೆಟಿಗರ ಮಸ್ತಿಗೆ ಕೊಂಚ ಬ್ರೇಕ್ ಬಿದ್ದಿದೆ. ಇದೀಗ ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಭ್ಯಾಸದ ವೇಳೆ ಅಮರಿಶ್ ಪುರಿಯ ಖ್ಯಾತ ಮೋಗಾಂಬೋ ಖುಷ್ ಹುವಾ  ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಕೊರೋನಾ ಸಂಕಷ್ಟಕ್ಕೆ ಹರ್ಭಜನ್ ನೆರವು; ಟೆಸ್ಟಿಂಗ್ ಲ್ಯಾಬ್ ಒದಗಿಸಿದ ಭಜ್ಜಿ!

1987ರಲ್ಲಿ ಬಿಡುಗಡೆಯಾದ ಬಾಲಿವುಡ್ ಚಿತ್ರ ಮಿ.ಇಂಡಿಯಾದಲ್ಲಿ ಅಮರಿಶ್ ಪುರಿಯ ಹೇಳಿದ ಮೋಗಾಂಬೋ ಖುಷ್ ಹುವಾ ಡೈಲಾಗ್ ಈಗಲೂ ಭಾರತದಲ್ಲಿ ಜನಪ್ರಿಯವಾಗಿದೆ. ಇದೀಗ ಇದೇ ಡೈಲಾಗನ್ನು ಅಭ್ಯಾಸದ ವೇಳೆ ಭಾರತೀಯ ಆಟಗಾರರು ಗೇಲ್‌ಗೆ ಹೇಳಿದ್ದಾರೆ. ಇನ್ನು ಗೇಲ್ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೇಳಿದ್ದಾರೆ.

 

ಪ್ರತಿ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಈ ರೀತಿಯ ಹಲವು ಡೈಲಾಗ್, ಚೇಷ್ಠೆಗಳನ್ನು ಮಾಡಿದ್ದಾರೆ. ಆರ್‌ಸಿಬಿ ತಂಡಲ್ಲಿರುವಾಗ ಕನ್ನಡದಲ್ಲಿ ಹಲವು ಪದಗಳನ್ನು ಹೇಳಿದ್ದಾರೆ. ಆದರೆ ಈ ಬಾರಿ ಕೊರೋನಾ ವೈರಸ್ ಕಾರಣ ಆಟಗಾರರಿಗೆ ಕೆಲ ನಿರ್ಬಂಧಗಳಿವೆ. ಹೀಗಾಗಿ ತಂಡದ ಮಸ್ತಿಗೆ ಬ್ರೇಕ್ ಬಿದ್ದಿದೆ.

IPL 2021 ಸಿಕ್ಸರ್‌ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್‌ ಗೇಲ್‌..!..

ಪಂಜಾಬ್ ಕಿಂಗ್ಸ್ ಮುಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೋರಾಟ ನಡೆಸಲಿದೆ. ಎಪ್ರಿಲ್ 26 ರಂದು ಪಂದ್ಯ ಆಡಲಿದೆ.