* ಚರ್ಚೆಗೆ ಗ್ರಾಸವಾದ ದೇವದತ್ ಪಡಿಕ್ಕಲ್ ನಾಟೌಟ್ ತೀರ್ಪು * ಶಾರ್ಜಾದಲ್ಲಿ ನಡೆಯುತ್ತಿರುವ ಆರ್‌ಸಿಬಿ-ಪಂಜಾಬ್ ಪಂದ್ಯ
ಶಾರ್ಜಾ(ಅ.03): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿದ ತೀರ್ಪೊಂದು ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಪಂಜಾಬ್ ಸ್ಪಿನ್ನರ್ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal) ಗೆ ಜೀವದಾನ ಸಿಕ್ಕಂತೆ ಆಗಿದೆ.
ಹೌದು, ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿದ ತೀರ್ಪು ಚರ್ಚೆ ಹುಟ್ಟುಹಾಕಿದೆ. ಪಂದ್ಯದ 8ನೇ ಓವರ್ ದಾಳಿಗಿಳಿದ ರವಿ ಬಿಷ್ಣೋಯಿ (Ravi Bishnoi) ಬೌಲಿಂಗ್‌ನಲ್ಲಿ ಪಡಿಕ್ಕಲ್ ರಿವರ್ಸ್ ಸ್ವೀಪ್ ಮಾಡುವ ಯತ್ನ ನಡೆಸಿದರು. ಬಿಷ್ಣೋಯಿ ಗೂಗ್ಲಿ ಗ್ರಹಿಸುವಲ್ಲಿ ಪಡಿಕ್ಕಲ್ ವಿಫಲರಾದರು. ಚೆಂಡು ಪಡಿಕ್ಕಲ್ ಗ್ಲೌಸ್ ಸವರಿ ವಿಕೆಟ್ ಕೀಪರ್ ರಾಹುಲ್ ಕೈ ಸೇರಿತು. ಔಟ್‌ಗೆ ಮನವಿ ಸಲ್ಲಿಸಿದರೂ ಆನ್ ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ತಡಮಾಡದ ರಾಹುಲ್ ಡಿಆರ್‌ಎಸ್ ಮೊರೆ ಹೋದರು.
IPL 2021: ಪಂಜಾಬ್ ಕಿಂಗ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ
ಥರ್ಡ್ ಅಂಪೈರ್ ರಿಪ್ಲೇ ನೋಡಿದಾಗ ಚೆಂಡು ಪಡಿಕ್ಕಲ್ ಗ್ಲೌಸ್ ಸವರಿ ರಾಹುಲ್ ಕೈಸೇರಿದ್ದು ಸ್ಪಷ್ಟವಾಗಿದ್ದರೂ ಸಹಾ ಅಂಪೈರ್ ನಾಟೌಟ್ ನೀಡಿದರು. ಇದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಯಾರೆಲ್ಲಾ ಏನಂದ್ರು ಇಲ್ಲಿದೆ ನೋಡಿ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಓವರ್ ಅಂತ್ಯದ ವೇಳೆಗೆ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 73 ರನ್ ಬಾರಿಸಿದೆ
