Asianet Suvarna News Asianet Suvarna News

ಮುಂಬೈ ದಾಳಿಗೆ ತತ್ತರಿಸಿದ ಚೆನ್ನೈ, ಇಬ್ಬರು ಡಕೌಟ್, ಪಟಪಟನೆ ಉದುರಿತು ವಿಕೆಟ್!

  • IPL 2021 ಎರಡನೇ ಭಾಗ ದುಬೈನಲ್ಲಿ ಆರಂಭ
  • ಚೆನ್ನೈ ಹಾಗೂ ಮುಂಬೈ ನಡುವಿನ ರೋಚಕ ಪಂದ್ಯ
  • ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡ ಚೆನ್ನೈ
IPL 2021 Mumbai indians strike early wickets CSK in deep trouble ckm
Author
Bengaluru, First Published Sep 19, 2021, 8:03 PM IST
  • Facebook
  • Twitter
  • Whatsapp

ದುಬೈ(ಸೆ.19): ಐಪಿಎಲ್ 2021ರ 2ನೇ ಭಾಗ ಆರಂಭದಲ್ಲೇ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಲೀಗ್ ಪಂದ್ಯಲ್ಲಿ ಬೌಲರ್ ಮೇಲುಗೈ ಸಾಧಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಚೆನ್ನೈಗ ಮುಂಬೈ ಶಾಕ್ ನೀಡಿದೆ. ಆರಂಭದಲ್ಲೇ 4 ವಿಕೆಟ್ ಕಬಳಿಸಿದೆ.

IPL 2021: ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಸಿಎಸ್‌ಕೆ, MIಗೆ ಪೊಲಾರ್ಡ್ ನಾಯಕ!

ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ನಿರೀಕ್ಷಿತ ಆರಂಭ ನೀಡಲು ಸಾಧ್ಯವಾಗಲಿಲ್ಲ. ಡುಪ್ಲೆಸಿಸ್ ಡಕೌಟ್ ಆದರು. ಇದರ ಬೆನ್ನಲ್ಲೆ ಮೊಯೀನ್ ಆಲಿ ಕೂಡ ಡೌಕೌಟ್‌ಗೆ ಬಲಿಯಾದರು. ಇತ್ತ ಅಂಬಾಟಿ ರಾಯುಡು ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್‌ಗೆ ವಾಪಾಸಾದರು.

ಸುರೇಶ್ ರೈನಾ ಕೇವಲ 4 ರನ್ ಸಿಡಿಸಿ ಔಟಾದರು. ಕೇವಲ 7 ರನ್ ಗಳಿಸುವಷ್ಟರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ ಕಳೆದುಕೊಂಡಿತು.  ಎಲ್ಲಾ ಒತ್ತಡ, ಜವಾಬ್ದಾರಿ ಹೆಗಲ ಮೇಲೆ ಹೊತ್ತು ಕ್ರೀಸ್‌ಗಿಳಿ ನಾಯಕ ಎಂ.ಎಸ್.ಧೋನಿ  ಕೇವಲ 3 ರನ್ ಸಿಡಿಸಿ ಔಟಾದರು. 24ರನ್‌ಗೆ 4 ವಿಕೆಟ್ ಕಳೆದುಕೊಂಡಿದೆ.

IPL 2021: ಕ್ರೀಡಾಂಗಣದಲ್ಲಿ ಪಂದ್ಯ ನೋಡಲು ಫ್ಯಾನ್ಸ್‌ಗೆ ಅವಕಾಶ, ಆದರೆ ಷರತ್ತು ಅನ್ವಯ!

ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೋಲ್ಟ್ 2 ವಿಕೆಟ್ ಕಬಳಿಸಿದರೆ, ಆ್ಯಡಮ್ ಮಿಲ್ನೆ 1 ವಿಕೆಟ್ ಉರುಳಿಸಿದ್ದಾರೆ. 

Follow Us:
Download App:
  • android
  • ios