Asianet Suvarna News Asianet Suvarna News

ಕೊರೋನಾ ಸಂಕಷ್ಟಕ್ಕೆ ಹರ್ಭಜನ್ ನೆರವು; ಟೆಸ್ಟಿಂಗ್ ಲ್ಯಾಬ್ ಒದಗಿಸಿದ ಭಜ್ಜಿ!

ಕೊರೋನಾ ಸಂಕಷ್ಟ, ನಿರ್ಬಂಧ, ಕರ್ಫ್ಯೂ, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಹಲವರು ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೊರೋನಾ ಸಂಕಷ್ಟಕ್ಕೆ ನೆರವಾಗಿದ್ದಾರೆ.

Harbhajan Singh offered to set up a mobile COVID 19 testing laboratory in Pune ckm
Author
Bengaluru, First Published Apr 23, 2021, 8:53 PM IST

ಪುಣೆ(ಏ.23):  ಕೊರೋನಾಗೆ ತತ್ತರಿಸಿರುವ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಟೆಸ್ಟ್, ಟ್ರಾಕ್ ಹಾಗೂ ಟ್ರೀಟ್ಮೆಂಟ್ ಮುಖ್ಯ ಎಂದಿದ್ದರು. ಇದೀಗ ಕೊರೋನಾ ಸಂಕಷ್ಟ ಸಮಯದಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಹರ್ಭಜನ್ ಸಿಂಗ್ ಪುಣೆಯಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಒದಗಿಸಿದ್ದಾರೆ. 

IPL 2021: 699 ದಿನಗಳ ಬಳಿಕ ಕ್ರಿಕೆಟ್‌ಗೆ ಭಜ್ಜಿ ವಾಪಸ್‌!

ಮಹಾರಾಷ್ಟ್ರ ಕೊರೋನಾ ವೈರಸ್‌ಗೆ ತತ್ತರಿಸಿದೆ. ಇದೀಗ ಪುಣೆಯ ವಡ್ಗಾಂಶೇರಿಯಲ್ಲಿ ಹರ್ಭಜನ್ ಸಿಂಗ್ ಕೊರೋನಾ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಕಾರ್ಯರಂಭಿಸಲಿದೆ. ಬಳಿಕ ನಗರದ ಹಲವೆಡೆ ಸಂಚರಿಸಲಿದೆ. ನಾಳೆಯಿಂದ(ಏ.24) ನೂತನ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಕಾರ್ಯನಿರ್ವಹಿಸಲಿದೆ. 

ಮೊದಲ ನೋಟದಲ್ಲೇ ಔಟ್‌ ಆದ ಕ್ರಿಕೆಟರ್‌ ಹರ್ಭಜನ್‌ ಸಿಂಗ್‌ ಲವ್‌ ಸ್ಟೋರಿ!

ಮೊಬೈಲ್ ಟೆಸ್ಟಿಂಗ್ ಲ್ಯಾಬನ್‌ನ್ನು ನಗರದ ಡಯಾಗ್ನೋಸ್ಟಿಕ್ಸ್ ಕಂಪನಿ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ನಿರ್ವಹಣೆ ಮಾಡಲಿದೆ. ಇದು ನಗರದಲ್ಲಿನ ಕೊರೋನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಪ್ರತಿ ದಿನ 1,500 ಸ್ಯಾಂಪಲ್ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ. RT-PCR ಪರೀಕ್ಷೆ ಫಲಿತಾಂಶವನ್ನು ಕೇವಲ ನಾಲ್ಕು ಗಂಟೆಗಳಲ್ಲಿ ನೀಡಲು ಸಾಧ್ಯವಿದೆ.

5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!

ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಹರ್ಭಜನ್ ಸಿಂಗ್, ತಮ್ಮ ಹುಟ್ಟೂರು ಜಲಂಧರ್‌ನಲ್ಲಿ ಬಡವರು, ನಿರ್ಗತಿಕರು ಸೇರಿದಂತೆ 5,000 ಮಂದಿಗೆ ರೇಶನ್ ನೀಡಿದ್ದರು. ಐಪಿಎಲ್ 2021 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಹರ್ಭಜನ್ ಸಿಂಗ್, ಸ್ಪಿನ್ ಮೋಡಿ ಮಾಡುವ ವಿಶ್ವಾಸದಲ್ಲಿದೆ.

Follow Us:
Download App:
  • android
  • ios