IPL 2021: ಮುಂಬೈ ದಾಳಿಗೆ ತತ್ತರಿಸಿದ ರಾಜಸ್ಥಾನ, ರೋಹಿತ್ ಪಡೆಗೆ ಸುಲಭ ಟಾರ್ಗೆಟ್!
- ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಬ್ಯಾಟಿಂಗ್ ವೈಫಲ್ಯ
- ಮುಂಬೈ ಬೌಲಿಂಗ್ ದಾಳಿಗೆ ಕುಸಿದ ರಾಜಸ್ಥಾನ ರಾಯಲ್ಸ್
- ಮುಂಬೈ ತಂಡಕ್ಕೆ 91 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ
ಶಾರ್ಜಾ(ಅ.5): ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧದ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್(Rajasthan Royals) ಬ್ಯಾಟಿಂಗ್ ಮಕಾಡೆ ಮಲಗಿದೆ. ಇವಿನ್ ಲಿವಿಸ್ ನೀಡಿದ ಅತ್ಯಲ್ಪ ಹೋರಾಟ ಹೊರತು ಪಡಿಸಿದರೆ, ಇತರ ಎಲ್ಲರು ಹೇಳಿಕೊಳ್ಳುವ ರನ್ ಕೂಡ ಗಳಿಸಲಿಲ್ಲ. ಪರಿಣಾಮ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿಕೆಟ್ 9 ನಷ್ಟಕ್ಕೆ 90 ರನ್ ಸಿಡಿಸಿದೆ. ಈ ಮೂಲಕ ಮುಂಬೈ 91 ರನ್ ಟಾರ್ಗೆಟ್(Target) ನೀಡಿದೆ.
IPL 2021ರ ಟೂರ್ನಿಯಲ್ಲಿ ದಾಖಲಾದ ಕನಿಷ್ಠ ಮೊತ್ತ ಅನ್ನೋ ಕುಖ್ಯಾತಿಗೆ ರಾಜಸ್ಥಾನ ರಾಯಲ್ಸ್ ಗುರಿಯಾಗಿದೆ.
ಐಪಿಎಲ್ 2021ರಲ್ಲಿ ದಾಖಲಾದ ಕನಿಷ್ಠ ಮೊತ್ತ:
90/9 ರಾಜಸ್ಥಾನ vs ಮುಂಬೈ, ಶಾರ್ಜಾ
92 ಆರ್‌ಸಿಬಿ vs ಕೆಕೆಆರ್, ಅಬು ಧಾಬಿ
106/8 ಪಂಜಾಬ್ vs ಸಿಎಸ್‌ಕೆ, ಮುಂಬೈ
111 ಮಂಬೈ vs ಆರ್‌ಸಿಬಿ, ದುಬೈ
115/8 ಹೈದರಾಬಾದ್ vs ಕೆಕೆಆರ್, ದುಬೈ
IPL 2021: ಪಂಜಾಬ್ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ
ಮೊದಲು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್(RR) ಡೀಸೆಂಟ್ ಆರಂಭದ ನಿರೀಕ್ಷೆಯಲ್ಲಿತ್ತು. ಇವಿನ್ ಲಿವಿಸ್ ಹಾಗೂ ಯಶಸ್ವಿ ಜೈಸ್ವಾಲ್ 27 ರನ್ ಜೊತೆಯಾಟ ನೀಡಿದರು. ಅಷ್ಟರಲ್ಲೇ ನಥನ್ ಕೌಲ್ಟರ್ ನೈಲ್ ಆಘಾತ ನೀಡಿದರು. ಜೈಸ್ವಾಲ್ 12 ರನ್ ಸಿಡಿಸಿ ಔಟಾದರು. ಇತ್ತ ಲಿವಿಸ್ ಹೋರಾಟ ಮುಂದುವರಿಯಲಿಲ್ಲ. ಬುಮ್ರಾ ದಾಳಿಗೆ ವಿಕೆಟ್ ಒಪ್ಪಿಸಿದರು.
ಇವಿನ್ ಲಿವಿಸ್ 24 ರನ್ ಸಿಡಿಸಿದರೆ, ಜೈಸ್ವಾಲ್ 12 ರನ್ ಸಿಡಿಸಿದರು. ರಾಜಸ್ಥಾನ ಪರ ವೈಯುಕ್ತಿ ಗರಿಷ್ಠ ಮೊತ್ತ ಸಿಡಿಸಿದ ಹೆಗ್ಗಳಿಕೆಗೆ ಲಿವಿಸ್ ಪಾಲಾಗಿದೆ. ನಾಯಕ ಸಂಜು ಸಾಮ್ಸನ್ 3 ರನ್ ಸಿಡಿಸಿ ಔಟಾದರು. ಶಿವಂ ದುಬೆ ಕೂಡ 3 ರನ್ ಸಿಡಿಸಿ ನಿರ್ಗಮಿಸಿದರು. ಗ್ಲೆನ್ ಪಿಲಿಪ್ ಹೋರಾಟ 4 ರನ್‌ಗಳಿಗೆ ಅಂತ್ಯವಾಯಿತು.
IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ಟಿವಾಟಿಯಾ ಜೊತೆಯಾಟ ಐಸಿಯುನಲ್ಲಿದ್ದ ರಾಜಸ್ಥಾನ ತಂಡಕ್ಕೆ ಟಾನಿಕ್ ನೀಡಿತು. ಆದರೆ ತಂಡ ಚೇತರಿಸಿಕೊಳ್ಳುವ ಮೊದಲೇ ಆಕ್ಸಿಜನ್ ಖಾಲಿಯಾಯಿತು. ಮಿಲ್ಲರ್ 15 ರನ್ ಸಿಡಿಸಿ ಔಟಾದರೆ, ಟಿವಾಟಿಯಾ 12 ರನ್ ಸಿಡಿಸಿದರು. ಶ್ರೇಯಸ್ ಗೋಪಾಲ್ ಡಕೌಟ್ ಕಹಿ ಅನುಭವಿಸಿದರು.
ಚೇತನ್ ಸಕಾರಿಯಾ 6 ರನ್ ಸಿಡಿಸಿ ಔಟಾದರು. ಮುಸ್ತಾಫಿಜುರ್ ರೆಹಮಾನ ಅಜೇಯ 8 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 90 ರನ್ ಸಿಡಿಸಿತು. ಮುಂಬೈಗೆ ಸುಲಭ ಗುರಿ ನೀಡಿದೆ
ಅಂಕಪಟ್ಟಿಯಲ್ಲಿ(Points table) ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಉತ್ತಮ ರನ್‌ರೇಟ್ ಹೊಂದಿರುವ ಕಾರಣ 6ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ. ಆದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ ನೀಡಿರುವ ಗುರಿ ಸಾಧಾರಣವಾಗಿದೆ. ಹೀಗಾಗಿ ರಾಜಸ್ಥಾನ ಗೆಲುವಿಗೆ ಮ್ಯಾಜಿಕ್ ಮಾಡಬೇಕಿದೆ.
ರಾಜಸ್ಥಾನ ರಾಯಲ್ಸ್ ಆಡಿದ 12 ಪಂದ್ಯದಲ್ಲಿ 5 ರಲ್ಲಿ ಗೆಲುವು ಕಂಡಿದೆ. ಇದರೊಂದಿಗೆ 10 ಅಂಕ ಪಡೆದಿದೆ. 7 ಪಂದ್ಯದಲ್ಲಿ ರಾಜಸ್ಥಾನ ಮುಗ್ಗರಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ಕೂಡ ಇದೇ ದೋಣಿಯಲ್ಲೇ ಇದೆ. ಆಡಿದ 12ರಲ್ಲಿ 5 ಗೆಲುವು 7 ಸೋಲು ಕಂಡಿದೆ. ಈ ಮೂಲಕ 10 ಅಂಕ ಪಡೆದಿದೆ.
ಇಂದಿನ ಪಂದ್ಯ ಗೆದ್ದ ತಂಡ 12 ಅಂಕಂ ಸಂಪಾದಿಸಲಿದೆ. ಉತ್ತಮ ರನ್‌ರೇಟ್‌ನೊಂದಿಗೆ ಗೆದ್ದರೆ 4ನೇ ಸ್ಥಾನದಲ್ಲಿರುವ ಕೆಕೆಆರ್ ಹಿಂದಿಕ್ಕಲಿದೆ. ಈಗಾಗಲೇ ಪ್ಲೇ ಆಫ್ ಹೋರಾಟಕ್ಕೆ 3 ತಂಡಗಳು ಸ್ಥಾನ ಖಚಿತಪಡಿಸಿದೆ. ಅಂಕಪಟ್ಟಿಯಲ್ಲಿ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್(DC), ಚೆನ್ನೈ ಸೂಪರ್ ಕಿಂಗ್ಸ್(CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಸ್ಥಾನ ಖಚಿಪಡಿಸಿದೆ. ಇನ್ನೊಂದು ಸ್ಥಾನಕ್ಕೆ 4 ತಂಡಗಳು ಹೋರಾಟ ನಡೆಸುತ್ತಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇ ಆಫ್ ಸುತ್ತಿನಿಂದ ಹೊರಬಿದ್ದಿದೆ.