ಐಪಿಎಲ್ ಯಶಸ್ವಿ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 200ನೇ ಬಾರಿಗೆ ಮುನ್ನಡೆಸಿದ ಸಾಧನೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.20): ಎಂ.ಎಸ್‌.ಧೋನಿ ಸೋಮವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ನಾಯಕತ್ವ ವಹಿಸುವ ಮೂಲಕ, ಟಿ20 ಮಾದರಿಯಲ್ಲಿ 200ನೇ ಬಾರಿಗೆ ಚೆನ್ನೈ ಸೂಪರ್‌ಕಿಂಗ್ಸ್‌ ತಂಡವನ್ನು ಮುನ್ನಡೆಸಿದರು. 

ಟಿ20ಯಲ್ಲಿ ತಂಡವೊಂದನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ಮೊದಲ ನಾಯಕ ಎನ್ನುವ ದಾಖಲೆಯನ್ನು ಧೋನಿ ಬರೆದಿದ್ದಾರೆ. ಸಿಎಸ್‌ಕೆ ಪರ ಐಪಿಎಲ್‌ ಹಾಗೂ ಚಾಂಪಿಯನ್ಸ್‌ ಲೀಗ್‌ನಲ್ಲಿ ಎಂ.ಎಸ್. ಧೋನಿ ಆಡಿದ್ದಾರೆ. 2012ರಲ್ಲಿ ಒಂದು ಪಂದ್ಯದಲ್ಲಿ ಸುರೇಶ್‌ ರೈನಾ ನಾಯಕತ್ವದಲ್ಲಿ ಧೋನಿ ಆಡಿದ್ದರು.

ಧೋನಿ ನಾಯಕತ್ವದಲ್ಲಿ ಚೆನ್ನೈ, 3 ಬಾರಿ ಐಪಿಎಲ್‌ ಹಾಗೂ 2 ಬಾರಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಟ್ರೋಫಿ ಗೆದ್ದಿದೆ. 2016, 17ರಲ್ಲಿ ಚೆನ್ನೈ 2 ವರ್ಷಗಳ ನಿಷೇಧ ಅನುಭವಿಸಿದಾಗ ಧೋನಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡರ ಪರ ಒಟ್ಟು 30 ಐಪಿಎಲ್‌ ಪಂದ್ಯಗಳನ್ನು ಆಡಿದ್ದರು.

ಧೋನಿ ತಂತ್ರಕ್ಕೆ ತಲೆಬಾಗಿದ ಸ್ಯಾಮ್ಸನ್; ರಾಜಸ್ಥಾನ ವಿರುದ್ಧ CSKಗೆ 45 ರನ್ ಗೆಲುವು!

ಇನ್ನು ಟಿ20 ಪಂದ್ಯದಲ್ಲಿ ಚೆನ್ನೈ ಸೂಪರ್‌ಗೆ ಕಿಂಗ್ಸ್‌ಗೆ ಧೋನಿ ತನ್ನ ಚಾಣಾಕ್ಷ ನಾಯಕತ್ವದ ಮೂಲಕ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಮೊದಲು ಬ್ಯಾಟ್‌ ಮಾಡಿದ ಚೆನ್ನೈ 9 ವಿಕೆಟ್ ಕಳೆದುಕೊಂಡು 188 ರನ್‌ ಕಲೆಹಾಕಿತ್ತು. ಇದಕ್ಕುತ್ತರವಾಗಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್‌ ತಂಡವನ್ನು ಕೇವಲ 143 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಚೆನ್ನೈ 45 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.