ಐಪಿಎಲ್ 2021ರ ದುಬೈ ಅವತರಣಿಕೆ ಇಂದಿನಿಂದ ಆರಂಭ ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಟೂರ್ನಿ ದುಬೈನಲ್ಲಿ ಚಾಲನೆ ಇಂದು ಚೆನ್ನೈ ಮುಂಬೈ ಮುಖಾಮುಖಿ, ಫ್ಯಾನ್ಸ್‌ಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ

ದುಬೈ(ಸೆ.19): ಭಾರತದಲ್ಲಿ ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ 2021 ಟೂರ್ನಿ ಇಂದಿನಿಂದ ದುಬೈನಲ್ಲಿ ಮುಂದುವರಿಯುತ್ತಿದೆ. 29 ಲೀಗ್ ಪಂದ್ಯಗಳು ಭಾರತದಲ್ಲಿ ಆಯೋಜನೆಗೊಂಡಿತ್ತು. ಇಂದು 30ನೇ ಲೀಗ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಈ ಮೂಲಕ ಚುಟುಕು ಕ್ರಿಕೆಟ್ ಹಬ್ಬ ಆರಂಭಗೊಳ್ಳಲಿದೆ. ಮತ್ತೊಂದು ಸಂತಸ ವಿಚಾರ ಎಂದರೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

IPL 2021 ಚೆನ್ನೈ vs ಮುಂಬೈ ಸಂಭಾವ್ಯ ತಂಡ ಹೀಗಿವೆ ನೋಡಿ

ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಣೆಗಾಗಿ ಕ್ರೀಡಾಂಗಣ ಪ್ರವೇಶಿಸಲು ಯುಎಇ ಸರ್ಕಾರ ಅವಕಾಶ ಮಾಡಿದೆ. ಆದರೆ ಕೊರೋನಾ ಕಾರಣ ಕೆಲ ಷರತ್ತುಗಳನ್ನು ಹಾಕಲಾಗಿದೆ. ಇದು ದುಬೈ, ಶಾರ್ಜಾ ಹಾಗೂ ಅಬುದಾಬಿಯ ಮೂರು ಕ್ರೀಡಾಂಗಣಗಳಿಗೆ ಬೇರೆ ಬೇರೆ ಮಾರ್ಗಸೂಚಿ ಹೊರಡಿಸಲಾಗಿದೆ.

ದುಬೈ ಕ್ರೀಡಾಂಗಣ ಪ್ರವೇಶಿಸಲು ಅಭಿಮಾನಿಗಳಿಗೆ ಕೊರೋನಾ ಆರ್‌ಟಿಪಿಸಿಆರ್ ಪರೀಕ್ಷೆ ವರದಿ ಕಡ್ಡಾಯ ಮಾಡಿಲ್ಲ. ಆದರೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳು ಎರಡು ಡೋಸ್ ಕೊರೋನಾ ಲಸಿಕೆ ಪಡೆದಿರಬೇಕು. ಇದರ ಪ್ರಮಾಣ ಪತ್ರ ತೋರಿಸಬೇಕು. 12 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ಪ್ರಮಾಣ ಪತ್ರ ವಿನಾಯಿತಿ ನೀಡಲಾಗಿದೆ. 

IPL 2021: ಸಿಕ್ಸರ್ ದಾಖಲೆ ಬರೆಯಲು ರೋಹಿತ್‌ಗೆ ಬೇಕು ಕೇವಲ 3 ಸಿಕ್ಸ್!

ದುಬೈನಲ್ಲಿ ನಿಯಮ ಕೊಂಚ ಸಡಿಲಿಕೆ ಇದೆ. ಆದರೆ ಶಾರ್ಜಾ ಮೈದಾನದಲ್ಲಿ ಪಂದ್ಯ ವೀಕ್ಷಿಸಲು ನಿಯಮ ಮತ್ತಷ್ಟು ಕಠಿಣ ಮಾಡಲಾಗಿದೆ. ಶಾರ್ಜಾ ಕ್ರೀಡಾಂಗಣ ಪ್ರವೇಶಿಸಲು 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇನ್ನು 48 ಗಂಟೆಗಳ ಒಳಗಿನ ಕೊರೋನಾ ಆರ್‌ಟಿಪಿಸಿಆರ್ ಪರೀಕ್ಷೆ ನೆಗಟೀವ್ ವರದಿ ಕಡ್ಡಾಯವಾಗಿದೆ. ಇದರ ಜೊತೆಗೆ ಎರಡು ಡೋಸ್ ಲಸಿಕೆ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಇನ್ನು ಯುಎಇ ಸರ್ಕಾರದ Al Hosn ಆ್ಯಪ್‌ನಲ್ಲಿ ಗ್ರೀನ್ ಸ್ಟೇಟಸ್ ಕಡ್ಡಾಯವಾಗಿದೆ.

ಐಪಿಎಲ್‌ 2021: ಪ್ರತಿ ತಂಡದ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?

ಅಬುದಾಬಿಯಲ್ಲೂ ಶಾರ್ಜಾ ನಿಯಮಗಳನ್ನೇ ಜಾರಿಗೆ ತಂದಿದೆ. 12 ರಿಂದ 15 ವರ್ಷದ ಮಕ್ಕಳಿಗೆ ನೆಗಟೀವ್ ವರದಿ ಕಡ್ಡಾಯವಾಗಿದೆ. ಇನ್ನು 12 ವರ್ಷಕ್ಕಿಂತ ಕೆಳಗಿನ ಮಕ್ಕಳು ಪೋಷಕರೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಲು ಮುಕ್ತರಾಗಿದ್ದಾರೆ.