IPL 2021: ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರೂ ಮುಂಬೈ ಪ್ಲೇ ಆಫ್ ಕನಸು ಭಗ್ನ!
- ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 42 ರನ್ ಗೆಲುವು
- ಬೃಹತ್ ಟಾರ್ಗೆಟ್ ಚೇಸ್ ಮಾಡಲು ಹೈದರಾಬಾದ್ ವಿಫಲ
- ಕೆಕೆಆರ್ ನೆಟ್‌ರನ್ ರೇಟ್ ಹಿಂದಿಕ್ಕಿಲು ಮುಂಬೈ ವಿಫಲ
- ಕೆಕೆಆಪ್ ಪ್ಲೇ ಆಫ್ ಸ್ಥಾನ ಖಚಿತ, ಮುಂಬೈ ಔಟ್
ಅಬು ಧಾಬಿ(ಅ.08): IPL 2021 ಟೂರ್ನಿಯಿಂದ ಮುಂಬೈ ಇಂಡಿಯನ್ಸ್(Mumbai Indians) ಹೊರಬಿದ್ದಿದೆ. ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ಹಾಗೂ ಗರಿಷ್ಠ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್, ಈ ಬಾರಿ ಲೀಗ್ ಹಂತದಿಂದಲೇ ಹೊರಬಿದ್ದಿದೆ. ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಮುಂಬೈ 42 ರನ್ ಭರ್ಜರಿ ಗೆಲುವು ದಾಖಲಿಸಿದರೂ ಪ್ಲೇ ಆಫ್(Playoff) ಕನಸು ಭಗ್ನಗೊಂಡಿದೆ.
IPL 2021: ಅಂತಿಮ ಎಸೆತದಲ್ಲಿ ಸಿಕ್ಸರ್, ಡೆಲ್ಲಿ ವಿರುದ್ಧ RCBಗೆ ರೋಚಕ ಗೆಲುವು!
ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್(KKR) ತಂಡದ ನೆಟ್‌ರನ್ ರೇಟ್ ಹಿಂದಿಕ್ಕಿಸಲು ಸಾಧ್ಯವಾಗದ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಪ್ರದರ್ಶದೊಂದಿಗೆ ಈ ಬಾರಿಯ ಐಪಿಎಲ್(IPL) ಟೂರ್ನಿಯನ್ನು ಅಂತ್ಯಗೊಳಿಸಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್(SRH) ತಂಡ ಮತ್ತೊಂದು ಸೋಲಿನೊಂದಿಗೆ ಸೋಲಿನ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಿದೆ.
ಗೆಲುವಿಗೆ 236 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆಯಿತು. ಜೇಸನ್ ರಾಯ್ ಹಾಗೂ ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 64 ರನ್ ಜೊತೆಯಾಟ ನೀಡಿದರು. ಜೇಸನ್ ರಾಯ್ 34 ರನ್ ಸಿಡಿಸಿ ಔಟಾದರು.
IPL 2021: ಅತೀವೇಗದಲ್ಲಿ ಅರ್ಧಶತಕ, ದಾಖಲೆ ಬರೆದ ಇಶಾನ್ ಕಿಶನ್!
ಕೇವಲ 16 ಎಸೆತದಲ್ಲಿ 33 ರನ್ ಸಿಡಿಸಿದ ಅಭಿಶೇಕ್ 33 ರನ್ ಸಿಡಿಸಿ ಔಟಾದರು. ನಾಯಕ ಮನೀಶ್ ಪಾಂಡೆ ತಂಡದ ಜವಾಬ್ದಾರಿ ಹೊತ್ತುಕೊಂಡರು. ಆದರೆ ಮೊಹಮ್ಮದ್ ನಬಿ ಹಾಗೂ ಅಬ್ದುಲ್ ಸಮಾದ್ ವಿಕೆಟ್ ಪತನ ಮತ್ತೆ ಹೈದರಾಬಾದ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.
ನಬಿ 3 ರನ್‌ಗೆ ಔಟಾದರೆ, ಸಮಾದ್ 2 ರನ್ ಸಿಡಿಸಿ ನಿರ್ಗಮಿಸಿದರು. ಮನೀಶ್ ಪಾಂಡೆ ಹಾಗೂ ಪ್ರಿಯಂ ಗರ್ಗ್ ಹೋರಾಟ ನೀಡಿದರು. ಆದರೆ ಜೇಸನ್ ಹೋಲ್ಡರ್, ರಶೀದ್ ಖಾನ್ ಹಾಗೂ ವೃದ್ಧಿಮಾನ್ ಸಾಹ ನೆರವಾಗಲಿಲ್ಲ. ಹೀಗಾಗಿ 20 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 193 ರನ್ ಸಿಡಿಸಿತು.
ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!
ಮುಂಬೈ ಇಂಡಿಯನ್ಸ್ 42 ರನ್ ಭರ್ಜರಿ ಗೆಲುವು ಸಾಧಿಸಿತು. ಆದರೆ ಈ ಅಂತರ ಮುಂಬೈ ನೆಟ್‌ರನ್ ರೇಟ್ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಕೋಲ್ಕತಾ ನೈಟ್ ರೈಡರ್ಸ್ ನೆಟ್‌ರನ್ ರೇಟ್ ಹಿಂದಿಕ್ಕಿಲು ಸಾಧ್ಯವಾಗಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ಲೀಗ್ ಹಂತದಿಂದ ಹೊರಬಿತ್ತು.
ಕೋಲ್ಕತಾ ನೈಟ್ ರೈಡರ್ಸ್ ಪ್ಲೇ ಆಫ್ ಸ್ಥಾನವನ್ನು ಅಧಿಕೃತಗೊಳಿಸಿತು. ಮುಂಬೈ ಇಂಡಿಯನ್ಸ್ 14 ಪಂದ್ಯದಲ್ಲಿ 7 ಗೆಲುವು 7 ಸೋಲಿನೊಂದಿಗೆ 14 ಅಂಕ ಸಂಪಾದಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿತು.