ಡೆಲ್ಲಿ ಆರಂಭಿಕರ ಡೀಸೆಂಟ್ ಬ್ಯಾಟಿಂಗ್, ನಾಯಕನ ಸ್ಫೋಟಕ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.  

ಚೆನ್ನೈಏ.25): ಪೃಥ್ವಿ ಶಾ ಹಾಫ್ ಸೆಂಚುರಿ, ರಿಷಬ್ ಪಂತ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿದೆ. ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸುಲಭ ಗುರಿ ನೀಡಿದೆ.

Add Asianetnews Kannada as a Preferred SourcegooglePreferred

ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಆದರೆ ಸ್ಟ್ರೈಕ್ ರೇಟ್ ಐಪಿಎಲ್ ರೀತಿ ಇರಲಿಲ್ಲ. ಧವನ್ 28 ರನ್ ಸಿಡಿಸಿ ಔಟಾದರು. ಮೊದಲ ವಿಕೆಚ್‌ಗೆ ಈ ಜೋಡಿ 81 ರನ್ ಸಿಡಿಸಿತು. 

ಪೃಥ್ವಿ ಶಾ ಅರ್ಧಶತಕ ಸಿಡಿಸಿ ಮಿಂಚಿದರು. 53 ರನ್ ಸಿಡಿಸಿದ ಶಾ ರನೌಟ್‌ಗೆ ಬಲಿಯಾದರು. ಆರಂಭಿಕರ ಪತನದ ಬಳಿಕ ನಾಯಕ ರಿಷಬ್ ಪಂತ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟ ಆರಂಭಗೊಂಡಿತು. ಪಂತ್ 37 ರನ್ ಸಿಡಿಸಿ ಔಟಾದರು. ಇತ್ತ ಸ್ಟೀವ್ ಸ್ಮಿತ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 159 ರ್ ಸಿಡಿಸಿತು.