ಮುಂಬೈ(ಏ.10); ಕೊರೋನಾ ಆತಂಕದ ನಡುವೆ 14ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಮೊದಲ ಚರಣದ ಪಂದ್ಯಗಳನ್ನು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೋಹಿತ್ ಶರ್ಮಾ ನೇೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದರ ಈ ಪಂದ್ಯಕ್ಕೆ ಅಭಿಮಾನಿಗಳ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಸೇರಿದಂತೆ ಕೆಲ ಕ್ರಿಕೆಟ್ ಸಂಸ್ಥೆಗಳು ಅಭಿಮಾನಿಗಳ ಪ್ರವೇಶಕ್ಕೆ ಒಪ್ಪಿಗೆ ನೀಡಿವೆ.

IPL 2021: ಎಬಿಡಿ ಆಟಕ್ಕೆ ಮತ್ತೊಮ್ಮೆ ಮನಸೋತ ವಿರೇಂದ್ರ ಸೆಹ್ವಾಗ್..!.

ಮುಂಬೈನ ವಾಂಖೆಡೆಯಲ್ಲಿ ಆಯೋಜಿಸಲಾಗುವು ಐಪಿಎಲ್ ಟೂರ್ನಿ ಪಂದ್ಯಗಳಿಗೆ ಅಭಿಮಾನಿಗಳ ಪ್ರವೇಶ ಕುರಿತು ಮುಂಬೈ ಕ್ರಿಕೆಟ್ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ವಾಂಖೆಡೆ ಪಂದ್ಯಕ್ಕೆ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದಿದೆ. ಶೇಕಡಾ 50 ರಷ್ಟು ಅಭಿಮಾನಿಳಿಗೆ ಅವಕಾಶ ನೀಡಲಾಗುವುದು. ಆದರೆ ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳು ಕೊರೋನಾ ನೆಗಟೀವ್ ರಿಪೋರ್ಟ್ ತರಬೇಕು ಅನ್ನೋ ಕಂಡೀಷನ್ ಹಾಕಿದೆ.

ಡಿವಿಲಿಯರ್ಸ್ ಅಬ್ಬರಕ್ಕೆ ಮುಂಬೈ ಧೂಳೀಪಟ: 14ನೇ ಆವೃತ್ತಿಯಲ್ಲಿ ಆರ್‌ಸಿಬಿ ಶುಭಾರಂಭ!

48 ಗಂಟೆಗಳು ಮೀರದ ಕೊರೋನಾ ನೆಗಟೀವ್ ರಿಪೋರ್ಟ್ ಇದ್ದರೆ ಮಾತ್ರ ಐಪಿಎಲ್ ನೋಡಲು ಅವಕಾಶವಿದೆ. ಇಲ್ಲಿ ಕೊರೋನಾ ಲಸಿಕೆ ಪಡೆದುಕೊಂಡಿರುವ ಸರ್ಟಿಫಿಕೇಟ್ ತೋರಿಸಿ ಒಳ ಪ್ರವೇಶಿಸಲು ಸಾಧ್ಯವಿಲ್ಲ. ಲಸಿಕೆ ಪಡೆದವರೂ ನೆಗಟೀವ್ ರಿಪೋರ್ಟ್ ತರುವುದು ಅನಿವಾರ್ಯ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಹೇಳಿದೆ.