Asianet Suvarna News Asianet Suvarna News

IPL 2021: ಅಂತಿಮ ಎಸೆತದಲ್ಲಿ ಸಿಕ್ಸರ್, ಡೆಲ್ಲಿ ವಿರುದ್ಧ RCBಗೆ ರೋಚಕ ಗೆಲುವು!

  • ಡೆಲ್ಲಿ ಕ್ಯಾಪಿಟಲ್ಸ್  ಬೆಂಗಳೂರಿಗೆ ರೋಚಕ ಗೆಲುವು
  • ಅಂತಿಮ ಎಸೆತದಲ್ಲಿ ಸಿಕ್ಸರ್ ಮೂಲಕ ಗೆಲುವು
  • ಎಸ್ ಭರತ್ ಸ್ಫೋಟಕ ಬ್ಯಾಟಿಂಗ್
IPL 2021 Srikar Bharat last ball sixer help RCB to beat Delhi capitals by 7 wickets ckm
Author
Bengaluru, First Published Oct 8, 2021, 11:21 PM IST

ದುಬೈ(ಅ.08): IPL 2021 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Chellengers Bengaluru) ತಂಡ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧ 7 ವಿಕೆಟ್ ರೋಚಕ ಗೆಲುವು ಕಂಡಿದೆ. ಅಂತಿಮ ಎಸೆತದಲ್ಲಿ ಎಸ್ ಭರತ್(S Bharat) ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ಬೆಂಗಳೂರು ತಂಡ ರೋಚಕ ಗೆಲುವು ಕಂಡಿತು. ಇದರೊಂದಿಗೆ 18 ಅಂಕ ಸಂಪಾದಿಸಿತು. ಆದರೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಉಳಿದೊಂಡಿದೆ.

IPL 2021: ಅತೀವೇಗದಲ್ಲಿ ಅರ್ಧಶತಕ, ದಾಖಲೆ ಬರೆದ ಇಶಾನ್ ಕಿಶನ್!

ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತ್ತು. ಸ್ಪರ್ಧಾತ್ಮಕ ಟಾರ್ಗೆಟ್(Target) ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ವಿರಾಟ್ ಕೊಹ್ಲಿ(Virat Kohli) ಹಾಗೂ ದೇವದತ್ ಪಡಿಕ್ಕಲ್ ಬಹುಬೇಗನೆ ವಿಕೆಟ್ ಒಪ್ಪಿಸಿದರು.

ಪಡಿಕ್ಕಲ್ ಶೂನ್ಯಕ್ಕೆ ಔಟಾದರು. ಇತ್ತ ವಿರಾಟ್ ಕೊಹ್ಲಿ 4 ರನ್ ಸಿಡಿಸಿ ಔಟಾದರು. ಆರಂಭಿಕರ ವಿಕೆಟ್ ಪತನದಿಂದ ಆರ್‌ಸಿಬಿ ತಂಡ ಒತ್ತಡದಲ್ಲಿ ಸಿಲುಕಿತು. ಆದರೆ ಎಸ್ ಭರತ್ ಹಾಗೂ ಎಬಿ ಡಿವಿಲಿಯರ್ಸ್ ಹೋರಾಟದಿಂದ ಬೆಂಗಳೂರು ತಂಡ ಚೇತರಿಸಿಕೊಂಡಿತು.

ಎಬಿ ಡಿವಿಲಿಯರ್ಸ್ 26 ಎಸೆತದಲ್ಲಿ 26 ರನ್ ಸಿಡಿಸಿ ನಿರ್ಗಮಿಸಿದರು. ಹೋರಾಟ ಮುಂದುವರಿಸಿದ ಭರತ್(S Bharat) ಆಕರ್ಷ ಹಾಫ್ ಸೆಂಚುರಿ ಸಿಡಿಸಿದರು. ಭರತ್ ಜೊತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 

ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ 18 ಎಸೆತದಲ್ಲಿ 31 ರನ್ ಅವಶ್ಯಕತೆ ಇತ್ತು. ಅಂತಿಮ ಹಂತದಲ್ಲಿ ಪಂದ್ಯ ಮತ್ತಷ್ಟು ರೋಚಕ ಘಟ್ಟ ತಲುಪಿತು. ಭರತ್ ಹಾಗೂ ಮ್ಯಾಕ್ಸ್‌ವೆಲ್ ಹೋರಾಟದಿಂದ ಆರ್‌ಸಿಬಿ ದಿಟ್ಟ ಹೋರಾಟ ನೀಡಿತು. ಆದರೆ ಅಂತಿಮ 1 ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ 6 ರನ್ ಬೇಕಿತ್ತು.

ಎಸ್ ಭರತ್ ಭರ್ಜರಿ ಸಿಕ್ಸರ್ ಸಿಡಿಸಿ ಬೆಂಗಳೂರು ತಂಡಕ್ಕೆ 7 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಭರತ್ ಅಜೇಯ 78 ರನ್ ಸಿಡಿಸಿದರೆ, ಮ್ಯಾಕ್ಸ್‌ವೆಲ್ ಅಜೇಯ 51 ರನ್ ಸಿಡಿಸಿದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ ರೋಚಕ ಗೆಲುವು ಕಂಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಮೂಲಕ ಲೀಗ್ ಹಂತದ ಪಂದ್ಯಗಳು ಅಂತ್ಯಗೊಂಡಿತು. IPL 2021ರ ಲೀಗ್ ಟೂರ್ನಿಯಲ್ಲಿ ಬೆಂಗಳೂರು ತಂಡ 14 ಪಂದ್ಯದಲ್ಲಿ 9 ಗೆಲುವು ಹಾಗೂ 5 ಸೋಲಿನ ಮೂಲಕ 18 ಅಂಕ ಸಂಪಾದಿಸಿತು.

IPL 2021 - ಗ್ಲಾಮರ್‌ ಹರಡುತ್ತಿರುವ ಯುಜ್ವೇಂದ್ರ ಚಾಹಲ್ ಪತ್ನಿ!

ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಸ್ಥಾನದಲ್ಲಿ ಉಳಿಯಿತು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಸೋತರು ಮೊದಲ ಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನು 2ನೇ ಸ್ಥಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ಆಕ್ರಮಿಸಿಕೊಂಡಿದೆ. 4ನೇ ಸ್ಥಾನವನ್ನು ಕೋಲ್ಕತಾ ನೈಟ್ ರೈಡರ್ಸ್ ಖಚಿತಪಡಿಸಿಕೊಂಡಿದೆ.

Follow Us:
Download App:
  • android
  • ios