Asianet Suvarna News Asianet Suvarna News

IPL 2021: ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ಗೆದ್ದ ಸಿಎಸ್‌ಕೆ, MIಗೆ ಪೊಲಾರ್ಡ್ ನಾಯಕ!

  • IPL 2021 ಎರಡನೇ ಭಾಗಕ್ಕೆ ದುಬೈನಲ್ಲಿ ಚಾಲನೆ
  • ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ಲೀಗ್ ಪಂದ್ಯ
  • ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್, ಉಭಯ ತಂಡದ ವಿವರ ಇಲ್ಲಿದೆ
  •  
IPL 2021 Chennai Super Kings won toss and opt to bat against Mumbai Indians in Dubai ckm
Author
Bengaluru, First Published Sep 19, 2021, 7:04 PM IST
  • Facebook
  • Twitter
  • Whatsapp

ದುಬೈ(ಸೆ.19): ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ 2021 ಇದೀಗ ದುಬೈನಲ್ಲಿ ಮುಂದುವರಿಯುತ್ತಿದೆ. 2ನೇ ಭಾಗದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

 

ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೆಲ ಬದಲಾವಣಗಳಾಗಿವೆ. ನಾಯಕ ರೋಹಿತ್ ಶರ್ಮಾ ವಿಶ್ರಾಂತಿಗೆ ಜಾರಿದ್ದಾರೆ. ಹೀಗಾಗಿ ಕೀರನ್ ಪೋಲಾರ್ಡ್ ಮುಂಬೈ ಇಂಡಿಯನ್ಸ್ ಮುನ್ನಡೆಸಲಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ಕೂಡ ಇಂದು ಮುಂಬೈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅನ್‌ಮೋಲ್‌ಪ್ರೀತ್ ಪದಾರ್ಪಣೆ ಮಾಡಿದ್ದಾರೆ.

ಚೆನ್ನೈ ತಂಡ:
ರುತುರಾಜ್ ಗಾಯಕ್ವಾಡ್, ಫಾಫ್ ಡುಪ್ಲೆಸಿಸ್, ಮೊಯಿನ್ ಆಲಿ, ಸುರೇಶ್ ರೈನಾ, ಅಂಬಾಟಿ ರಾಯಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್,  ದೀಪಕ್ ಚಹಾರ್ , ಜೋಶ ಹೇಜಲ್‌ವುಡ್ 

ಮುಂಬೈ ತಂಡ:
ಕ್ವಿಟಂನ್ ಡಿಕಾಕ್,  ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಅನ್‌ಮೋಲ್‌ಪ್ರೀತ್ ಸಿಂಗ್, ಕ್ರುನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಸೌರಬ್ ತಿವಾರಿ, ರಾಹುಲ್ ಚಹಾರ್, ಆ್ಯಡಮ್ ಮಿಲ್ನೆ,  ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೋಲ್ಟ್

 ಐಪಿಎಲ್ 2021 ಟೂರ್ನಿಯ 30ನೇ ಲೀಗ್ ಪಂದ್ಯ ಇದಾಗಿದೆ. ಅಂಕಪಟ್ಟಿಯಲ್ಲಿ ಚೆನ್ನೈ 2ನೇ ಸ್ಥಾನದಲ್ಲಿದ್ದರೆ, ಮುಂಬೈ 4ನೇ ಸ್ಥಾನದಲ್ಲಿದೆ. ಚೆನ್ನೈ ಮೊದಲ ಭಾಗದಲ್ಲಿ ಆಡಿದ 7 ಪಂದ್ಯದಲ್ಲಿ 5 ಗೆಲುವು 2 ಸೋಲಿನೊಂದಿಗೆ 10 ಅಂಕ ಸಂಪಾದಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ಆಡಿದ 7 ಪಂದ್ಯದಲ್ಲಿ 4 ಗೆಲುವು 3 ಸೋಲಿನ ಮೂಲಕ 8 ಅಂಕ ಸಂಪಾದಿಸಿದೆ.

ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ 2021 ಟೂರ್ನಿಗೆ ಕೊರೋನಾ ವಕ್ಕರಿಸಿತ್ತು. ಹೀಗಾಗಿ ದಿಢೀರ್ ಟೂರ್ನಿ ಸ್ಥಗಿತಗೊಂಡಿತು. ಬಳಿಕ ಬಿಸಿಸಿಐ ದುಬೈನಲ್ಲಿ ಪಂದ್ಯ ಆಯೋಜಿಸಲು ನಿರ್ಧರಿಸಲಾಯಿತು. ಇದರ ಪ್ರಕಾರ ಐಪಿಎಲ್ 2021ರ ಎರಡನೇ ಬಾಗ ಇದೀಗ ಯುಎಇನಲ್ಲಿ ಆರಂಭಗೊಂಡಿದೆ.

Follow Us:
Download App:
  • android
  • ios